Black Coffe: ನಿಮ್ಮ ತೂಕ ಇಳಿಸುವಲ್ಲಿ ಬ್ಲ್ಯಾಕ್ ಕಾಫಿ ನಿಜವಾಗಿಯೂ ಪರಿಣಾಮಕಾರಿಯೇ?

ಬೆಳಿಗ್ಗೆ ಬೆಚ್ಚಗಿನ ಕಾಫಿ ಇಲ್ಲದೆ ದಿನವನ್ನು ಕಳೆಯಲು ಕಷ್ಟಪಡುವವರು ಅನೇಕರಿದ್ದಾರೆ.

Black Coffe: ನಿಮ್ಮ ತೂಕ ಇಳಿಸುವಲ್ಲಿ ಬ್ಲ್ಯಾಕ್ ಕಾಫಿ ನಿಜವಾಗಿಯೂ ಪರಿಣಾಮಕಾರಿಯೇ?
Black Coffe
Image Credit source: Mashed
Edited By:

Updated on: Nov 11, 2022 | 6:29 PM

ನಮ್ಮಲ್ಲಿ ಕಾಫಿಯು ಪ್ರಿಯರು ಅನೇಕರಿದ್ದಾರೆ. ದಿನ ಪ್ರಾರಂಭದ ಬೆಡ್ ಕಾಫಿಯಿಂದ ಹಿಡಿದು ರಾತ್ರಿಯ ವರೆಗೂ ಕಾಫಿ ಬೇಕೇ ಅನ್ನುವ ಜನರು ಸಾಕಷ್ಟು ಇದ್ದಾರೆ. ಆದರೆ ದೇಹಕ್ಕೆ ಕಾಫಿ ನಿಜವಾಗಿಯೂ ಉತ್ತಮವೇ ಇದ್ದರಿಂದ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಕಾಫಿಯಲ್ಲಿ ಅನೇಕ ಪ್ರಯೋಜನಕಾರಿ ಅಂಶಗಳನ್ನು ಹೊಂದಿದ್ದು, ನಿಮ್ಮ ದೇಹದ ಹೆಚ್ಚಿನ ತೂಕವನ್ನು ಇಳಿಸಲು ಸಹಾಯಮಾಡುತ್ತದೆ.

ಬೆಳಿಗ್ಗೆ ಬೆಚ್ಚಗಿನ ಕಾಫಿ ಇಲ್ಲದೆ ದಿನವನ್ನು ಕಳೆಯಲು ಕಷ್ಟಪಡುವವರು ಅನೇಕರಿದ್ದಾರೆ. ನೀವು ತಡರಾತ್ರಿಯವರೆಗೆ ಕೆಲಸ ಮಾಡುವವರಲ್ಲಿ ಒಬ್ಬರಾಗಿದ್ದರೆ ಅಥವಾ ಬಹುಶಃ ಬೆಳಗಿನ ಜಾವದವರೆಗೂ ಎಚ್ಚರದಿಂದಿರಬೇಕಾದರೆ, ಕಾಫಿ ಕುಡಿಯುವುದು ಒಂದು ಉತ್ತಮ ಪರಿಹಾರವಾಗಿದೆ.

ಆದರೆ, ನಮ್ಮನ್ನು ಎಚ್ಚರವಾಗಿ ಮತ್ತು ಕ್ರಿಯಾಶೀಲರನ್ನಾಗಿ ಮಾಡುವ ಸಾಮರ್ಥ್ಯದ ಹೊರತಾಗಿಯೂ, ಕಾಫಿಯು ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ನೀವು ಯಾವುದೇ ಸಿಹಿ ಇಲ್ಲದೆ ಕಾಫಿ ಕುಡಿದರೆ, ಪರಿಣಾಮವು ದ್ವಿಗುಣಗೊಳ್ಳುತ್ತದೆ. ಕಪ್ಪು ಕಾಫಿಯು ಕೆಫೀನ್‌ಗಿಂತ ಹೆಚ್ಚಿನದನ್ನು ಮತ್ತು ಹಿತವಾದ ಪರಿಮಳವನ್ನು ನೀಡುತ್ತದೆ.

ದಿನಕ್ಕೆ ನಾಲ್ಕು ಕಪ್ ಕಾಫಿ ಕುಡಿಯುವುದರಿಂದ ದೇಹದ ಕೊಬ್ಬನ್ನು ಶೇಕಡಾ 4 ರಷ್ಟು ಕಡಿಮೆ ಮಾಡಬಹುದು ಎಂದು ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಬ್ಲ್ಯಾಕ್ ಕಾಫಿಯು ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ?

1. ಬ್ಲ್ಯಾಕ್ ಕಾಫಿಯಲ್ಲಿನ ಕ್ಯಾಲೋರಿಗಳು:
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA) ಪ್ರಕಾರ, ನೀವು ಕುಡಿಯುವ ಸಾಮಾನ್ಯ ಒಂದು ಕಪ್ ಕಾಫಿಯಲ್ಲಿ ಎರಡು ಕ್ಯಾಲೋರಿಗಳನ್ನು ಹೊಂದಿರುತ್ತದೆ.ಮತ್ತೊಂದೆಡೆ, ಕಪ್ಪು ಎಸ್ಪ್ರೆಸೊದ ದ್ರವ ಔನ್ಸ್ ಕೇವಲ ಒಂದು ಕ್ಯಾಲೋರಿಯನ್ನು ಹೊಂದಿರುತ್ತದೆ. ನೀವು ಡಿಕಾಫಿನೇಟೆಡ್ ಬೀನ್ಸ್ ಅನ್ನು ಬಳಸಿದರೆ ನಿಮ್ಮ ಕಾಫಿಯಲ್ಲಿರುವ ಕ್ಯಾಲೋರಿಗಳ ಸಂಖ್ಯೆ ಶೂನ್ಯಕ್ಕೆ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

2.ಬ್ಲ್ಯಾಕ್ ಕಾಫಿ ತೂಕ ಕಡಿಮೆ ಮಾಡಲು ಸಹಾಯಕವಾಗಿದೆ:
ಬ್ಲ್ಯಾಕ್ ಕಾಫಿಯು ಕ್ಲೋರೊಜೆನಿಕ್ ಆಮ್ಲ ಎಂಬ ವಸ್ತುವನ್ನು ಹೊಂದಿದ್ದು, ಇದು ನಿಮ್ಮ ದೇಹದ ಹೆಚ್ಚುವರಿ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ಬ್ಲ್ಯಾಕ್ ಕಾಫಿಯಲ್ಲಿ ಕ್ಲೋರೊಜೆನಿಕ್ ಆಮ್ಲ ಇರುವುದರಿಂದ ರಾತ್ರಿಯ ಊಟದ ನಂತರ ದೇಹದಲ್ಲಿ ಗ್ಲೂಕೋಸ್ ಉತ್ಪಾದನೆಯನ್ನು ವಿಳಂಬಗೊಳಿಸುತ್ತದೆ. ಇದಲ್ಲದೆ, ಹೊಸ ಕೊಬ್ಬಿನ ಕೋಶಗಳ ಬೆಳೆಯದಂತೆ ಮಾಡುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಕಡಿಮೆ ಕ್ಯಾಲೋರಿಗಳು ಉಂಟಾಗುತ್ತದೆ.
ಕಾಫಿಯಲ್ಲಿರುವ ಕ್ಲೋರೊಜೆನಿಕ್ ಆಮ್ಲವು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ಡಾ. ಸಿಮ್ರಾನ್ ಸೈನಿಯವರು ಹೇಳುತ್ತಾರೆ.

3. ಬ್ಲ್ಯಾಕ್ ಕಾಫಿ ಹಠಾತ್ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ:

ಕಾಫಿಯ ಒಂದು ಅಂಶವಾದ ಕೆಫೀನ್ ನಿಮ್ಮ ದೇಹದ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ. ಕೆಫೀನ್ ನಮ್ಮ ಮೆದುಳು ಮತ್ತು ಕೇಂದ್ರ ನರಮಂಡಲವನ್ನು ಸಕ್ರಿಯವಾಗಿರುವಂತೆ ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ನೆನಪಿನ ಶಕ್ತಿಯ ಮಟ್ಟಗಳ ಸುಧಾರಣೆಗೆ ಸಹಾಯ ಮಾಡುತ್ತದೆ. ಹಠಾತ್ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ಕೊಬ್ಬು ಕರಗಿಸುವ ಸಾಮರ್ಥ್ಯ:
ಹಸಿರು ಕಾಫಿ ಬೀಜಗಳು ನಮ್ಮ ದೇಹದ ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ನಿಮ್ಮ ದೇಹದ ಚಯಾಪಚಯವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ: 40ರ ನಂತರವೂ ನಿಮ್ಮ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳಲು ಇಲ್ಲಿದೆ ಸಲಹೆಗಳು

5. ದೇಹದಲ್ಲಿನ ಹೆಚ್ಚುವರಿ ನೀರಿನ ಅಂಶವನ್ನು ಹೊರಹಾಕಲು ಸಹಾಯಕ:
ಬ್ಲ್ಯಾಕ್ ಕಾಫಿ ದೇಹದಿಂದ ಹೆಚ್ಚುವರಿ ನೀರನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಯಾವುದೇ ಅಪಾಯಕಾರಿ ಅಡ್ಡ ಪರಿಣಾಮಗಳನ್ನು ಉಂಟುಮಾಡದೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆದ್ದರಿಂದ, ತೂಕವನ್ನು ಕಳೆದುಕೊಳ್ಳಲು ಬ್ಲ್ಯಾಕ್ ಕಾಫಿ ನಿಮಗೆ ಸಹಾಯಕವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: