AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali: ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗ್ತೀರಾ? ಖಾಸಗಿ ಬಸ್ ಟೆಕೆಟ್ ದರ ನೋಡಿದ್ರೆ, ವಿಮಾನವೇ ಬೆಸ್ಟ್‌!

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು ಟು ಹುಬ್ಬಳ್ಳಿಗೆ ತೆರಳಲಿರುವ ಖಾಸಗಿ ಬಸ್ ದರ ವಿಮಾನಗಳಿಗೆ ಪೈಪೋಟಿ ನೀಡುವಂತಿದೆ.

Deepavali: ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗ್ತೀರಾ? ಖಾಸಗಿ ಬಸ್ ಟೆಕೆಟ್ ದರ ನೋಡಿದ್ರೆ, ವಿಮಾನವೇ ಬೆಸ್ಟ್‌!
bus fares
TV9 Web
| Edited By: |

Updated on:Oct 20, 2022 | 8:53 PM

Share

ಬೆಂಗಳೂರು: ಧಾರ್ಮಿಕ ಹಬ್ಬಗಳು ಖಾಸಗಿ ಬಸ್ ಸಂಸ್ಥೆಗಳಿಗೆ ಹೆಚ್ಚು ಹಣ ಸುಲಿ ಮಾಡಲು ವರದಾನವಾಗಿವೆ. ಯಾವುದೇ ಹಬ್ಬ ಬಂತಂದ್ರೆ ಸಾಕು ಖಾಸಗಿ ಬಸ್​ಗಳು ಟಿಕೆಟ್​ ದರದಲ್ಲಿ(Private Bus Ticket Price) ಪೈಪೋಟಿಗಿಳಿಯುತ್ತವೆ. ಅದರಲ್ಲೂ ಹಬ್ಬದ ಹಿಂದೆ-ಮುಂದೆ ವೀಕೆಂಡ್ ಇದ್ರಂತೂ ಟಿಕೆಟ್ ದರ ನೋಡಿದ್ರೆ, ಒಂದು ಕ್ಷಣ ಮೈ ನಡುಗುತ್ತೆ. ಪ್ರತಿ ಬಾರಿಯಂತೆ ಈ ಬಾರಿ ದೀಪಾವಳಿ ಹಬ್ಬಕ್ಕೂ ಅದೇ ಕಥೆ. ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್​ಗಳು ದರ ಏರಿಕೆ ಶಾಕ್ ಕೊಟ್ಟಿವೆ. ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ತೆರಳುವ ಬಸ್​ಗಳ ಟಿಕೆಟ್ ದರ ನೀರಿಕ್ಷೆ ಮೀರಿದೆ.

ಹೌದು… ಬೆಂಗಳೂರು ಟು ಹುಬ್ಬಳ್ಳಿ ಖಾಸಗಿ ಬಸ್‌ ದರ ಬರೋಬ್ಬರಿ 5,000 ರೂಪಾಯಿ ಇದೆ. ಇಷ್ಟೊಂದು ಹಣದಲ್ಲಿ ರಾಜನಂತೆ ವಿಮಾನದಲ್ಲಿ ಹೋಗಬಹುದು ಎನ್ನುವುದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ವಿಶೇಷ ರೈಲು ಸೇವೆ ಒದಗಿಸುವಂತೆ ಸೋಷಿಯಲ್‌ ಮೀಡಿಯಾದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಇನ್‌ಫ್ರಾ ಎಂಬ ಟ್ವಿಟರ್‌ ಹ್ಯಾಂಡಲ್‌ನಲ್ಲಿ, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಬಸ್ ದರಗಳು ವಿಮಾನಗಳಿಗೆ ಕಠಿಣ ಪೈಪೋಟಿ ನೀಡುತ್ತಿವೆ. ಇನ್ನೂ ದೀಪಾವಳಿಯ ವಿಶೇಷ ರೈಲುಗಳನ್ನು ಘೋಷಿಸಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಟ್ಯಾಗ್ ಮಾಡಲಾಗಿದೆ. ಅಲ್ಲದೇ ಬಸ್‌ ದರ ಮತ್ತು ವಿಮಾನ ದರಗಳ ಸ್ಕ್ರೀನ್‌ ಶಾಟ್‌ ಅನ್ನು ಸಹ ಶೇರ್‌ ಮಾಡಿದೆ.

ಇನ್ನು ಈ ಪೋಸ್ಟ್​ಗೆ ಅನೇಕ ರಿಪ್ಲೇಗಳು ಬಂದಿದ್ದು, ಅತುಲ್‌ ಶರ್ಮಾ ಎಂಬುವವರು, ಕೆಎಸ್‌ಆರ್‌ಟಿಸಿ ಅಕ್ಟೋಬರ್‌ 21ರಂದು ಹುಬ್ಬಳ್ಳಿಗೆ 54 ಬಸ್‌ ಸಂಚಾರ ಮತ್ತು ಧಾರವಾಡಕ್ಕೆ 39 ಬಸ್‌ ಸೇವೆ ಒದಗಿಸಿದೆ. ಅವುಗಳಲ್ಲಿ ಸೀಟುಗಳು ಇನ್ನೂ ಲಭ್ಯ ಇವೆ. ಆದರೆ ಖಾಸಗಿ ಬಸ್‌ ಸೇವೆ ಪಡೆಯುವುದು ಕೊನೆಯ ಆಯ್ಕೆ ಆಗಿರಲಿ. ಹೌದು ದುರದೃಷ್ಟವಶಾತ್‌ ರೈಲ್ವೆ ಇನ್ನೂ ವಿಶೇಷ ರೈಲು ಸೇವೆಗಳನ್ನು ಘೋಷಿಸಿಲ್ಲ ಎಂದಿದ್ದಾರೆ. ಇನ್ನೊಬ್ಬರು ಕಾರ್‌ ಪೂಲ್‌ ಮಾಡಿಕೊಂಡು ಹೋಗುವುದು ಉತ್ತಮ ಆಯ್ಕೆ ಎಂದು ಸಲಹೆ ನಿಡಿದ್ದಾರೆ.

ಸರ್ಕಾರಿ ಬಸ್ ಏರಿ, ಖಾಸಗಿ ಬಸ್​ಗೆ ಬುದ್ಧ ಕಲಿಸಿ

ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ನಿಮಿತ್ತ ಬೆಂಗಳೂರಿಂದ ರಾಜ್ಯದ ವಿವಿದೆಡೆಗೆ 1,500 ವಿಶೇಷ ಬಸ್‌ ಸೇವೆ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭದ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಸಲುವಾಗಿ ಈ ಕ್ರಮ ತೆಗೆದುಕೊಂಡಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆಬಿಎಸ್) ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹೆಚ್.ಡಿ. , ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಗಳಿಗೆ ವಿಶೇಷ ಬಸ್‌ಗಳು ಹೋಗಲಿವೆ. ಆದ್ದರಿಂದ ಪ್ರಯಾಣಿಕರು ಖಾಸಗಿ ಬಸ್ ಬಿಟ್ಟು ಸರ್ಕಾರ ಬಿಟ್ಟಿರುವ ವಿಶೇಷ ಬಸ್​ಗಳನ್ನು ಹತ್ತುವ ಮೂಲಕ ವಸೂಲಿಗಿಳಿದ ಖಾಸಗಿ ಬಸ್​ಗಳಿಗೆ ಬುದ್ಧಿ ಕಲಿಸಿದಂತಾಗುತ್ತದೆ.

Published On - 8:47 pm, Thu, 20 October 22

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ