
ಪ್ರತಿನಿತ್ಯ ತಪ್ಪದೆ ವಾಕಿಂಗ್ (Walking) ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳುವುದು ಸುಲಭವಲ್ಲ. ಇದಕ್ಕಾಗಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡಿರಬೇಕಾಗುತ್ತದೆ. ಆ ಸಾಲಿನಲ್ಲಿ ವಾಕಿಂಗ್ ಕೂಡ ಸೇರಿಕೊಳ್ಳುತ್ತದೆ. ಪ್ರತಿನಿತ್ಯ ನಡೆಯುವ ವ್ಯಕ್ತಿ ಅನಾರೋಗ್ಯದಿಂದ ದೂರವಿರುತ್ತಾನೆ. ಅದರಲ್ಲಿಯೂ ತೂಕ ಇಳಿಸಿಕೊಳ್ಳಲು ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವ ಗುರಿ ಇಟ್ಟುಕೊಳ್ಳುವುದು ಒಳ್ಳೆಯದು. ದಿನಕ್ಕೆ 10,000 ಹೆಜ್ಜೆಗಳನ್ನು ಪೂರ್ಣಗೊಳಿಸುವುದರಿಂದ ದೈಹಿಕ ಸದೃಢತೆ ಹೆಚ್ಚಾಗುತ್ತದೆ. ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಈ ರೀತಿ ಮಾಡುವುದರಿಂದ ಸಿಗುವ ಪ್ರಯೋಜನಗಳೇನು, ಯಾಕೆ ಈ ಅಭ್ಯಾಸ ಆರೋಗ್ಯಕರ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದಿನಕ್ಕೆ 10,000 ಹೆಜ್ಜೆಗಳು ನಡೆಯುವುದು ಒಂದು ಉತ್ತಮ ಏರೋಬಿಕ್ ಚಟುವಟಿಕೆಯಾಗಿದೆ. ಚುರುಕಾದ ನಡಿಗೆಯು ನಿಮ್ಮ ಹೃದಯ ಬಡಿತವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಅದಕ್ಕಾಗಿಯೇ ನೀವು ಇದನ್ನು ನಿಯಮಿತವಾಗಿ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ದಿನಕ್ಕೆ 10,000 ಹೆಜ್ಜೆಗಳು ನಡೆಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಮಾತ್ರವಲ್ಲ ಇದೊಂದು ಉತ್ತಮ ವ್ಯಾಯಾಮವೂ ಹೌದು. ಮಾತ್ರವಲ್ಲ ತಜ್ಞರು ಹೇಳುವಂತೆ ಇದು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೂ ಸಹಾಯ ಮಾಡುತ್ತದೆ.
ಹಲವಾರು ಅಧ್ಯಯನಗಳು ದಿನಕ್ಕೆ 10,000 ಹೆಜ್ಜೆಗಳು ನಡೆಯುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಟೈಪ್- 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಹೃದಯಾಘಾತವನ್ನು ತಡೆಯಲು ಒಬ್ಬ ವ್ಯಕ್ತಿ ಪ್ರತಿನಿತ್ಯ ಎಷ್ಟು ಹೊತ್ತು ನಡೆಯಬೇಕು ತಿಳಿದುಕೊಳ್ಳಿ
ಈ ರೀತಿ ನಡಿಗೆ ಮಾಡುವ ಅಭ್ಯಾಸವು ಕ್ಯಾಲೊರಿ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರು ಹೇಳುವಂತೆ ಈ ಅಭ್ಯಾಸವು ಹೆಚ್ಚು ಪರಿಣಾಮಕಾರಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ.
ಪ್ರತಿನಿತ್ಯ ವೇಗವಾಗಿ ನಡಿಗೆ ಮಾಡುವ ಅಭ್ಯಾಸವು ಸ್ನಾಯುವಿನ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅಧ್ಯಯನಗಳು ಕೂಡ ಅವು ನಿಮ್ಮ ಮೂಳೆಗಳು ಮತ್ತು ಕೀಲುಗಳ ಮೇಲೆ ಕಡಿಮೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ