ಟೀಂ ಇಂಡಿಯಾ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಇಂದು (ಡಿಸೆಂಬರ್ 18) ನಿವೃತ್ತಿ ಘೋಷಣೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾ ತೆರಳಿದ್ದ ಅವರು, ಸರಣಿಯಲ್ಲಿ ಎರಡು ಪಂದ್ಯ ಬಾಕಿ ಇರುವಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಮಧ್ಯೆ ಅವರ ಬಯೋಪಿಕ್ ವಿಚಾರ ಚರ್ಚೆಗೆ ಬಂದಿದೆ. ಅಶ್ವಿನ್ ಬಗ್ಗೆ ಬಯೋಪಿಕ್ ಮಾಡಲು ಸಿದ್ಧತೆ ನಡೆದಿತ್ತಾ? ಹೀಗೊಂದು ಚರ್ಚೆ 2021ರಲ್ಲಿ ನಡೆದಿತ್ತು. ಆ ಬಗ್ಗೆ ಇಲ್ಲಿದೆ ವಿವರ.
ಕ್ರಿಕೆಟರ್ಗಳು, ರಾಜಕಾರಣಿಗಳು, ಸ್ವಾಂತಂತ್ರ್ಯ ಹೋರಾಟಗಾರರು ಸೇರಿದಂತೆ ಅನೇಕ ಗಣ್ಯರ ಮೇಲೆ ಬಯೋಪಿಕ್ ಮಾಡುವ ಟ್ರೆಂಡ್ ಜೋರಾಗಿದೆ. ಕ್ರಿಕೆಟರ್ಗಳಾದ ಎಂಎಸ್ ಧೋನಿ, ಮುತ್ತಯ್ಯ ಮುರಳೀಧರನ್ ಸೇರಿದಂತೆ ಅನೇಕ ಕ್ರಿಕೆಟರ್ಗಳ ಮೇಲೆ ಬಯೋಪಿಕ್ ಮಾಡಲಾಗಿದೆ. 2021ರಲ್ಲೂ ಆರ್. ಅಶ್ವಿನ್ ಮೇಲೆ ಬಯೋಪಿಕ್ ಮಾಡಲಾಗುತ್ತದೆ ಎಂದು ವರದಿ ಆಗಿತ್ತು. ಅಶ್ವಿನ್ ಜೊತೆ ಧೋನಿ ಪಾತ್ರವೂ ಇದರಲ್ಲಿ ಹೈಲೈಟ್ ಆಗಲಿದೆ ಎಂದು ಹೇಳಲಾಗಿತ್ತು.
ನಟ ಅಶೋಕ್ ಸೆಲ್ವನ್ ಅವರು ತಮಿಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇವರು ಆರ್.ಅಶ್ವಿನ್ ಬಯೋಪಿಕ್ನಲ್ಲಿ ನಟಿಸುತ್ತಾರೆ ಎಂದು ವರದಿ ಆಗಿತ್ತು. ಇಷ್ಟೇ ಅಲ್ಲ ಕೆಲವರು ಅಶೋಕ್ ಸೆಲ್ವನ್ ಫೋಟೋಗೆ ಇಂಡಿಯನ್ ಜೆರ್ಸಿ ಹಾಕಿರುವ ಫೋಟೋನ ಹರಿಬಿಟ್ಟಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
Idharku naan poruppu illai enbadhai therivithu Kolgiraen 😂 @ashwinravi99 https://t.co/rA6LCwJhTM
— Ashok Selvan (@AshokSelvan) May 29, 2021
ಈ ವದಂತತಿ ಬಗ್ಗೆ ಅಶೋಕ್ ಸೆಲ್ವನ್ ಸ್ಪಷ್ಟನೆ ಕೊಟ್ಟಿದ್ದರು. ‘ನಾನು ಇದಕ್ಕೆ ಜವಾಬ್ದಾರನಲ್ಲ’ ಎಂದಿದ್ದರು. ಈ ಮೂಲಕ ಅಶೋಕ್ ಈ ವದಂತಿಗೆ ಸ್ಪಷ್ಟನೆ ನೀಡಿದ್ದರು. ಈ ಟ್ವೀಟ್ಗೆ ಅಶ್ವಿನ್ ಕೂಡ ಉತ್ತರಿಸಿ ನಕ್ಕಿದ್ದರು. ಈ ವಿಚಾರ ಕೇಳಿ ಅಶ್ವಿನ್ ಫ್ಯಾನ್ಸ್ ಬೇಸರಗೊಂಡಿದ್ದರು.
ಇದನ್ನೂ ಓದಿ: ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿಯಲ್ಲಿ 14 ವರ್ಷ ಕಳೆದಿದ್ದಾರೆ. ಎರಡು ಟೆಸ್ಟ್ಗಳು ಬಾಕಿ ಇರುವಾಗಲೇ ರೋಹಿತ್ ಶರ್ಮಾ ಜೊತೆ ಸುದ್ದಿಗೋಷ್ಠಿಗೆ ಆಗಮಿಸಿದ ಅಶ್ವಿನ್ ಅವರು ನಿವೃತ್ತಿ ಘೋಷಣೆ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:24 pm, Wed, 18 December 24