ಕಮಲದ ಬೇರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ!

ತಾವರೆ ಹೂವು ಹಾಗೂ ಅದರ ಗಿಡವನ್ನು ನೀವೆಲ್ಲರೂ ನೋಡಿರುತ್ತೀರಿ. ಅಷ್ಟೇ ಅಲ್ಲ, ಅವುಗಳ ಬೀಜಗಳು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದಿದೆ. ಆದರೆ ಕಮಲದ ಬೇರನ್ನು ಔಷಧಿಗಾಗಿ ಬಳಸಲಾಗುತ್ತದೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ತಾವರೆ ಗಿಡದ ಬೇರು ಫೈಬರ್ ಮತ್ತು ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ ಗಳಿಂದ ಕೂಡಿದೆ. ಇದು ರಕ್ತಹೀನತೆಯಿಂದ ರಕ್ತದೊತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿಡಲು ಸಹಕಾರಿಯಾಗಿದೆ. ಮಾತ್ರವಲ್ಲ, ಲೋಟಸ್ ರೂಟ್ ನಿಂದ ಚಿಪ್ಸ್, ಸೂಪ್, ಟೀ ಕೂಡಾ ತಯಾರಿಸಬಹುದು. ಹಾಗಾದರೆ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು, ಯಾರು ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಮಲದ ಬೇರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ!
ಕಮಲದ ಬೇರಿನ ಪ್ರಯೋಜನ

Updated on: Dec 02, 2025 | 7:22 PM

ತಾವರೆ ಬೀಜಗಳು (Lotus Seeds) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಆದರೆ ತಾವರೆ ಅಥವಾ ಕಮಲದ ಹೂವಿನ ಬೇರು ಎಷ್ಟು ಒಳ್ಳೆಯದು ಎಂಬುದು ತಿಳಿದಿದೆಯೇ… ಹೌದು, ಇವುಗಳ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲವಾದರೂ ಕೂಡ ಇದನ್ನು ಪುರಾತನ ಕಾಲದಿಂದಲೂ ಔಷಧಿಗಳಲ್ಲಿ ಬಳಸಲಾಗುತ್ತಿದೆ. ಇದನ್ನು ಸೇವಿಸುವುದರಿಂದ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಅಷ್ಟೇ ಅಲ್ಲ, ತಾವರೆ ಗಿಡದ ಬೇರು (Lotus Root) ಫೈಬರ್ ಮತ್ತು ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ ಗಳಿಂದ ಕೂಡಿದೆ. ಇದು ರಕ್ತಹೀನತೆಯಿಂದ ರಕ್ತದೊತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿಡಲು ಸಹಕಾರಿಯಾಗಿದೆ. ಲೋಟಸ್ ರೂಟ್ ಅಥವಾ ತಾವರೆ ಗಿಡದ ಬೇರಿನಿಂದ ಚಿಪ್ಸ್, ಸೂಪ್, ಟೀ ಕೂಡಾ ತಯಾರಿಸಬಹುದಾಗಿದೆ. ಹಾಗಾದರೆ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು, ಯಾರು ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ತಾವರೆ ಬೇರು ಫೈಬರ್‌ ಅಂಶದಿಂದ ಸಮೃದ್ಧವಾಗಿದೆ. ಇದು ಮಲ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡಲು ಸಹಕಾರಿಯಾಗಿದೆ. ಇದರ ಕಾಂಡಗಳಲ್ಲಿರುವ ಪೋಷಕಾಂಶಗಳು ಮಲಬದ್ಧತೆ, ಜೀರ್ಣಕಾರಿ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
  • ಕಬ್ಬಿಣ ಮತ್ತು ತಾಮ್ರದ ಪ್ರಮುಖ ಅಂಶಗಳು ಕಮಲದ ಬೇರುಗಳಲ್ಲಿ ಇರುತ್ತವೆ. ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ರಕ್ತಹೀನತೆಯ ಸಮಸ್ಯೆಗೆ ಮುಕ್ತಿ ನೀಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ, ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಜೊತೆಗೆ, ಇದು ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
  • ತಾವರೆ ಬೇರುಗಳಲ್ಲಿ ತುಂಬಾ ಕಡಿಮೆ ಕ್ಯಾಲೋರಿಗಳಿದ್ದು ಫೈಬ‌ರ್ ಅಂಶ ಅಧಿಕವಾಗಿದೆ. ಹಾಗಾಗಿ ಇದು ಬೇಗ ಹಸಿವಾಗಲು ಬಿಡುವುದಿಲ್ಲ ಮತ್ತು ಕೊಬ್ಬಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡುತ್ತದೆ. ಆ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಕಮಲದ ಬೇರಿನಲ್ಲಿ ಕಂಡುಬರುವ ಪೊಟ್ಯಾಸಿಯಮ್ ದೇಹದಲ್ಲಿನ ದ್ರವಗಳ ನಡುವೆ ಸರಿಯಾದ ಸಮತೋಲನವನ್ನು ಉಂಟುಮಾಡುತ್ತದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಿರಿದಾಗುವಿಕೆ ಮತ್ತು ಬಿಗಿತವನ್ನು ಕಡಿಮೆ ಮಾಡುವ ಮೂಲಕ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಹೃದಯರಕ್ತನಾಳದ ವ್ಯವಸ್ಥೆಯ ಮೇಲಿನ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.
  • ಕಮಲದ ಬೇರನ್ನು ಸೇವಿಸುವ ಮೂಲಕ ನಾವು ನಮ್ಮ ದೇಹವನ್ನು ವಿವಿಧ ಸೋಂಕುಗಳು, ಸಿಡುಬು, ಕುಷ್ಠರೋಗ ಮತ್ತು ರಿಂಗ್‌ವರ್ಮ್‌ನಂತಹ ಶಿಲೀಂಧ್ರ ರೋಗಗಳನ್ನು ತಡೆಯಬಹುದಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ