ಜನರ ಜೀವದ ಜತೆ ಚೆಲ್ಲಾಟವಾಡುತ್ತಿರುವ ಬ್ಯೂಟಿ ಕ್ಲಿನಿಕ್‌ಗಳಿಗೆ ಶಾಕ್ ಕೊಟ್ಟ ಸರ್ಕಾರ
ನಕಲಿ ವೈದ್ಯರು ನಡೆಸುತ್ತಿದ್ದ ಬ್ಯೂಟಿ ಕ್ಲಿನಿಕ್‌ಗಳಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ಜೀವಕ್ಕೆ ಅಪಾಯ ತರುವ ಚಿಕಿತ್ಸೆಗಳು ಹಾಗೂ ಅಕ್ರಮ ಶುಲ್ಕ ವಸೂಲಿಗೆ ಅಂತ್ಯ ಹಾಡಲು ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ. ಇನ್ನು ಮುಂದೆ ಎಲ್ಲಾ ಸೌಂದರ್ಯ ಚಿಕಿತ್ಸಾ ಕೇಂದ್ರಗಳು ಕಡ್ಡಾಯವಾಗಿ KPME ಅಡಿ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

ಬೆಂಗಳೂರು, ನವೆಂಬರ್ 21: ಈಗಂತೂ ಪ್ರತಿಯೊಬ್ಬರಿಗೂ ಬ್ಯೂಟಿ (Beauty) ಬಗ್ಗೆ ಸಿಕ್ಕಾಪಟ್ಟೆ ಕಾನ್ಶಿಯಸ್. ಸ್ಕಿನ್, ತಲೆ ಕೂದಲು ಚೆನ್ನಾಗಿ ಇರಬೇಕು, ಮುಖದಲ್ಲಿ ಪಿಂಪಲ್ಸ್ ಇರಬಾರದು ಅಂತಾ ಸದಾ ಬ್ಯೂಟಿ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಇನ್ನು ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಬ್ಯೂಟಿ ಟ್ರೀಟ್ಮೆಂಟ್ ಕೂಡ ಪಡೆಯುತ್ತಾರೆ. ಅಂತವರು ಇನ್ಮುಂದೆ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು. ತೆಳ್ಳಗೆ, ಬೆಳಗ್ಗೆ ಕಾಣಬೇಕು ಅಂತ ನೀವು ಲಕ್ಷಾಂತರ ರೂ. ಖರ್ಚು ಮಾಡಿ ತೋರಿಸಿಕೊಳುವ ಆಸ್ಪತ್ರೆಗಳೇ (Clinics) ಜನರ ಜೀವ ತೆಗೆಯುತ್ತಿವೆ. ಹೀಗಾಗಿ ಸರ್ಕಾರ ಇದಕ್ಕೆಲ್ಲಾ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ.
ಬ್ಯೂಟಿ ಟ್ರೀಟ್ಮೆಂಟ್ ಪಡೆಯುವವರ ಸಂಖ್ಯೆ ಹೆಚ್ಚಳ
ಸುಂದರವಾಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಕೆಲವರು ನ್ಯಾಚುರಲ್ ಬ್ಯೂಟಿ ಹೊಂದಿದ್ದರೆ, ಮತ್ತೆ ಕೆಲವರು ಬ್ಯೂಟಿ ಟ್ರೀಟ್ಮೆಂಟ್ ತಗೊಂಡು ಮತ್ತಷ್ಟು ಚೆನ್ನಾಗಿ ಕಾಣಲು ಯತ್ನಿಸ್ತಾರೆ. ಕೆಲವರು ಬಾಡಿ ಸ್ಪಾ ಮೊರೆ ಹೋದರೆ ಇತ್ತೀಚಿಗೆ ಬ್ಯೂಟಿ ಟ್ರೀಟ್ಮೆಂಟ್ ಪಡೆಯುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಇದಕ್ಕೆ ತಕ್ಕಂತೆ ನಗರದಲ್ಲಿ ನಕಲಿ ವೈದ್ಯರ ಹಾವಳಿ ಕೂಡ ಹೆಚ್ಚಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಯಾವುದೇ ಎಂಬಿಬಿಎಸ್ ಪಡೆಯದೇ, ಡರ್ಮಟಾಲಜಿ ಪ್ರಾಕ್ಟೀಸ್ ಮಾಡದೇ ಬ್ಯೂಟಿ ಕ್ಲಿನಿಕ್ ನಡೆಸಿ ಲಕ್ಷ ಲಕ್ಷ ಹಣ ಪೀಕ್ತಿದ್ದಾರೆ. ಹೇರ್ ಟ್ರಾನ್ಸ್ ಪ್ಲಾಂಟ್ ಬೋರ್ಡ್ ಹಾಕಿಕೊಂಡು ವಂಚಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಕಡಿವಾಣಕ್ಕೆ ಮುಂದಾಗಿದೆ. ಈ ಎಲ್ಲಾ ಚಿಕಿತ್ಸಾ ಕೇಂದ್ರಗಳನ್ನ ಆರೋಗ್ಯ ಇಲಾಖೆ ಅಡಿಯಲ್ಲಿ ತರಲು ಆರೋಗ್ಯ ಇಲಾಖೆ ಮುಂದಾಗಿದೆ.
ಬಾಡಿ ಸ್ಪಾ, ಮಸಾಜ್ ಥೆರಪಿ ಸೆಂಟರ್, ಸ್ಕಿನ್ ಕೇರ್ ಸಲೂನ್ ಶಾಪ್, ಲೇಸರ್ ಟ್ರೀಟ್ಮೆಂಟ್, ಸ್ಕಿನ್ ಥೆರಪಿ ಹಾಗೂ ವಿವಿಧ ಲ್ಯಾಬ್ ಹಾಗೂ ಕ್ಲಿನಿಕ್‌ಗಳಿಗೆ ಶಾಕ್ ಕೊಡಲು ಆರೋಗ್ಯ ಇಲಾಖೆ ಮುಂದಾಗಿದೆ. ಆ ಮೂಲಕ ಸಲೂನ್ ಶಾಪ್, ಥೆರಪಿ ಕ್ಲಿನಿಗಳು ಸೇರಿ ಎಲ್ಲರೂ ಕಡ್ಡಾಯವಾಗಿ ಕೆಪಿಎಂಇ ಅಡಿಯಲ್ಲಿ ಲೈಸನ್ಸ್ ಪಡೆಯಬೇಕು. ಇಲ್ಲವಾದರೆ ಆಸ್ಪತ್ರೆ ಅಥವಾ ನರ್ಸಿಂಗ್ ಹೋಂಗಳು ಕ್ಲೋಸ್ ಆಗೋದು ಪಕ್ಕಾ. ಈ ಕುರಿತಾಗಿ ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ.
ಲೈಸೆನ್ಸ್ ಕಡ್ಡಾಯ
ಯಾವುದೇ ಥೆರಪಿ ಕ್ಲಿನಿಕ್ಗಳಲ್ಲಿ ತಜ್ಞರ ಸೂಚನೆ ಇಲ್ಲದೆ ಬೇಕಾಬಿಟ್ಟಿ ಚಿಕಿತ್ಸೆ ನೀಡಲಾಗ್ತಿತ್ತು. ಅನೇಕರಿಗೆ ಮುಖದ ಚರ್ಮ, ಕೂದಲು ಸೇರಿದಂತೆ ಜೀವಕ್ಕೆ ಕುತ್ತು ತಂದಿತ್ತು. ಈ ಬಗ್ಗೆ ಅನೇಕ ದೂರುಗಳು ಬಂದ ಹಿನ್ನಲೆ, ಇನ್ಮುಂದೆ ಆರೋಗ್ಯ ಇಲಾಖೆಯಿಂದ ಲೈಸೆನ್ಸ್ ಕಡ್ಡಾಯಗೊಳಿಸಿ ಆದೇಶ ನೀಡಿದೆ. 2007 ಕರ್ನಾಟಕ ಖಾಸಗಿ ವೈದ್ಯಕೀಯ ಪ್ರತಿಷ್ಠಾನಗಳ ಅಧಿನಿಯಮ ಜಾರಿ ಮಾಡಿದೆ. ಲೈಸೆನ್ಸ್ ಪಡೆಯದೆ ಹೋದರೆ, ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಲು ಇಲಾಖೆ ಮುಂದಾಗಿದೆ.
ಇದನ್ನೂ ಓದಿ: Dog Bite Relief Fund: ನಾಯಿ ಕಚ್ಚಿ ಸಾವನ್ನಪ್ಪಿದವರಿಗೆ 5 ಲಕ್ಷ ರೂ.ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
ಒಟ್ಟಿನಲ್ಲಿ ಇಷ್ಟು ದಿನ ಎಸ್ಥೆಟಿಕ್ ಸೆಂಟರ್ ಅಂತ ತೆರೆದು ಗ್ರಾಹಕರಿಗೆ ಮಕಮಲ್ ಟೋಪಿ ಹಾಕಲಾಗುತ್ತಿತ್ತು. ಒಂದು ಕಡೆ ಮೋಸ ಹೋದರೆ, ಅನ್ ಎಥಿಕಲ್ ಪ್ರಾಕ್ಟೀಸ್ ಜೀವಕ್ಕೆ ಮಾರಕವಾಗುತ್ತಿತ್ತು. ಕೆಪಿಎಂಇ ಅಂಡರ್ ನಲ್ಲಿ ಈ ಎಲ್ಲಾ ಕ್ಲಿನಿಕ್ ಥೆರಪಿ ಸೆಂಟರ್ಗಳು ಇಲ್ಲದೆ ಆರೋಗ್ಯ ಇಲಾಖೆಗೆ ಸೂಕ್ತ ಕ್ರಮಕ್ಕೂ ಸಾಧ್ಯವಾಗಿರಲಿಲ್ಲ ಈಗ ಆದೇಶ ಮಾಡಿದ್ದು ಕಡಿವಾಣಕ್ಕೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.