Seasonal Diet Changes
ಚಳಿಗಾಲದಲ್ಲಿ (Winter) ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಏಕೆಂದರೆ ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ, ವಿವಿಧ ರೀತಿಯ ರೋಗಗಳು ಕಾಡುವ ಭಯವಿರುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದು ನಿಮ್ಮನ್ನು ಅನಾರೋಗ್ಯದಿಂದ ರಕ್ಷಿಸುವುದು ಮಾತ್ರವಲ್ಲ ದೇಹವನ್ನು ಯಾವಾಗಲೂ ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ನಮ್ಮ ಆಹಾರ ಪದ್ಧತಿ ಸರಿಯಾಗಿದ್ದಲ್ಲಿ ಆರೋಗ್ಯ ಚೆನ್ನಾಗಿಯೇ ಇರುತ್ತದೆ. ಹಾಗಾಗಿ ನಾವು ಸೇವನೆ ಮಾಡುವ ಆಹಾರಗಳಲ್ಲಿ ಕೆಲವು ಪದಾರ್ಥಗಳನ್ನು ತಪ್ಪದೆ ಸೇವನೆ ಮಾಡಬೇಕು. ಏಕೆಂದರೆ ಅವುಗಳಲ್ಲಿರುವ ಔಷಧೀಯ ಗುಣಗಳು ನಮ್ಮ ದೇಹವನ್ನು ರೋಗಗಳಿಂದ ರಕ್ಷಣೆ ಮಾಡುತ್ತದೆ. ಹಾಗಾದರೆ ಚಳಿಗಾಲದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು, ಇದು ನಮ್ಮ ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- ಚಳಿಗಾಲದಲ್ಲಿ, ಪ್ರತಿನಿತ್ಯ ಬೆಳಿಗ್ಗೆ ಆಮ್ಲಾ ರಸವನ್ನು ಸೇವಿಸುವ ಮೂಲಕ ದಿನವನ್ನು ಪ್ರಾರಂಭಿಸಬೇಕು. ಏಕೆಂದರೆ ಈ ಆಮ್ಲಾ ರಸದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಇದನ್ನು ತಪ್ಪದೆ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ರೋಗಗಳು ಬರುವುದಿಲ್ಲ.
- ಪ್ರತಿನಿತ್ಯ ಬೆಚ್ಚಗಿನ ನೀರಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿಗೆ ಒಂದು ಚಮಚ ತುಪ್ಪ ಬೆರೆಸಿ ಕುಡಿಯಿರಿ ಇದು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೂ ಸಹ ಸಹಾಯ ಮಾಡುತ್ತದೆ.
- ಚಳಿಗಾಲದ ದಿನಗಳಲ್ಲಿ ಪ್ರತಿದಿನ ರಾತ್ರಿ ಮಲಗುವ ಮುನ್ನ, 5 ಬಾದಾಮಿಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ಉಪಾಹಾರ ಸೇವನೆ ಮಾಡುವುದಕ್ಕಿಂತ ಸ್ವಲ್ಪ ಮೊದಲು, ಈ ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ಸೇವಿಸಿ. ಇದು ಆರೋಗ್ಯವಾಗಿರಲು ಬಹಳ ಸಹಾಯ ಮಾಡುತ್ತದೆ. ಇದನ್ನು ಚಳಿಗಾಲದಲ್ಲಿ ಮಾತ್ರವಲ್ಲ ಪ್ರತಿನಿತ್ಯವೂ ಮಾಡಬಹುದು.
- ಸಾಮಾನ್ಯವಾಗಿ ಚಳಿಗಾಲದಲ್ಲಿ ನೆನೆಸಿಟ್ಟ ಒಣದ್ರಾಕ್ಷಿಗಳ ಸೇವನೆ ಮಾಡುವುದು ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ನೀರಿನಲ್ಲಿ ನೆನೆಸಿ ದಿನವಿಡೀ ಸಮಯ ಸಿಕ್ಕಾಗಲೆಲ್ಲಾ ತಿನ್ನುವ ಅಭ್ಯಾಸ ಬಹಳ ಒಳ್ಳೆಯದು. ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಒಣದ್ರಾಕ್ಷಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವುದಕ್ಕೂ ಕೂಡ ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ