Heart Problem: ನಿಮ್ಮ ಹೃದಯ ಅಪಾಯದಲ್ಲಿದೆ ಎಂದು ಸೂಚಿಸುವ ಈ 4 ಚಿಹ್ನೆಗಳ ಬಗ್ಗೆ ಎಚ್ಚರವಿರಲಿ

| Updated By: ನಯನಾ ರಾಜೀವ್

Updated on: Oct 06, 2022 | 10:52 AM

ಹೃದಯ ಅಪಾಯದಲ್ಲಿದೆ ಎಂದು ಸೂಚಿಸುವ ಕೆಲವು ಚಿಹ್ನೆಗಳಿವೆ ಅದರ ಬಗ್ಗೆ ಸ್ವಲ್ಪ ಎಚ್ಚರದಿಂದಿರಬೇಕು. ಒಮ್ಮೆಲೆ ಹೃದಯಾಘಾತ ಸಂಭವಿಸಿಬಿಡುತ್ತದೆ, ಆಗ ಎಯ್ಯೋ ಹೃದಯಾಘಾತ ಆಗುತ್ತೆ ಎನ್ನುವ ನಿರೀಕ್ಷೆಯೇ ಇರಲಿಲ್ಲ, ಯಾವುದೇ ಲಕ್ಷಣವೂ ಇರಲಿಲ್ಲ ಎಂದು ನೀವಂದುಕೊಳ್ಳಬಹುದು.

Heart Problem: ನಿಮ್ಮ ಹೃದಯ ಅಪಾಯದಲ್ಲಿದೆ ಎಂದು ಸೂಚಿಸುವ ಈ 4 ಚಿಹ್ನೆಗಳ ಬಗ್ಗೆ ಎಚ್ಚರವಿರಲಿ
Chest Pain
Follow us on

ಹೃದಯ ಅಪಾಯದಲ್ಲಿದೆ ಎಂದು ಸೂಚಿಸುವ ಕೆಲವು ಚಿಹ್ನೆಗಳಿವೆ ಅದರ ಬಗ್ಗೆ ಸ್ವಲ್ಪ ಎಚ್ಚರದಿಂದಿರಬೇಕು. ಒಮ್ಮೆಲೆ ಹೃದಯಾಘಾತ ಸಂಭವಿಸಿಬಿಡುತ್ತದೆ, ಆಗ ಎಯ್ಯೋ ಹೃದಯಾಘಾತ ಆಗುತ್ತೆ ಎನ್ನುವ ನಿರೀಕ್ಷೆಯೇ ಇರಲಿಲ್ಲ, ಯಾವುದೇ ಲಕ್ಷಣವೂ ಇರಲಿಲ್ಲ ಎಂದು ನೀವಂದುಕೊಳ್ಳಬಹುದು.

ಆದರೆ ರೋಗಿಯಲ್ಲಿ ಕೆಲವು ಲಕ್ಷಣಗಳು ಗೋಚರಿಸಿರುತ್ತವೆ, ಆದರೆ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಹಾಗೂ ಬೇರೆಯವರೊಂದಿಗೆ ಆ ಮಾಹಿತಿಯನ್ನು ಹಂಚಿಕೊಂಡಿರುವುದಿಲ್ಲ.

ಹೃದ್ರೋಗ ಏಕಾಏಕಿ ಬರುವುದಿಲ್ಲ, ಮುನ್ನ ಹಲವು ಲಕ್ಷಣಗಳು ಗೋಚರಿಸುತ್ತವೆ. ಬಾಯಿಯಿಂದ ದುರ್ವಾಸನೆ, ವಸಡಿಗೆ ಸಂಬಂಧಿಸಿದ ಸಮಸ್ಯೆ, ವಿಪರೀತ ಕಾಲು ನೋವು, ಎದೆ ನೋವು ಇವೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರುತ್ತವೆ.

ಎಲ್ಲರೂ ಹೃದಯಾಘಾತದ ಸಂಭವನೀಯ ಚಿಹ್ನೆಗಳ ಬಗ್ಗೆ ತಿಳಿದಿರುವುದು ಮುಖ್ಯ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (CDC) ಹೃದಯ-ಆರೋಗ್ಯಕರ ಜೀವನಶೈಲಿಯನ್ನು ಅಭ್ಯಾಸ ಮಾಡಿ ಅದು ಸರಿಯಾದ ಆಹಾರ ಮತ್ತು ಸಾಕಷ್ಟು ದೈಹಿಕ ವ್ಯಾಯಾಮವನ್ನು ಒಳಗೊಂಡಿರುತ್ತದೆ ಮತ್ತು ನೀವು ಹೃದಯರಕ್ತನಾಳದ ಸಮಸ್ಯೆಗಳನ್ನು ಹೊಂದಿರುವ ಯಾವುದೇ ಎಚ್ಚರಿಕೆಯ ಚಿಹ್ನೆಗಳು ಕಾಣಿಸಿದರೂ ತಕ್ಷಣವೇ ವೈದ್ಯರ ಬಳಿ ತೆರಳಿ. ಹೃದ್ರೋಗ ಅಪಾಯವನ್ನು ಸೂಚಿಸುವ ಈ ಚಿಹ್ನೆಗಳ ಬಗ್ಗೆ ಎಚ್ಚರವಿರಲಿ.

1. ದವಡೆ ನೋವು
ದವಡೆ ನೋವು, ಹಲ್ಲು ನೋವು, ಕತ್ತು ನೋವು ಅಸ್ವಸ್ಥತೆಯನ್ನು ತೋರುತ್ತದೆ. ಇದು ಟೆಂಪೊಮಾಮಾಂಡಿಬ್ಯುಲರ್ ಕೀಲುಗಳ (TMJ) ಅಸ್ವಸ್ಥತೆಗಳಂತಹ ಇತರ ಪರಿಸ್ಥಿತಿಗಳನ್ನು ಸೂಚಿಸುತ್ತದೆ ಎಂಬುದು ನಿಜ .
ಆದರೆ ನಿಮ್ಮ ದವಡೆ, ಬೆನ್ನು, ಕುತ್ತಿಗೆ ಅಥವಾ ತೋಳುಗಳಲ್ಲಿ ಕಾಣಿಸಿಕೊಳ್ಳುವ ನೋವು ಹೃದಯ ಸ್ಥಿತಿಯನ್ನು ಸೂಚಿಸಬಹುದು, ನಿರ್ದಿಷ್ಟ ಸ್ನಾಯು ಅಥವಾ ಕೀಲು ನೋವು ಇಲ್ಲದೆ ನೋವು ಏಕಾಏಕಿ ನೋವು ಕಾಣಿಸಿಕೊಳ್ಳಬಹುದು. ನೀವು ವ್ಯಾಯಾಮ ಮಾಡುವಾಗ ಅಸ್ವಸ್ಥತೆ ಕಾಡಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಿ.

2.ವಿಪರೀತ ಬೆವರುವುದು
ಬೆವರು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳಬಹುದು ಮತ್ತು ವಿಪರೀತ ಬೆವರುವಿಕೆಯು ಋತುಬಂಧ ಸೇರಿದಂತೆ ವಿವಿಧ ಪರಿಸ್ಥಿತಿಗಳಿಂದ ಉಂಟಾಗಬಹುದು. ಇದು ಗೊಂದಲಕ್ಕೆ ಕಾರಣವಾಗಬಹುದು. ರಾತ್ರಿ ಸಮಯದಲ್ಲಿ ಮಹಿಳೆಯರು ಹೆಚ್ಚು ಬೆವರಿದರೆ ಋತುಬಂಧದ ಸಮಸ್ಯೆ ಎಂದು ತಿಳಿಯಬೇಡಿ. ಅತಿಯಾದ ಬೆವರುವಿಕೆ, ನಿದ್ರಾಹೀನತೆಯು ಹೃದಯಾಘಾತದ ಸಂಕೇತವಾಗಿರಬಹುದು.
ಈ ಸಮಯದಲ್ಲಿ ಹೃದಯವು ರಕ್ತವನ್ನು ಪಂಪ್ ಮಾಡುವಲ್ಲಿ ಕಷ್ಟವನ್ನು ಅನುಭವಿಸುತ್ತದೆ.

3.ಆಯಾಸ
ಸಾಮಾನ್ಯ ಆಯಾಸ ಬೇರೆ ಆದರೆ ಹೃದಯಾಘಾತ ಅಥವಾ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಂಡಾಗ ಆಗುವ ಆಯಾಸವೇ ಬೇರೆ. ಆದರೆ ಹೃದಯಕ್ಕೆ ಸಂಬಂಧಿಸಿದ ಆಯಾಸದಿಂದ ಬಳಲುತ್ತಿರುವವರಿಗೆ ನಿಲ್ಲಲು, ಕೂರಲು ಕೂಡ ತೊಂದರೆ ಅನುಭವಿಸುತ್ತಾರೆ.
ಒಂದೆರಡು ಮೆಟ್ಟಿಲುಗಳನ್ನು ಹತ್ತಿದರೂ ತುಂಬಾ ಸುಸ್ತಾಗುವುದು, ಕಾಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಇವೆಲ್ಲವೂ ಹೃದ್ರೋಗದ ಲಕ್ಷಣವಾಗಿದೆ.
ಜ್ವರ ಬಂದಾಗ ದೇಹ ದುರ್ಬಲವಾದಂತೆ ಈಗಲೂ ನಿಮ್ಮ ದೇಹ ದುರ್ಬಲವಾಗಿರಬಹುದು
ಹೃದಯ ಸಂಬಂಧಿ ಕಾಯಿಲೆಯಿಂದ ನೀವು ಬಳಲುತ್ತಿದ್ದರೆ, ಜ್ವರ ಬಂದಾಗ ದೇಹ ದುರ್ಬಲವಾಗುವಂತೆ ಈಗಲೂ ಆಗಬಹುದು. ದೇಹದಲ್ಲಿ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು.

4.ಎದೆ ನೋವು
ಎದೆ ನೋವನ್ನು ಸಾಮಾನ್ಯವಾಗಿ ಹೃದಯದ ಸಮಸ್ಯೆಯ ಸಂಭಾವ್ಯ ಲಕ್ಷಣವೆಂದು ಭಾವಿಸಲಾಗುತ್ತದೆ, ಆದರೆ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು “ಇದು ತೀಕ್ಷ್ಣವಾದ ಸಂವೇದನೆಯಿಂದ ಎದೆಯ ಮೇಲೆ ಮಂದವಾದ ನೋವಿನವರೆಗೆ ಹಲವು ರೂಪಗಳಲ್ಲಿ ಪ್ರಕಟವಾಗುತ್ತದೆ ಎಂದು ಹೇಳಲಾಗುತ್ತದೆ.
ಈ ನೋವು ಹೃದಯ ಸ್ನಾಯು ಸಾಕಷ್ಟು ಆಮ್ಲಜನಕ-ಸಮೃದ್ಧ ರಕ್ತವನ್ನು ಸ್ವೀಕರಿಸದಿದ್ದಾಗ ಸಂಭವಿಸುತ್ತದೆ, ಇದಲ್ಲದೆ, ಕೆಲವು ಜನರು ಯಾವುದೇ ನೋವು ಅನುಭವಿಸುವುದಿಲ್ಲ ಆದರೆ ಉಸಿರಾಟದ ತೊಂದರೆ ಅಥವಾ ಆಯಾಸದಂತಹ ಇತರ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ರೋಗಲಕ್ಷಣಗಳು ಹೃದಯ ಸ್ನಾಯುಗಳಿಗೆ ಆಮ್ಲಜನಕದ ವ್ಯತ್ಯಯ ಉಂಟಾಗಲಿದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ