ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾರನ್ನೇ ಮರೆತರೆ ರಾಜಮೌಳಿ

Baahubali movie: ಭಾರತೀಯ ಸಿನಿಮಾ ಇತಿಹಾಸದಲ್ಲಿ ಪ್ರಮುಖವಾದ ಸಿನಿಮಾ ‘ಬಾಹುಬಲಿ’. ಈ ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ (ಜುಲೈ 10) ಹತ್ತು ವರ್ಷಗಳಾಗಿವೆ. ಇದೇ ಖುಷಿಯಲ್ಲಿ ಸಿನಿಮಾ ತಂಡ ರೀಯೂನಿಯನ್ ಕಾರ್ಯಕ್ರಮ ಆಯೋಜಿಸಿತ್ತು. ಹಲವು ನಟ-ನಟಿಯರು, ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಸಿನಿಮಾದ ನಾಯಕಿಯರಾದ ಅನುಷ್ಕಾ ಶೆಟ್ಟಿ, ತಮನ್ನಾ ಗೈರಾಗಿದ್ದರು. ಕಾರಣ ಏನು?

ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾರನ್ನೇ ಮರೆತರೆ ರಾಜಮೌಳಿ
Tamannah Anushka

Updated on: Jul 11, 2025 | 4:29 PM

ಬಾಹುಬಲಿ’ (Bahubali) ಭಾರತದ ಸಿನಿಮಾ ರಂಗ ಹಾದಿಯನ್ನು ಬದಲಿಸಿದ ಸಿನಿಮಾ. ‘ಬಾಹುಬಲಿ’ ಸಿನಿಮಾ, ಭಾರತೀಯ ಸಿನಿಮಾ ರಂಗವನ್ನು ವಿಶ್ವ ಮಾರುಕಟ್ಟೆಗೆ ಪರಿಚಯಿಸಿತು. ಭಾರಿ ಬಜೆಟ್ ಸಿನಿಮಾ ಮಾಡಿ ಭಾರಿ ದೊಡ್ಡ ಗಳಿಕೆಯನ್ನು ಮಾಡಬಹುದು ಎಂದು ತೋರಿಸಿಕೊಟ್ಟ ಸಿನಿಮಾ ಅದು. ಮಾತ್ರವಲ್ಲದೆ, ಭಾರತೀಯ ಪೌರಾಣಿಕ ಕತೆಗಳಿಗೆ ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯುವ ತಾಕತ್ತಿದೆ ಎಂದು ತೋರಿಸಿಕೊಟ್ಟ ಸಿನಿಮಾ. ಹಲವಾರು ದಾಖಲೆಗಳು ‘ಬಾಹುಬಲಿ’ ಸಿನಿಮಾದ ಹೆಸರಿಗಿವೆ. ಅಂಥಹಾ ಅದ್ಭುತ ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ (ಜುಲೈ 10) ಹತ್ತು ವರ್ಷಗಳಾದವು.

‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾ 2015, ಜುಲೈ 10 ರಂದು ಬಿಡುಗಡೆ ಆಗಿತ್ತು. ಆ ಖುಷಿಯಲ್ಲಿ ‘ಬಾಹುಬಲಿ’ ಟೀಂ ರೀನಯೂನಿಯನ್ ಆಯೋಜನೆ ಮಾಡಿತ್ತು. ‘ಬಾಹುಬಲಿ’ ಸಿನಿಮಾನಲ್ಲಿ ಕೆಲಸ ಮಾಡಿದ ಹಲವಾರು ಮಂದಿ ನಟ-ನಟಿಯರು ಮತ್ತು ತಂತ್ರಜ್ಞರು ಒಟ್ಟಿಗೆ ಸೇರಿ ಸಿನಿಮಾದ ಯಶಸ್ಸನ್ನು ಸಂಭ್ರಮಿಸಿದರು. ‘ಬಾಹುಬಲಿ’ ಸಿನಿಮಾದ ಶೂಟಿಂಗ್, ಬಿಡುಗಡೆ ಸಮಯದ ಹಲವು ಸಂಗತಿಗಳನ್ನು ಮತ್ತೆ ನೆನಪು ಮಾಡಿಕೊಂಡರು.

ನಿರ್ದೇಶಕ ರಾಜಮೌಳಿ, ನಟರಾದ ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾಕೃಷ್ಣ, ಸತ್ಯರಾಜ್, ನಾಸರ್, ನಿರ್ಮಾಪಕ ಶೋಭೂ ಯರಲಗಡ್ಡ, ಕ್ಯಾಮೆರಾಮ್ಯಾನ್ ಸೆಂಥಿಲ್, ಪ್ರೊಡಕ್ಷನ್ ಡಿಸೈನರ್​ಗಳಾದ ಸಬು ಸಿರಿಲ್, ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಲೈನ್ ಪ್ರೊಡ್ಯೂಸರ್ ಶ್ರೀವಲ್ಲಿ, ಕಾಸ್ಟ್ಯೂಮ್ ಡಿಸೈನರ್ ರಮಾ ರಾಜಮೌಳಿ, ಪ್ರಚಾರಕ ಕಾರ್ತಿಕೇಯ ಇನ್ನೂ ಹಲವಾರು ಮಂದಿ ರೀ ಯೂನಿಯನ್​​ನಲ್ಲಿ ಭಾಗಿ ಆಗಿದ್ದರು. ರೀಯೂನಿನ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಆದರೆ ಯಾವ ಚಿತ್ರದಲ್ಲಿಯೂ ಸಿನಿಮಾದ ನಾಯಕಿಯರಾದ ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ ಕಾಣಿಸಲಿಲ್ಲ.

ಇದನ್ನೂ ಓದಿ:‘ಬಾಹುಬಲಿ’ಗೆ ಹತ್ತು ವರ್ಷ, ಒಂದೆಡೆ ಸೇರಿ ಸಂಭ್ರಮಿಸಿದ ಘಟಾನುಘಟಿಗಳು

ತಮನ್ನಾ ಭಾಟಿಯಾ ಮತ್ತು ಅನುಷ್ಕಾ ಶೆಟ್ಟಿ ಅವರುಗಳು ‘ಬಾಹುಬಲಿ’ ಸಿನಿಮಾ ನಾಯಕಿಯರು. ಸಿನಿಮಾದ ಯಶಸ್ಸಿನಲ್ಲಿ ಇಬ್ಬರದ್ದೂ ಪ್ರಧಾನ ಪಾತ್ರವೇ ಇತ್ತು. ಹಾಗಿದ್ದರೂ ಸಹ ಈ ಇಬ್ಬರೂ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ‘ಬಾಹುಬಲಿ’ ರೀ ಯೂನಿಯನ್​ಗೆ ಇವರನ್ನು ಆಹ್ವಾನಿಸಿರಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಆದರೆ ನಿಜ ಅದಲ್ಲ. ಮೂಲಗಳ ಪ್ರಕಾರ, ತಮನ್ನಾ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರಿಗೂ ಸಹ ಆಹ್ವಾನ ಹೋಗಿತ್ತಂತೆ. ಆದರೆ ಇಬ್ಬರೂ ಬೇರೆ ಬೇರೆ ಕಾರಣಗಳಿಗಾಗಿ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

ತಮನ್ನಾ ಭಾಟಿಯಾ ಯಾವುದೋ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎನ್ನಲಾಗುತ್ತಿದೆ. ಇನ್ನು ಅನುಷ್ಕಾ ಶೆಟ್ಟಿ, ‘ಘಾಟಿ’ ಸಿನಿಮಾಕ್ಕಾಗಿ ಭಿನ್ನ ಲುಕ್​​ನಲ್ಲಿದ್ದು, ಸಾಕಷ್ಟು ತೂಕ ಕಳೆದುಕೊಂಡಿದ್ದಾರಂತೆ. ಹಾಗಾಗಿ ಲುಕ್ ಅನ್ನು ರಿವೀಲ್ ಮಾಡಲು ಇಷ್ಟವಿಲ್ಲದ ಕಾರಣ ಅವರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲವಂತೆ. ಅಲ್ಲದೆ, ‘ಘಾಟಿ’ ಸಿನಿಮಾ ತಂಡಕ್ಕೂ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ತಾವು ‘ಘಾಟಿ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಬರುವುದಿಲ್ಲ, ಆಯ್ದ ಕೆಲವಕ್ಕಷ್ಟೆ ಹಾಜರಾಗುವುದಾಗಿ ಹೇಳಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ