ಹಲ್ಲಿನ ಕೊಳೆಯುವಿಕೆಯ ವಿರುದ್ಧ ಪರಿಣಾಮಕಾರಿ ನೈಸರ್ಗಿಕ ಔಷಧಗಳು

|

Updated on: Jul 02, 2023 | 6:05 PM

ಆಂಟಿಬಯೋಟಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಹಲ್ಲಿನ ಕುಳಿಗಳ ಸಮಸ್ಯೆಯನ್ನು ಕಡಿಮೆ ಮಾಡುವ ನೈಸರ್ಗಿಕವಾಗಿ ಸಂಭವಿಸುವ ಅಣುವನ್ನು ಕಂಡುಹಿಡಿದಿದೆ.

ಹಲ್ಲಿನ ಕೊಳೆಯುವಿಕೆಯ ವಿರುದ್ಧ ಪರಿಣಾಮಕಾರಿ ನೈಸರ್ಗಿಕ ಔಷಧಗಳು
Follow us on

ಬಾಯಿಯ ಆರೋಗ್ಯದ ವಿಷಯಕ್ಕೆ ಬಂದಾಗ ಬಾಯಿಯ ನೈರ್ಮಲ್ಯ ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ನೈರ್ಮಲ್ಯವು ಯಾವುದೇ ಕಾಯಿಲೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಂಟಿಬಯೋಟಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಹಲ್ಲಿನ ಕುಳಿಗಳ ಸಮಸ್ಯೆಯನ್ನು ಕಡಿಮೆ ಮಾಡುವ ನೈಸರ್ಗಿಕವಾಗಿ ಸಂಭವಿಸುವ ಅಣುವನ್ನು ಕಂಡುಹಿಡಿದಿದೆ. ಈ ಅಣುವು ಬಾಯಿಯ ಪ್ಲೇಗ್‌ಗೆ ಜನ್ಮ ನೀಡುವ ಜೈವಿಕ ಸೂಕ್ಷ್ಮಾಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಬಾಯಿಯ ಕುಳಿಗಳನ್ನು ತಡೆಗಟ್ಟಲು ಈ ಅಣುವನ್ನು ಟೂತ್‌ಪೇಸ್ಟ್‌ಗಳು ಮತ್ತು ಮೌತ್‌ವಾಶ್‌ಗಳಲ್ಲಿ ಬಳಸಬಹುದು ಎಂದು ಸಂಶೋಧನೆಗಳು ಸೂಚಿಸಿವೆ.

ಡೈಂಡೋಲಿಲ್ಮೆಥೇನ್ ಎಂದೂ ಕರೆಯಲ್ಪಡುವ ಅಣುವು ದಂತ ಗುಳಿಯನ್ನುಂಟು ಮಾಡುವ ಹಲ್ಲುಗಳ ದಂತಕವಚ ಪದರದ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಲ್ಲಿನ ಸಮಸ್ಯೆಗಳನ್ನು ಉಂಟುಮಾಡುವ ಬಹು ಸೂಕ್ಷ್ಮಾಣು ಜೀವಿಗಳಿಗೆ ಬಾಯಿಯು ಅತ್ಯುತ್ತಮ ಸಂತಾನೋತ್ಪತ್ತಿಯ ಸ್ಥಳವಾಗಿದೆ.

ಇದನ್ನೂ ಓದಿ: ದೇಹದ ಮೇಲಿನ ಮಚ್ಚೆಯ ಆಕಾರವು ಬದಲಾಗುತ್ತಿದೆಯೇ? ಇದು ಚರ್ಮದ ಕ್ಯಾನ್ಸರ್​​ನ ಅಪಾಯದ ಸೂಚಕವಾಗಿರಬಹುದು

ಬ್ರೊಕೊಲಿ, ಕೇಲ್ ಎಲೆಗಳು ಮುಂತಾದ ಆಹಾರಗಳು ಡಿಐಎಂ ಅಣುವಿನಲ್ಲಿ ಸಮೃದ್ಧವಾಗಿವೆ. ಮೂಲಭೂತವಾಗಿ, ಈ ಅಣುವು ಕ್ರೂಸಿಫೆರಸ್ ಕುಟುಂಬದ ಕೆಲವು ಸಸ್ಯಗಳಲ್ಲಿ ಕಂಡುಬರುತ್ತದೆ. ಹಲ್ಲಿನ ನೈರ್ಮಲ್ಯವನ್ನು ಸುಧಾರಿಸಲು ನೀವಿದನ್ನು ಟೂತ್‌ಪೇಸ್ಟ್ ಮತ್ತು ಮೌತ್‌ವಾಶ್‌ಗಳಲ್ಲಿ ಸೇರಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: