ನ್ಯೂಯಾರ್ಕ್, ಮಾರ್ಚ್ 6: ಮಹಾಶಿವರಾತ್ರಿ (Maha Shivratri) ಯನ್ನು ಭಾರತದಲ್ಲಿ ಮಾತ್ರ ಆಚರಿಸುವುದಿಲ್ಲ. ಬೇರೆ ಬೇರೆ ವಿದೇಶಗಳಲ್ಲೂ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಅದೇ ರೀತಿಯಾಗಿ ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್‌ನ ಜನರು ಆಚರಿಸಿದ್ದಾರೆ. ಹೀಗಾಗಿ ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ. ಜೊತೆಗೆ ಪ್ರಪಂಚದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸದ್ಗುರು ಅವರ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ಪ್ರಸಾರ ಮಾಡಲಾಗಿದೆ. ಇದನ್ನು ಕಂಡ ನ್ಯೂಯಾರ್ಕ್‌ನ ಜನರು ‘ಹರ್ ಹರ್ ಮಹಾದೇವ್’ ಎಂದು ರಸ್ತೆಬದಿಗಳಲ್ಲಿ ನೃತ್ಯವನ್ನು ಮಾಡಿದ್ದಾರೆ.
ಈ ಕುರಿತಾಗಿ ವಿಡಿಯೋ ಹಂಚಿಕೊಂಡಿರುವ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಸದ್ಗುರು ಅವರು, ‘ನ್ಯೂಯಾರ್ಕ್ ಜನರು ಮಹಾಶಿವರಾತ್ರಿಯನ್ನು ಸ್ವಾಗತಿಸಿದ್ದಾರೆ. ಶಿವನ ಮಹಾರಾತ್ರಿಯ ಮಹತ್ವವನ್ನು ಜಗತ್ತು ಅರಿತುಕೊಳ್ಳುತ್ತಿದೆ. ಇದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಪರಿವರ್ತನೆಯ ಅವಕಾಶವಾಗಿದೆ. ನಾವು ಅದನ್ನು ಸಾಕಾರಗೊಳಿಸೋಣ. ಇದು ಆಚರಣೆಯ ರಾತ್ರಿ. ಆಧ್ಯಾತ್ಮಿಕ ಅನುಭವಗಳು ಟೈಮ್ಸ್ ಸ್ಕ್ವೇರ್ ಎಲ್ಲಿಯಾದರೂ ಕಾಣಬಹುದಾಗಿದೆ’ ಎಂದಿದ್ದಾರೆ.
#TimesSquare, New York welcomes #Mahashivratri! The world is realizing the significance of the Great Night of Shiva as a celebration of enhancing human potential and an opportunity for transformation. Let us make it happen. -Sg pic.twitter.com/koNh7yGxh0
— Sadhguru (@SadhguruJV) March 6, 2024
ನ್ಯೂಯಾರ್ಕ್‌ನಲ್ಲಿ ಮಹಾಶಿವರಾತ್ರಿಯನ್ನು ವೀಕ್ಷಿಸಿದ ನಂತರ ಸಾಕಷ್ಟು ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಾರ್ಗರೇಟ್ ಎನ್ನುವವರು ಪ್ರತಿಕ್ರಿಯಿಸಿದ್ದು, ‘ಟೈಮ್ ಸ್ಕ್ವೇರ್‌ನಲ್ಲಿ ಸದ್ಗುರುಗಳನ್ನು ನೋಡಿದ ತಕ್ಷಣ ಪ್ರೀತಿ ಮತ್ತು ಉತ್ಸಾಹ ಬಂತು. ಜೊತೆಗೆ ಕಣ್ಣೀರು ಬಂತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾಶಿವರಾತ್ರಿ ವೇಳೆ ಭಕ್ತರು ನಿದ್ದೆ ಮಾಡುವುದಿಲ್ಲ! ಕಾರಣ ತಿಳಿದರೆ ನೀವೂ ಅಂದು ನಿದ್ದೆ ಮಾಡುವುದಿಲ್ಲ
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಾರ್ಚ್ 8ರ ಸಂಜೆ 6 ರಿಂದ ಮಾರ್ಚ್ 9ರ ಬೆಳಿಗ್ಗೆ 6 ರವರೆಗೆ ಇಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನಲ್ಲಿರುವ ಅತಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ಮುಂದೆ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ರಾತ್ರಿಯಂದು ಸದ್ಗುರುಗಳ ಸಮ್ಮುಖದಲ್ಲಿ ಧ್ಯಾನ, ಸಂಗೀತ ಮತ್ತು ಮನಮೋಹಕ ನೃತ್ಯ ಪ್ರದರ್ಶನಗಳು ನಡೆಯಲಿವೆ.
ಇದನ್ನೂ ಓದಿ: Maha Shivratri 2024: ಈ ಬಾರಿ ಮಹಾಶಿವರಾತ್ರಿಯ ದಿನ ಬಡವರಿಗೆ ಈ ನಾಲ್ಕು ವಸ್ತು ದಾನ ಮಾಡಿ
ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ 22 ಭಾಷೆಗಳಲ್ಲಿ ಸದ್ಗುರುಗಳ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:53 pm, Wed, 6 March 24