
ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 550 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಸಿನಿಮಾ ತಮಿಳಿನ ಮೊಟ್ಟ ಮೊದಲ 1000 ಕೋಟಿ ಸಿನಿಮಾ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದಕ್ಕೆ ದೊಡ್ಡ ತೊಡಕು ಎದುರಾಗಿದೆ. ‘ಜೈಲರ್ 2’ ಸಿನಿಮಾ, ಉತ್ತರ ಭಾರತದ ಪಿವಿಆರ್ ಮತ್ತು ಐನಾಕ್ಸ್ ಹಾಗೂ ಇನ್ನೂ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯೇ ಆಗಿಲ್ಲ.
ದಕ್ಷಿಣ ಭಾರತದಲ್ಲಿ ಪಿವಿಆರ್-ಐನಾಕ್ಸ್ ಮತ್ತು ಇತರೆ ಮಲ್ಟಿಪ್ಲೆಕ್ಸ್ಗಳಲ್ಲಿ ‘ಜೈಲರ 2’ ರಿಲೀಸ್ ಆಗಿದೆ. ಆದರೆ ಉತ್ತರ ಭಾರತದಲ್ಲಿ ಮಾತ್ರ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಸಿನಿಮಾದ ಒಟಿಟಿ ರಿಲೀಸ್ ಅವಧಿ. ನಾಲ್ಕು ವಾರಗಳ ಒಟಿಟಿ ವಿಂಡೋ ಕುರಿತು ಮಲ್ಟಿಪ್ಲೆಕ್ಸ್ ಗಳು ಮತ್ತು ಸಿನಿಮಾ ನಿರ್ಮಾಪಕರ ನಡುವೆ ಮುನಿಸು ಉಂಟಾಗಿದ್ದು, ಇದೇ ಕಾರಣಕ್ಕೆ ಹಿಂದಿ ಆವೃತ್ತಿಯನ್ನು ಮಲ್ಟಿಪ್ಲೆಕ್ಸ್ಗಳು ಬಿಡುಗಡೆ ಮಾಡಿಲ್ಲ.
ಸಿನಿಮಾ ಬಿಡುಗಡೆ ಆದ ಎಂಟು ವಾರಗಳ ಬಳಿಕ ಒಟಿಟಿಗೆ ನೀಡಬೇಕು ಎಂದು ಬೇಡಿಕೆ ಇಡುತ್ತಾ ಬಂದಿದೆ. ಆದರೆ ಸಿನಿಮಾದ ನಿರ್ಮಾಪಕರು ನಾಲ್ಕು ವಾರಗಳಿಗೆ ಒಟಿಟಿಗೆ ಕೊಡಲು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಅನ್ನು ಮಲ್ಟಿಪ್ಲೆಕ್ಸ್ಗಳಲ್ಲಿ ರಿಲೀಸ್ ಮಾಡಲಾಗಿಲ್ಲ. ಆದರೆ ಉತ್ತರ ಭಾರತದ ಹಲವಾರು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಜೈಲರ್ 2’ ರಿಲೀಸ್ ಆಗಿದೆ. ವಿಶೇಷವೆಂದರೆ ಉತ್ತರ ಭಾರತದಲ್ಲಿ ಮಧ್ಯ ರಾತ್ರಿ ಶೋಗಳನ್ನು ಹಾಕಲಾದ ಮೊದಲ ದಕ್ಷಿಣ ಭಾರತ ಸಿನಿಮಾ ಎನಿಸಿಕೊಂಡಿದೆ ‘ಜೈಲರ್ 2’.
ಇದನ್ನೂ ಓದಿ:ರಜನೀಕಾಂತ್ ಬಳಿಕ ಚಿರಂಜೀವಿಗೆ ಸಿನಿಮಾ ನಿರ್ದೇಶಿಸಲಿರುವ ಕಾರ್ತಿಕ್ ಸುಬ್ಬರಾಜು
‘ಜೈಲರ್ 2’ ಸಿನಿಮಾಕ್ಕೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆಯೇ ವ್ಯಕ್ತವಾಗಿದೆ. ಅದರಲ್ಲೂ ‘ಜೈಲರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್, ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ, ನೋರಾ ಫತೇಹಿ ಅಂಥಹಾ ಬಾಲಿವುಡ್ ಸ್ಟಾರ್ ನಟ-ನಟಿಯರು ಸಹ ನಟಿಸಿದ್ದು, ಉತ್ತರ ಭಾರತದಲ್ಲಿ ಒಳ್ಳೆಯ ಕಲೆಕ್ಷನ್ ನಿರೀಕ್ಷಿತಸಲಾಗಿತ್ತು. ಈಗಲೂ ಒಳ್ಳೆಯ ಗಳಿಕೆ ಆಗುತ್ತಿದೆಯಾದರೂ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಇದ್ದಿದ್ದರೆ ಗಳಿಕೆ ದುಪ್ಪಟ್ಟಾಗುತ್ತಿತ್ತು.
‘ಜೈಲರ್ 2’ ಸಿನಿಮಾ ಈ ವರೆಗೆ ವಿಶ್ವದಾದ್ಯಂತ 550 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಸಿನಿಮಾ ಅನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದು, ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. 2023ರ ‘ಜೈಲರ್’ ಸಿನಿಮಾದ ಸೀಕ್ವೆಲ್ ಇದಾಗಿದ್ದು, ಈ ಸಿನಿಮಾ 1000 ಕೋಟಿ ಗಳಿಕೆ ಮಾಡುವ ಸಾಧ್ಯತೆಯೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:49 am, Wed, 21 October 26