ಕೊರೊನಾ ಮಧ್ಯೆಯೇ ಸಿಂಪಲ್ ಆಗಿ ನೆರವೇರಿದ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಮದುವೆ

|

Updated on: Apr 22, 2021 | 6:58 PM

ಸಾಮಾಜಿಕ ಜಾಲತಾಣದಲ್ಲಿ ಇವರ  ಮದುವೆ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಫೋಟೋ ನೋಡಿದ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯಗಳ ಮಳೆ ಹರಿಸಿದ್ದಾರೆ.

ಕೊರೊನಾ ಮಧ್ಯೆಯೇ ಸಿಂಪಲ್ ಆಗಿ ನೆರವೇರಿದ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಮದುವೆ
ವಿಷ್ಣು ವಿಶಾಲ್​-ಜ್ವಾಲಾ ಗುಟ್ಟಾ
Follow us on

ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹಾಗೂ ತಮಿಳು ನಟ ಮತ್ತು ನಿರ್ಮಾಪಕ ವಿಷ್ಣು ವಿಶಾಲ್ ಇಂದು (ಏಪ್ರಿಲ್ 22) ಹಸೆಮಣೆ ಏರಿದ್ದಾರೆ. ಇಬ್ಬರ ವಿವಾಹ ಸಮಾರಂಭ ಹೈದರಾಬಾದ್‌ನಲ್ಲಿ ನಡೆದಿದೆ. ಈ ಜೋಡಿಯ ವಿವಾಹ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೊರೊನಾ ವೈರಸ್​ ಹೆಚ್ಚುತ್ತಿರುವುದರಿಂದ ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಕುಟುಂಬದವರು ಮತ್ತು ಆಪ್ತರು ಮಾತ್ರ ಪಾಲ್ಗೊಂಡಿದ್ದರು.

ದಕ್ಷಿಣ ಭಾರತದ ಸಂಪ್ರದಾಯದ ಪ್ರಕಾರ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಮದುವೆ ನೆರವೇರಿದೆ. ಮದುವೆಯನ್ನು ಅದ್ದೂರಿಯಾಗಿ ನಡೆಸಲು ಈ ಜೋಡಿ ನಿಶ್ಚಯಿಸಿತ್ತು. ಆದರೆ, ಕರೊನಾ ವೈರಸ್ ಹೆಚ್ಚುತ್ತಿರುವ ಕಾರಣದಿಂದಾಗಿ ಈ ವಿವಾಹ ಸಮಾರಂಭಕ್ಕೆ ಅತಿಥಿಗಳ ಮಿತಿ ಹೇರಲಾಗಿತ್ತು. ಹೀಗಾಗಿ ಮದುವೆ ಸರಳವಾಗಿ ನೆರವೇರಿದೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಇವರ  ಮದುವೆ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಫೋಟೋ ನೋಡಿದ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯಗಳ ಮಳೆ ಹರಿಸಿದ್ದಾರೆ. ವಿಷ್ಣು ಅವರ ಮೊದಲನೇ ಹೆಂಡತಿಯಿಂದ ಒಬ್ಬ ಮಗನಿದ್ದಾನೆ. ಅಚ್ಚರಿ ಎಂದರೆ, ವಯಸ್ಸಿನಲ್ಲಿ ವಿಷ್ಣು ಅವರು ಜ್ವಾಲಾಗಿಂತ ಎರಡು ವರ್ಷ ಚಿಕ್ಕವರು. 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಜ್ವಾಲಾ ಆರನೇ ವಯಸ್ಸಿನಿಂದಲೇ ಬ್ಯಾಡ್ಮಿಂಟನ್ ಆಡುವುದನ್ನು ಶುರು ಮಾಡಿದ್ದರು. ಆಕೆಯ ತಾಯಿ ಯೆಲೆನ್ ಗುಟ್ಟಾ ಭಾರತೀಯರಲ್ಲ, ಚೀನಾ ಮೂಲದವರು. ಯೆಲೆನ್ರ ತಾತಾ, ತ್ಸೆಂಗ್ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ, 1971 ರಲ್ಲಿ ಭಾರತಕ್ಕೆ ಬಂದಿದ್ದವರು, ಗಾಂಧಿಯವರ ಆತ್ಮಚರಿತ್ರೆಯನ್ನು ತಮ್ಮೊಂದಿಗೆ ಕೊಂಡೊಯ್ದು ಚೀನಾ ಭಾಷೆಗೆ ಅನುವಾದಿಸಿದರು.

 

ಇದನ್ನೂ ಓದಿ: KGF Release Date: ಕೆಜಿಎಫ್-2 ಬಿಡುಗಡೆಗೆ ಕೊರೊನಾ ಅಡ್ಡಗಾಲು; ರಿಲೀಸ್​ ದಿನಾಂಕ ಮುಂದೂಡೋದು ಖಚಿತ?

ಪ್ರಭಾಸ್, ರಾಮ್​ ಚರಣ್​, ಮಹೇಶ್​ ಬಾಬು​ ಕ್ವಾರಂಟೈನ್​; ಟಾಲಿವುಡ್​ನಲ್ಲಿ ಹೆಚ್ಚಾಯ್ತು ಕೊರೊನಾ ಕಾಟ