ವೈದ್ಯರು ಶಿಫಾರಸು ಮಾಡಿರುವ ಈ ಆಯುರ್ವೇದ ಅಭ್ಯಾಸಗಳನ್ನು ಅನುಸರಿಸಿದರೆ ಲಿವರ್ ಆರೋಗ್ಯವಾಗಿರುತ್ತೆ!

ಆಯುರ್ವೇದದಲ್ಲಿ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಸರಳ ವಿಧಾನಗಳಿವೆ. ನಿಯಮಿತ ಆಹಾರ ಪದ್ಧತಿ, ಆರು ರುಚಿಗಳ ಸಮ್ಮಿಶ್ರಣ ಮತ್ತು ಗಿಡಮೂಲಿಕೆ ಚಹಾ ಸೇವನೆ ಮಾಡುವುದರ ಜೊತೆ ಜೊತೆಗೆ ದೇಹದಲ್ಲಿ ನೀರಿನಂಶವನ್ನು ಕಾಯ್ದುಕೊಳ್ಳುವುದನ್ನು ಒಳಗೊಂಡಿರುತ್ತದೆ. ಮಾತ್ರವಲ್ಲ ಧಾನ್ಯಗಳು, ದ್ವಿದಳ ಧಾನ್ಯ ಮತ್ತು ಅರಿಶಿನದಂತಹ ಮಸಾಲೆಗಳ ಆಯ್ಕೆ ಕೂಡ ಯಕೃತ್ತಿನ ಅಂದರೆ ಲಿವರ್ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಡಾ. ಸೋಮಿತ್ ಕುಮಾರ್ ಅವರು ಕೂಡ ಲಿವರ್ ಆರೋಗ್ಯದ ಬಗ್ಗೆ ಹೇಳಿದ್ದು ಈ ರೀತಿಯ ಸರಳ ಸಲಹೆಗಳನ್ನು ಪ್ರತಿನಿತ್ಯವೂ ಅನುಸರಿಸಿರುವುದರಿಂದ ಲಿವರ್ ಆರೋಗ್ಯವಾಗಿರುತ್ತೆ.

ವೈದ್ಯರು ಶಿಫಾರಸು ಮಾಡಿರುವ ಈ ಆಯುರ್ವೇದ ಅಭ್ಯಾಸಗಳನ್ನು ಅನುಸರಿಸಿದರೆ ಲಿವರ್ ಆರೋಗ್ಯವಾಗಿರುತ್ತೆ!
Liver Health

Updated on: Jul 29, 2025 | 3:45 PM

ನಮ್ಮಲ್ಲಿ ಹೆಚ್ಚಿನವರು ಲಿವರ್ (liver) ಬಗ್ಗೆ ಕಾಳಜಿ ವಹಿಸುವುದು ಬಹಳ ಅಪರೂಪ. ಅದರಿಂದ ತೊಂದರೆಗಳು ಆರಂಭವಾಗುವ ವರೆಗೆ ನಾವ್ಯಾರು ಅದರ ಆರೋಗ್ಯದ ಬಗ್ಗೆ ಯೋಚಿಸುವುದೂ ಇಲ್ಲ. ಆದರೆ ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಈ ಶಕ್ತಿಶಾಲಿ ಅಂಗ ನಿಮ್ಮ ದೇಹದಲ್ಲಿ ಕೆಲವು ಪ್ರಮುಖ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತಿರುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳುವುದರಿಂದ ಹಿಡಿದು, ನೀವು ತಿಂದು ಕುಡಿಯುವ ಎಲ್ಲವನ್ನೂ ಸಂಸ್ಕರಿಸಿ ಅದರಿಂದ ವಿಷ ಹೊರಹಾಕುವ ವರೆಗೆ ಎಲ್ಲಾ ಕೆಲಸವನ್ನು ಯಕೃತ್ತು ಅಥವಾ ಲಿವರ್ ಮಾಡುತ್ತದೆ. ದೇಹದ ವೈಯಕ್ತಿಕ ಶುಚಿಗೆ ಇದರ ಅವಶ್ಯಕತೆ ತುಂಬಾ ಇದೆ. ಆದರೆ ಈ ಯಕೃತ್ತು ಕೇವಲ ಫಿಲ್ಟರ್‌ ಮಾಡುವುದು ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡುತ್ತದೆ. ಇದು ನಿಮ್ಮ ಆಂತರಿಕ ಸಮತೋಲನದ ಪ್ರಮುಖ ಭಾಗವಾಗಿದ್ದು ರಕ್ತ ಮತ್ತು ಪಿತ್ತರಸವನ್ನು ಸಾಗಿಸುವ ಚಾನಲ್ ಆಗಿರುತ್ತದೆ. ಸಾಮಾನ್ಯವಾಗಿ ಈ ವ್ಯವಸ್ಥೆ ಅಸಮತೋಲನಗೊಂಡಾಗ, ಹೃದಯ (heart), ಶ್ವಾಸಕೋಶದಿಂದ ಹಿಡಿದು ಹೊಟ್ಟೆಯವರೆಗೆ ಇಡೀ ದೇಹಕ್ಕೆ ಹಾನಿಯಾಗುತ್ತದೆ. ಹಾಗಾದರೆ ಈ ರೀತಿ ಸಮಸ್ಯೆಗೆ ಪರಿಹಾರವಿಲ್ಲವೇ? ಲಿವರ್ ಆರೋಗ್ಯವಾಗಿರಲು ನಾವು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯ ತಜ್ಞರ ಅಭಿಪ್ರಾಯವೇನು?

ಟಿಓಐ ನಲ್ಲಿ ಉಲ್ಲೇಖಿಸಿದಂತೆ, ಎವಿಪಿ (AVP) ಸಂಶೋಧನಾ ಪ್ರತಿಷ್ಠಾನದ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಸೋಮಿತ್ ಕುಮಾರ್, ಈ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು ಅವರು ತಿಳಿಸಿರುವ ಮಾಹಿತಿ ಪ್ರಕಾರ, ದಿನನಿತ್ಯ ಕೆಲವೇ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ರೀತಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆಯುರ್ವೇದದಲ್ಲಿ, ಯಕೃತ್ತಿನ ಆರೋಗ್ಯವು ಜೀರ್ಣಕ್ರಿಯೆಗೆ ಕಾರಣವಾಗುವ ಶಕ್ತಿಯಾದ ಪಿತ್ತ ದೋಷಕ್ಕೆ ಸಂಬಂಧಿಸಿದೆ. ನೀವು ಮಸಾಲೆಯುಕ್ತ, ಉಪ್ಪು ಅಥವಾ ಹುಳಿ ಆಹಾರವನ್ನು ಅತಿಯಾಗಿ ಸೇವಿಸಿದಾಗ ಅಥವಾ ಹೆಚ್ಚು ಕುಡಿದಾಗ, ಪಿತ್ತವು ಹಳಿ ತಪ್ಪಬಹುದು. ಆಗ ದೇಹದಲ್ಲಿ ತೊಂದರೆಗಳು ಪ್ರಾರಂಭವಾಗುತ್ತದೆ. ಅಂದರೆ ಉರಿಯೂತ, ಯಕೃತ್ತಿನ ಜೀವಕೋಶಕ್ಕೆ ಹಾನಿಯಾಗುವುದು ವಯಸ್ಸಾದ ಲಕ್ಷಣಗಗಳು ಬೇಗ ಕಂಡು ಬರುತ್ತದೆ. ಮತ್ತೊಂದು ಪ್ರಮುಖ ಪರಿಕಲ್ಪನೆಯೆಂದರೆ ಅಗ್ನಿ, ದೇಹದ ಜೀರ್ಣಕಾರಿ ಬೆಂಕಿ. ಇದು ನಿಮ್ಮ ಆಹಾರವನ್ನು ರಸ ಧಾತುವಾಗಿ ಪರಿವರ್ತಿಸುತ್ತದೆ, ಇದು ಪ್ರತಿಯೊಂದು ಜೀವಕೋಶಕ್ಕೂ ಇಂಧನ ನೀಡುವ ಪ್ರಮುಖ ಪೋಷಣೆಯಾಗಿದೆ. ಯಕೃತ್ತಿನ ಆಳದಲ್ಲಿ, ಐದು ವಿಶೇಷ ಜ್ವಾಲೆಗಳು ನಿಮ್ಮ ದೇಹವನ್ನು ನಿರ್ವಿಷಗೊಳಿಸಲು, ಜೀರ್ಣಿಸಿಕೊಳ್ಳಲು ಮತ್ತು ನವೀಕರಿಸಲು ಸದ್ದಿಲ್ಲದೆ ಕೆಲಸ ಮಾಡುತ್ತವೆ. ಹಾಗಾಗಿ ಸರಳವಾಗಿರುವ ಆಹಾರ ಸೇವಿಸಿ. ನಮ್ಮ ಯಕೃತ್ತನ್ನು ಆರೋಗ್ಯವಾಗಿಡಲು ಅಲಂಕಾರಿಕ ಆಹಾರ ಕ್ರಮಗಳು ಅಥವಾ ತೀವ್ರ ಶುದ್ಧೀಕರಣದ ಅಗತ್ಯವಿಲ್ಲ. ಆಯುರ್ವೇದ ಇಂತಹ ಸಮಸ್ಯೆಗಳನ್ನು ಸರಳವಾಗಿ ಪರಿಹರಿಸುತ್ತದೆ ಎಂದಿದ್ದಾರೆ. ಈ ಕುರಿತು ಅವರು ನೀಡಿರುವ ಸಲಹೆಗಳು ಇಲ್ಲಿದೆ.

ಇದನ್ನೂ ಓದಿ: ಲಿವರ್ ಫೇಲ್ ಆಗುವ ಮೊದಲು ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

ಇದನ್ನೂ ಓದಿ
ಪ್ರತಿ ರಾತ್ರಿ ಎರಡು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲಾ ಕಾಯಿಲೆಗಳು ಮಾಯ
ನೆನೆಸಿಟ್ಟ ವಾಲ್ನಟ್ಸ್ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸ್ಟೋರಿ ಓದಿ
ಪ್ರತಿನಿತ್ಯ  ಒಂದು ಲವಂಗ ಸೇವನೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ!
ಮೆದುಳು ಚುರುಕಾಗಿ ಕೆಲಸ ಮಾಡಲು ತಪ್ಪದೆ ಈ ಆಹಾರಗಳನ್ನು ಸೇವನೆ ಮಾಡಿ

ಈ ಸಲಹೆಗಳನ್ನು ತಪ್ಪದೆ ಪಾಲಿಸಿ;

  • ನಿಯಮಿತವಾಗಿ ಆಹಾರಗಳನ್ನು ತಿನ್ನಿರಿ ಆದರೆ ವಿಚಿತ್ರವಾದ (ವಿರುದ್ಧ ಆಹಾರ) ಆಹಾರ ಜೋಡಿ ಮಾಡಿ ಸೇವನೆ ಮಾಡುವುದನ್ನು ತಪ್ಪಿಸಿ. ಎಲ್ಲಾ ಆರು ರುಚಿಗಳನ್ನು ಸೇರಿಸಿ ಅಂದರೆ ಸಿಹಿ, ಹುಳಿ, ಉಪ್ಪು, ಕಹಿ, ಖಾರ ಹೀಗೆ ಎಲ್ಲವೂ ಆಹಾರದಲ್ಲಿ ಮುಖ್ಯವಾಗಿದೆ.
  • ಲಿವರ್ ಆರೋಗ್ಯವಾಗಿರಲು ನೀರು ಕುಡಿಯುವುದು ಮಾತ್ರವಲ್ಲ, ದೇಹದಿಂದ ವಿಷ ಹೊರಹಾಕಲು ಸಹಾಯ ಮಾಡುವ ಗಿಡಮೂಲಿಕೆ ಚಹಾಗಳನ್ನು ಕುಡಿಯಿರಿ. ಯಕೃತ್ತಿಗೆ ಅನುಕೂಲಕರವಾಗಿರುವ ಆಹಾರಗಳು ಅಂದರೆ ಜೀರ್ಣಕ್ರಿಯೆಗೆ ಸುಲಭವಾಗಲು ಮೃದುವಾಗಿರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ.
  • ಆಯುರ್ವೇದ ಹೇಳುವ ಧಾನ್ಯಗಳನ್ನು ಸೇವಿಸಿ, ಅಕ್ಕಿ, ಓಟ್ಸ್, ಗೋಧಿ, ರಾಗಿ, ಬಾರ್ಲಿ ಮುಂತಾದ ಧಾನ್ಯಗಳು ಹೆಸರುಕಾಳು ಮತ್ತು ಮಸೂರಗಳಂತಹ ದ್ವಿದಳ ಧಾನ್ಯಗಳು, ಸೇಬು, ಅಂಜೂರ, ಪಪ್ಪಾಯಿ ಮತ್ತು ದಾಳಿಂಬೆಯಂತಹ ಹಣ್ಣುಗಳು, ಕ್ಯಾರೆಟ್ ಮತ್ತು ಬಿಟ್ರೋಟ್ ಗಳಂತಹ ತರಕಾರಿಗಳನ್ನು ಸೇವಿಸಿ. ಹಾಲು, ತುಪ್ಪ ಮತ್ತು ಮಜ್ಜಿಗೆ ಕೂಡ ಉತ್ತಮ ಆಯ್ಕೆ. ಪನೀರ್ ಅನ್ನು ಅಪರೂಪಕ್ಕೆ ಮಾತ್ರ ತಿನ್ನಿ.
  • ನಿಮ್ಮ ಯಕೃತ್ತಿನ ಆರೋಗ್ಯ ಹೆಚ್ಚಿಸುವ ಆಹಾರಗಳನ್ನು ಸೇವಿಸಿ. ಮಸಾಲೆಗಳು ಕೇವಲ ರುಚಿಗೆ ಮಾತ್ರವಲ್ಲ, ಅವು ಯಕೃತ್ತಿಗೆ ಒಳ್ಳೆಯ ಸ್ನೇಹಿತರು. ಅರಿಶಿನ ಬಳಸುವುದರಿಂದ ಇದರಲ್ಲಿರುವ ಕರ್ಕ್ಯುಮಿನ್‌ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇನ್ನು ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಕರಿಮೆಣಸು ಇವೆಲ್ಲವೂ ಜೀರ್ಣಕ್ರಿಯೆ ಮತ್ತು ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತದೆ.

ಇವೆಲ್ಲವೂ ಕೇವಲ ಆಹಾರವಲ್ಲ, ಇದು ಒಂದುರೀತಿಯ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಪರಿ. ಚೆನ್ನಾಗಿ ತಿನ್ನುವುದು ಮಾತ್ರವಲ್ಲ ಪ್ರತಿನಿತ್ಯ ವಾಕಿಂಗ್ ಅಥವಾ ಯೋಗಮಾಡುವುದು ಕೂಡ ಯಕೃತ್ತಿನ ಕಾರ್ಯವನ್ನು ಬೆಂಬಲಿಸುತ್ತದೆ. ಮಾತ್ರವಲ್ಲ ಒಳ್ಳೆ ನಿದ್ರೆ ಕೂಡ ಬಹಳ ಮುಖ್ಯ ಏಕೆಂದರೆ ಆ ಸಮಯದಲ್ಲಿಯೇ ಯಕೃತ್ತು ತನ್ನ ದುರಸ್ತಿ ಕೆಲಸವನ್ನು ಮಾಡುತ್ತದೆ, ಆದ್ದರಿಂದ ವಿಶ್ರಾಂತಿಗೆ ಅಡ್ಡಿಪಡಿಸಬೇಡಿ. ಆಯುರ್ವೇದ ಹೇಳುವ ಈ ರೀತಿಯ ದೈನಂದಿನ ಅಭ್ಯಾಸಗಳು ಲಿವರ್ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ