
ಚಾರ್ಲಿ ಚಾಪ್ಲಿನ್: ನಾಲ್ಕು ಮದುವೆಗಳು… ಕೊನೆಯಿಲ್ಲದ ಕಷ್ಟಗಳು… ತಿನ್ನಲು ಅನ್ನವೂ ಇಲ್ಲದ ಬಡತನ… ಬಾಲ್ಯದಲ್ಲಿ ಕಣ್ಣೀರನ್ನು ರೆಪ್ಪೆಗಳ ಕೆಳಗೆ ಬಚ್ಚಿಟ್ಟುಕೊಳ್ಳುವ ಅಭ್ಯಾಸವಿತ್ತು. ಹಸಿವನ್ನು ನೀಗಿಸಲು ನೀರು ನೆರವಿಗೆ ಬರುತ್ತದೆ ಎಂಬ ತತ್ವವನ್ನು ಆ ಕಾಲದಿಂದಲೂ ಕಲಿಸಲಾಗಿದೆ. ಆತನಿಗೂ ಅವೇ ಜೀವನದ ಪಾಠಗಳಾಗಿದ್ದವು. ಕಣ್ಣೀರಿನ ಮೌಲ್ಯ… ಅದು ತಂದೊಡ್ಡುವ ಸಂಕಟವನ್ನು ನಿರಂತರವಾಗಿ ಅನುಭವಿಸಿದ.. ಆ ಸಂಕ್ಷೋಭೆಗಳ ನಡುವೆಯೇ ಮುಂದೆ ನಗುವಿನ ನಟನಾಗಿ, ಸಾಮ್ರಾಟನಾಗಿ ಈ ಜಗತ್ತಿಗೆ ತನ್ನನ್ನು ಪರಿಚಯಿಸಿಕೊಂಡ. ಮೂಕಿ ಚಿತ್ರಗಳಲ್ಲಿ ತಮ್ಮ ಹಾವಭಾವದಿಂದ ನವರಸವನ್ನು ಚಿಮ್ಮಿಸಿ ನೋಡುಗರಿಗೆ ಸಂತಸವನ್ನಷ್ಟೇ ಪಸರಿಸಿದ. ಆನಂದ ಅನುಭವಿಸಲು ಮನದ ಭಾಷೆ ಇದ್ದರೆ ಸಾಕು ಎಂದು ಸಾದರ ಪಡಿಸಿದ ಅವರು, ಈ ಜಗತ್ತಿನಲ್ಲಿ ನಗುವಿನ ರಾಜ ಎಂದು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಆತ ಬೇರೆ ಯಾರೂ ಅಲ್ಲ ವಿಶ್ವವಿಖ್ಯಾತ ನಟ. ಚಾರ್ಲಿ ಚಾಪ್ಲಿನ್ ಒಬ್ಬ ಪ್ರಸಿದ್ಧ ಹಾಸ್ಯನಟ, ಬಹು-ಪ್ರತಿಭಾವಂತ, ಲೇಖಕ, ಗಾಯಕ, ಶಾಂತಿಪ್ರಿಯ, ಯಾವಾಗಲೂ ಯುದ್ಧವನ್ನು ಟೀಕಿಸುತ್ತಿದ್ದ. ಒಂದೆಡೆ, ಬೆಳ್ಳಿ ಪರದೆಯ ಮೇಲೆ ರಾರಾಜಿಸುತ್ತಿದ್ದರೆ, ಅದೇ ಬೆಳ್ಳಿ ಪರದೆಯ ಹಿಂದೆ ಅಂದರೆ ತನ್ನ ಬದುಕಿನಲ್ಲಿ ಕರಾಳ ಜೀವನ ನಡೆಸಿದ. ವೈಯಕ್ತಿಕ ಜೀವನವು ವೈವಾಹಿಕ ಯಡವಟ್ಟುಗಳಿಂದಾಗಿ ಏಳುಬೀಳುಗಳೊಂದಿಗೆ ಸಾಗುತ್ತಾ ಇತ್ತು. ಅದರಿಂದಾಗಿಯೇ ನಾಲ್ಕು ಮದುವೆಗಳು ಮತ್ತು 11 ಮಕ್ಕಳೊಂದಿಗೆ ಚಾಪ್ಲಿನ್ ಅವರ ಜೀವನವು ವಿವಾದಾತ್ಮಕ ಗೂಡಾಗಿತ್ತು. ಆತನ ಬದುಕಿನ ಪ್ರತಿ ಹೆಜ್ಜೆಯೂ ವಿಶೇಷವಾಗಿಯೇ ಇತ್ತು. ಕೆಲವೊಮ್ಮೆ ಪ್ರವಾಹದ ವಿರುದ್ಧವಾಗಿ ಈಜಿದರು. ಮತ್ತು ಕೆಲವೊಮ್ಮೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು. ಇನ್ನೂ ಕೆಲವು ಬಾರಿ ಜೀವನದಲ್ಲಿ ಸ್ವತಃ ತಮ್ಮನ್ನು ತಾವೇ ಗಾಢವಾಗಿ ಆವರಿಸಿಕೊಂಡುಬಿಟ್ಟರು....
Published On - 9:06 pm, Fri, 21 June 24