Makar Sankranti Pongal: ಸಂಕ್ರಾಂತಿ ಹಬ್ಬಕ್ಕೆ ವೈವಿಧ್ಯಮಯ ಪೊಂಗಲ್ ಮಾಡಿ ಸವಿಯಿರಿ

ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಮೆರಗು ಹೆಚ್ಚಿಸುವ ಸ್ಪೆಷಲ್ ಖಾದ್ಯ ಪೊಂಗಲ್​ನ ವಿವಿಧ, ವೈವಿಧ್ಯಮಯ ರೀತಿಯನ್ನು ಇಲ್ಲಿ ತಿಳಿಯಿರಿ. ಸಂಕ್ರಾಂತಿಗೆ ಸಿಹಿ ಪೊಂಗಲ್, ಖಾರ ಪೊಂಗಲ್, ಅವಲಕ್ಕಿ ಪೊಂಗಲ್​ಗಳನ್ನು ಮಾಡಲಾಗುತ್ತೆ. ಆದ್ರೆ ಉತ್ತರ ಕರ್ನಾಟಕದಲ್ಲಿ ಶೇಂಗಾ ಹೋಳಿಗೆ, ಮಾದಲಿ, ಗೋಧಿ ಹುಗ್ಗಿಯಂತಹ ಖಾದ್ಯಗಳನ್ನು ಮಾಡಲಾಗುತ್ತೆ.

TV9 Web
| Updated By: ಆಯೇಷಾ ಬಾನು

Updated on:Jan 14, 2023 | 9:33 AM

ಸುಗ್ಗಿಯ ಹಿಗ್ಗನ್ನು ಹೆಚ್ಚಿಸೋ ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಮನೆ ಮನಗಳಲ್ಲಿ ಹಬ್ಬದ ಸಂಭ್ರಮ ಎದ್ದು ಕಾಣಲಿದೆ. ಮನೆ ಮುಂದೆ ರಂಗೋಲಿ, ಹಸಿರು ತೋರಣ, ಹೂವಿನ ಅಲಂಕಾರದಿಂದ ಮನೆ ಮಿಂಚಲಿದೆ. ಬನ್ನಿ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಮೆರಗು ಹೆಚ್ಚಿಸುವ ಸ್ಪೆಷಲ್ ಖಾದ್ಯ ಪೊಂಗಲ್​ನ ವಿವಿಧ, ವೈವಿಧ್ಯಮಯ ರೀತಿಯನ್ನು ಇಲ್ಲಿ ತಿಳಿಯಿರಿ. ಸಂಕ್ರಾಂತಿಗೆ ಸಿಹಿ ಪೊಂಗಲ್, ಖಾರ ಪೊಂಗಲ್, ಅವಲಕ್ಕಿ ಪೊಂಗಲ್​ಗಳನ್ನು ಮಾಡಲಾಗುತ್ತೆ. ಆದ್ರೆ ಉತ್ತರ ಕರ್ನಾಟಕದಲ್ಲಿ ಶೇಂಗಾ ಹೋಳಿಗೆ, ಮಾದಲಿ, ಗೋಧಿ ಹುಗ್ಗಿಯಂತಹ ಖಾದ್ಯಗಳನ್ನು ಮಾಡಲಾಗುತ್ತೆ. ಒಂದೊಂದು ಕಡೆ ಒಂದೊಂದು ರೀತಿಯ ಖಾದ್ಯ ಸ್ಪಷಲ್ ಇರುತ್ತೆ.

1 / 5
ಸಕ್ಕರೆ ಪೊಂಗಲ್ ಅಥವಾ ಸಿಹಿ ಪೊಂಗಲ್ ಸಾಮಾನ್ಯವಾಗಿ ತಮಿಳುನಾಡು ಮತ್ತು ದಕ್ಷಿಣ ಭಾರತದಲ್ಲಿ ಜನಪ್ರಿಯ ಭಕ್ಷ್ಯವಾಗಿದೆ. ಇದನ್ನು ಅನೇಕ ಹಬ್ಬಗಳು ಮತ್ತು ಮಂಗಳಕರ ದಿನಗಳಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಕುಟುಂಬದ ಸಂಪ್ರದಾಯ, ಪದ್ಧತಿಗಳ ಮೇಲೆ ಪೊಂಗಲ್ ಮಾಡುವ ವಿಧಾನ ಬದಲಾಗುತ್ತೆ.

2 / 5
ಖಾರ ಪೊಂಗಲ್ ಅಥವಾ ಮಸಾಲೆ ಪೊಂಗಲ್ ಅನ್ನು ದಕ್ಷಿಣ ಭಾರತದ ಅನೇಕ ಮನೆಗಳಲ್ಲಿ ಬೆಳಗಿನ ತಿಂಡಿಗಾಗಿ ತಯಾರಿಸುವ ಆಹಾರವಾಗಿದೆ. ಇದು ತಮಿಳುನಾಡಿನ ಜನಪ್ರಿಯ ಬ್ರೇಕ್ ಫಾಸ್ಟ್‌ಗಳಲ್ಲಿ ಒಂದು. ಅಕ್ಕಿ ಮತ್ತು ಹೆಸರು ಬೇಳೆಯನ್ನು ಒಟ್ಟಿಗೆ ಬೇಯಿಸಿ ಮೆಣಸು, ಶುಂಠಿ, ಕರಿಬೇವಿನ ಎಲೆಗಳನ್ನು ತುಪ್ಪದಲ್ಲಿ ಒಗ್ಗರಣೆಗೆ ಹಾಕಿ ಪೊಂಗಲ್ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸಾಂಬಾರ್, ಚಟ್ನಿ ಜೊತೆಗೆ ಸವಿಯಲಾಗುತ್ತೆ.

3 / 5
ಓಟ್ಸ್ ಪೊಂಗಲ್: ಸದ್ಯದ ಜೀವನ ಶೈಲಿಯಿಂದಾಗಿ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಕಂಡು ಬರುತ್ತಿವೆ. ಹೀಗಾಗಿ ಹೆಚ್ಚಿನ ಜನ ಅನ್ನ ಸೇವನೆಯಿಂದ ದೂರು ಉಳಿಯುತ್ತಾರೆ. ಇಂತವರು ಓಟ್ಸ್ ಪೊಂಗಲ್ ಟೈ ಮಾಡಬಹುದು. ಓಟ್ಸ್ ಪೊಂಗಲನ್ನು ಅನ್ನದ ಬದಲಿಗೆ ಓಟ್ಸ್‌ನಿಂದ ತಯಾರಿಸಲಾಗುತ್ತದೆ.

4 / 5
ಅವಲಕ್ಕಿ ಪೊಂಗಲ್ ಮಾಡುವಾಗ ಅನ್ನದ ಬಳಕೆಯ ಬದಲಾಗಿ ನೀರಿನಲ್ಲಿ ನೆನೆಸಿದ ಅವಲಕ್ಕಿಯನ್ನು ಬಳಸಲಾಗುತ್ತದೆ. ಇದು ಸವಿಯಲು ತುಂಬಾ ರುಚಿಕರವಾಗಿದ್ದು ಅನ್ನ ಇಷ್ಟಪಡವರು ಹೆಚ್ಚಾಗಿ ಇದನ್ನು ಸೇವಿಸುತ್ತಾರೆ.

5 / 5

Published On - 9:23 am, Sat, 14 January 23

Follow us