Makar Sankranti 2023: ಮಕರ ಸಂಕ್ರಾಂತಿ, ಯಾವ ರಾಜ್ಯಗಳಲ್ಲಿ ಯಾವ ರೀತಿ ಆಚರಿಸಲಾಗುತ್ತದೆ? ಮಾಹಿತಿ ಇಲ್ಲಿದೆ

Pongal 2023: ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ದೇಶದಲ್ಲಿ ಒಂದೊಂದು ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಅವರ ಸಂಪ್ರದಾಯಕ್ಕೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ.

Makar Sankranti 2023: ಮಕರ ಸಂಕ್ರಾಂತಿ, ಯಾವ ರಾಜ್ಯಗಳಲ್ಲಿ ಯಾವ ರೀತಿ ಆಚರಿಸಲಾಗುತ್ತದೆ? ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 13, 2023 | 5:11 PM

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಒಂದೊಂದು ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಅವರ ಸಂಪ್ರದಾಯಕ್ಕೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಕರ್ನಾಟಕದಲ್ಲಿ ಪ್ರತಿಯೊಂದು ಮನೆಗಳಲ್ಲಿ ಈ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯನ್ನು ಮನೆಮನೆಗಳಲ್ಲಿ ಎಳ್ಳುಬೆಲ್ಲಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚುತ್ತಾ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎನ್ನುತ್ತಾರೆ. ಜೊತೆಗೆ ನಿಮ್ಮ ಜೀವನದ ಉದ್ದಕ್ಕೂ ಪ್ರತಿದಿನ ಸಿಹಿ ಕಹಿ ಸಮಾನವಾಗಿರಲಿ ಎಂದು ಹಾರೈಸುತ್ತಾರೆ. ಈ ಹಬ್ಬ ಕೇವಲ ಭಾರತದಲ್ಲಿ ಮಾತ್ರವಲ್ಲದೇ ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಕಾಂಬೋಡಿಯಾದಲ್ಲೂ ಆಚರಿಸಲಾಗುತ್ತದೆ. ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ.

ಪೊಂಗಲ್:

ತಮಿಳುನಾಡಿನಲ್ಲಿ ಆಚರಿಸಲಾಗುವ ಥಾಯ್ ಪೊಂಗಲ್, ಭಗವಾನ್ ಇಂದ್ರನಿಗೆ ಗೌರವ ಸಲ್ಲಿಸುವ ನಾಲ್ಕು ದಿನಗಳ ಆಚರಣೆಯಾಗಿದೆ. ಸಮೃದ್ಧವಾದ ಮಳೆ ಮತ್ತು ಫಲವತ್ತಾದ ಭೂಮಿ ಮತ್ತು ಉತ್ತಮ ಇಳುವರಿಗಾಗಿ ಭಗವಾನ್ ಇಂದ್ರನಿಗೆ ಧನ್ಯವಾದ ಹೇಳಲು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹಲವಾರು ವರ್ಷಗಳಿಂದ ನಂಬಿಕೊಂಡು ಬಂದಿದ್ದಾರೆ. ಪ್ರಮುಖವಾಗಿ ತಮಿಳುನಾಡು ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಪೊಂಗಲ್ ಅನ್ನು ಜನವರಿ 15 ರಿಂದ 18 ರವರೆಗೆ ಆಚರಿಸಲಾಗುತ್ತದೆ. ಜನರು ಪೊಂಗಲ್ ಅನ್ನು ಹೊಸ ವರ್ಷವೆಂದು ಆಚರಿಸುತ್ತಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿ ಯಾವಾಗ ಆಚರಿಸಬೇಕು, ನಿಖರ ದಿನಾಂಕ ಮತ್ತು ಪೂಜೆ ಮುಹೂರ್ತ ಇಲ್ಲಿದೆ

ಮಕರ ಸಂಕ್ರಾಂತಿ:

ಮಕರ ಸಂಕ್ರಾಂತಿಯನ್ನು ಈ ವರ್ಷ ಜನವರಿ 14 ಮತ್ತು 15 ರಂದು ಆಚರಿಸಲಾಗುತ್ತದೆ. ಈ ವರ್ಷ ಸುಗ್ಗಿಯ ಋತುವಿನ ಆರಂಭವನ್ನು ಗುರುತಿಸಲು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಮನೆಮನೆಗಳಲ್ಲಿ ಎಳ್ಳುಬೆಲ್ಲಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚುತ್ತಾ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎನ್ನುತ್ತಾರೆ. ಜೊತೆಗೆ ನಿಮ್ಮ ಜೀವನದ ಉದ್ದಕ್ಕೂ ಪ್ರತಿದಿನ ಸಿಹಿ ಕಹಿ ಸಮಾನವಾಗಿರಲಿ ಎಂದು ಹಾರೈಸುತ್ತಾರೆ. ಈ ಹಬ್ಬವನ್ನು ಗಾಳಿಪಟ ಉತ್ಸವ ಎಂದು ಕೂಡ ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಋಷಿ ವಿಶ್ವಾಮಿತ್ರನು ಆಚರಣೆಯನ್ನು ಪ್ರಾರಂಭಿಸಿದ ಎಂದು ಹೇಳಲಾಗುತ್ತದೆ.

ಮಹಾಭಾರತದ ಪ್ರಕಾರ ಪಾಂಡವರು ವನವಾಸದ ಸಮಯದಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಿದರು ಎಂಬ ಉಲ್ಲೇಖವಿದೆ. ಮಕರ ಸಂಕ್ರಾಂತಿಯಂದು ಜಮುನಾ ಮತ್ತು ಗಂಗೆಯ ಸಂಗಮದಲ್ಲಿ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಇದೆ. ಜೊತೆಗೆ ಈ ದಿನ ಸೂರ್ಯ ದೇವನನ್ನು ಪೂಜಿಸಲಾಗುತ್ತದೆ.

ಇದನ್ನೂ ಓದಿ: ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಅಡುಗೆ ಕೋಣೆ ಹೇಗಿರಬೇಕು? ಸಲಹೆಗಳು ಇಲ್ಲಿವೆ

ಲೋಹ್ರಿ:

ಲೋಹ್ರಿ ಹಬ್ಬವು ಈ ವರ್ಷ ಜನವರಿ 13 ರಂದು ಬರುತ್ತದೆ. ಲೋಹದಿ ಅಥವಾ ಲಾಲ್ ಲೋಯಿ ಎಂದೂ ಕರೆಯಲ್ಪಡುವ ಲೋಹ್ರಿಯನ್ನು ಮಕರ ಸಂಕ್ರಾಂತಿಯ ಹಿಂದಿನ ದಿನ ಆಚರಿಸಲಾಗುತ್ತದೆ. ಲೋಹ್ರಿಯೊಂದಿಗೆ ಹಲವಾರು ಸಾಮಾಜಿಕ-ಸಾಂಸ್ಕೃತಿಕ ಮತ್ತು ಜಾನಪದ ದಂತಕಥೆಗಳಿವೆ. ದಂತಕಥೆಯ ಪ್ರಕಾರ, ಭಟ್ಟಿ, ಅಕ್ಬರನ ಆಳ್ವಿಕೆಯಲ್ಲಿ ರಜಪೂತ ಬುಡಕಟ್ಟು ಜನಾಂಗದವರು ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್ ವಾಸಿಸುತ್ತಿದ್ದರು. ಇಲ್ಲಿ ರಾಜನಾದ ದುಲ್ಲಾ ಭಟ್ಟಿಯನ್ನು ಅಂದು ನೆನಪಿಸಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಲೋಹ್ರಿಯಲ್ಲಿ, ಅಲ್ಲಿನ ಮಕ್ಕಳ ಗುಂಪು ಮನೆ ಮನೆಗೆ ಹೋಗಿ, ದುಲ್ಲಾ ಭಟ್ಟಿ ಜಾನಪದ ಗೀತೆಯನ್ನು ಹಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿದೆ.

ಈ ಹಬ್ಬವು ಸಂಜೆಯ ದೀಪೋತ್ಸವಗಳಿಗೆ ಹೆಸರುವಾಸಿಯಾಗಿದೆ. ಈ ಸಂದರ್ಭದಲ್ಲಿ ಕಡಲೆಕಾಯಿ, ಎಳ್ಳು, ಬೆಲ್ಲ ಮತ್ತು ಪಾಪ್‌ಕಾರ್ನ್‌ಗಳನ್ನು ಸೇವಿಸಲಾಗುತ್ತದೆ. ಪೂಜಾ ವಿಧಿಯ ಭಾಗವಾಗಿ, ಈ ಆಹಾರ ಪದಾರ್ಥಗಳನ್ನು ತಿನ್ನುವ ಮೊದಲು ಪವಿತ್ರ ಅಗ್ನಿಗೆ ಅರ್ಪಿಸಲಾಗುತ್ತದೆ.

ಬಿಹು ಉತ್ಸವ:

ಸುಗ್ಗಿಯ ಹಬ್ಬವನ್ನು ಅಸ್ಸಾಂನಲ್ಲಿ ಅದ್ದೂರಿಯಾಗಿ ಬಿಹು ಎಂದು ಆಚರಿಸಲಾಗುತ್ತದೆ. ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾದ ಅಸ್ಸಾಂನಲ್ಲಿ ಈ ಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ವಾಡಿಕೆ. ಒಂದು ವರ್ಷದಲ್ಲಿ ಅಸ್ಸಾಮಿಗಳು ಮೂರು ವಿಭಿನ್ನ ರೀತಿಯ ಬಿಹು ಹಬ್ಬವನ್ನು ಆಚರಿಸುತ್ತಾರೆ. ಏಪ್ರಿಲ್ ತಿಂಗಳ ಮಧ್ಯದಲ್ಲಿ ಬೋಹಾಗ್ ಬಿಹು, ಜನವರಿ ತಿಂಗಳ ಮಧ್ಯದಲ್ಲಿ ಮಾಗ್ ಬಿಹು ಮತ್ತು ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಕಾಟಿ ಬಿಹು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 2:13 pm, Tue, 10 January 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ