Apple or Apple Juice: ಸೇಬು ಅಥವಾ ಸೇಬಿನ ರಸ ಯಾವುದು ಆರೋಗ್ಯಕ್ಕೆ ಉತ್ತಮ

ಇತ್ತೀಚಿಗೆ ಸೇಬು ಹಣ್ಣಿನ ಸೇವನೆ ಕಡಿಮೆಯಾಗುತ್ತಿದೆಯಾದರೂ ಇದನ್ನು ಇಷ್ಟ ಪಟ್ಟು ತಿನ್ನುವವರಿದ್ದಾರೆ. ಆದರೆ ಸೇಬುಗಳನ್ನು ಹೇಗೆ ತಿನ್ನುವುದು ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತದೆ. ಅಂದರೆ ಹಣ್ಣುಗಳನ್ನು ಸೇವನೆ ಮಾಡುವುದು ಒಳ್ಳೆಯದೋ ಅಥವಾ ಅದರ ರಸ, ಜ್ಯೂಸ್ ಮಾಡಿ ಕುಡಿಯಬೇಕೋ ಎಂದು ಯೋಚಿಸುವವರೇ ಹೆಚ್ಚು. ಇವೆರಡು ವಿಧಾನಗಳಲ್ಲಿ ಹೆಚ್ಚು ಪಯೋಜನಕಾರಿ ಯಾವುದು? ಹೆಚ್ಚು ಆರೋಗ್ಯ ಪ್ರಯೋಜನ ಯಾವುದರಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Apple or Apple Juice: ಸೇಬು ಅಥವಾ ಸೇಬಿನ ರಸ ಯಾವುದು ಆರೋಗ್ಯಕ್ಕೆ ಉತ್ತಮ
ಸಾಂದರ್ಭಿಕ ಚಿತ್ರ
Edited By:

Updated on: Feb 19, 2025 | 5:56 PM

ದಿನಕ್ಕೆ ಒಂದು ಸೇಬು ಹಣ್ಣು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಸೇಬು ಹಣ್ಣಿಗೆ ಅನೇಕ ಕಾಯಿಲೆಗಳು ಬರದಂತೆ ತಡೆಯುವ ಶಕ್ತಿ ಇದೆ. ಹಾಗಾಗಿಯೇ ಇದನ್ನು ನಿಯಮಿತವಾಗಿ ಸೇವನೆ ಮಾಡಿ ಎಂದು ವೈದ್ಯರು ಹೇಳುತ್ತಾರೆ. ಇತ್ತೀಚಿಗೆ ಸೇಬು ಹಣ್ಣಿನ ಸೇವನೆ ಕಡಿಮೆಯಾಗುತ್ತಿದೆಯಾದರೂ ಇದನ್ನು ಇಷ್ಟ ಪಟ್ಟು ತಿನ್ನುವವರಿದ್ದಾರೆ. ಆದರೆ ಸೇಬುಗಳನ್ನು ಹೇಗೆ ತಿನ್ನುವುದು ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತದೆ. ಅಂದರೆ ಹಣ್ಣುಗಳನ್ನು ಸೇವನೆ ಮಾಡುವುದು ಒಳ್ಳೆಯದೋ ಅಥವಾ ಅದರ ರಸ, ಜ್ಯೂಸ್ ಮಾಡಿ ಕುಡಿಯಬೇಕೋ ಎಂದು ಯೋಚಿಸುವವರೇ ಹೆಚ್ಚು. ಇವೆರಡು ವಿಧಾನಗಳಲ್ಲಿ ಹೆಚ್ಚು ಪಯೋಜನಕಾರಿ ಯಾವುದು? ಹೆಚ್ಚು ಆರೋಗ್ಯ ಪ್ರಯೋಜನ ಯಾವುದರಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಸೇಬು ಹಣ್ಣಿನ ರಸಕ್ಕಿಂತ ಹಣ್ಣುಗಳನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಸೇಬು ಹಣ್ಣುಗಳನ್ನು ತಿನ್ನುವುದರಿಂದ ಫೈಬರ್, ಜೀವಸತ್ವ ಮತ್ತು ಖನಿಜಗಳು ಸಿಗುತ್ತವೆ. ಆದರೆ ಪದೇ ಪದೇ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದಕ್ಕೆ ಸೇರಿಸುವ ಸಕ್ಕರೆಯಿಂದ ಕ್ಯಾಲೊರಿ ಗಮನಾರ್ಹವಾಗಿ ಹೆಚ್ಚಾಗುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ, ಸೇಬು ಹಣ್ಣುಗಳ ರಸದಲ್ಲಿ ಫೈಬರ್ ಅಂಶ ಇರುವುದಿಲ್ಲ. ಆದರೆ ಸೇಬು ಹಣ್ಣು ಕಬ್ಬಿಣದಿಂದ ಸಮೃದ್ಧವಾಗಿರುವುದರಿಂದ, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಕೆಂಪು ಅಥವಾ ಹಸಿರು ಸೇಬು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ; ಈ ಸಮಸ್ಯೆ ಇದ್ದರೆ ದಾಳಿಂಬೆ ತಿನ್ನಬೇಡಿ

ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಅದಲ್ಲದೆ ಸೇಬಿನ ಸಿಪ್ಪೆಯಲ್ಲಿರುವ ಪೆಟ್ರಿನ್ ಮತ್ತು ಇತರ ಜೀರ್ಣಕಾರಿ ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆ, ಗ್ಯಾಸ್ ನಂತಹ ಸಮಸ್ಯೆಗಳನ್ನು ತಡೆಯುತ್ತದೆ. ಆದರೆ ಸೇಬು ಹಣ್ಣಿನ ರಸವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಯಕೃತ್ತಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಆದ್ದರಿಂದ, ಸೇಬಿನ ರಸಕ್ಕಿಂತ ಹಣ್ಣಿನ ಸೇವನೆಯೇ ಹೆಚ್ಚು ಪಯೋಜನಕಾರಿ. ಆದ್ದರಿಂದ, ಸಾಧ್ಯವಾದಷ್ಟು ಹಣ್ಣುಗಳನ್ನು ಸೇವನೆ ಮಾಡಿ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ