Apple Peel: ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ? ಇದರಿಂದ ದೇಹಕ್ಕೆ ಇಷ್ಟೆಲ್ಲಾ ನಷ್ಟವಾಗುತ್ತೆ ನೋಡಿ

ಸೇಬು ಹಣ್ಣಿನ ತಿರುಳಿಗಿಂತಲೂ ಅದರ ಹೊರ ಭಾಗವು ಹೆಚ್ಚಿನ ಆರೋಗ್ಯ ಗುಣಲಕ್ಷಣಗಳನ್ನು ಹೊಂದಿದೆ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಆದರೆ, ಕೆಲವರು ಸೇಬು ಹಣ್ಣನ್ನು ತಿನ್ನುವಾಗ ಅದರ ಸಿಪ್ಪೆ ತೆಗೆದು ಎಸೆಯುತ್ತಾರೆ. ಹಾಗೆ ಮಾಡುವುದರಿಂದ ನೀವು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಹಾಗಾದರೆ ಈ ಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Apple Peel: ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ? ಇದರಿಂದ ದೇಹಕ್ಕೆ ಇಷ್ಟೆಲ್ಲಾ ನಷ್ಟವಾಗುತ್ತೆ ನೋಡಿ
ಸಾಂದರ್ಭಿಕ ಚಿತ್ರ
Edited By:

Updated on: Aug 17, 2024 | 5:15 PM

ಸೇಬು ಪೋಷಕಾಂಶ ಭರಿತವಾದ ಹಣ್ಣು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅದಕ್ಕಿಂತಲೂ ಅದರ ಸಿಪ್ಪೆಯಲ್ಲಿ ಹೆಚ್ಚು ಶಕ್ತಿ ಇದೆ ಎಂದರೆ ನಂಬುತ್ತೀರಾ? ಹೌದು ನಿಜ. ಸೇಬು ಹಣ್ಣಿನ ತಿರುಳಿಗಿಂತಲೂ ಅದರ ಹೊರ ಭಾಗವು ಹೆಚ್ಚಿನ ಆರೋಗ್ಯ ಗುಣಲಕ್ಷಣಗಳನ್ನು ಹೊಂದಿದೆ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಆದರೆ, ಕೆಲವರು ಸೇಬು ಹಣ್ಣನ್ನು ತಿನ್ನುವಾಗ ಅದರ ಸಿಪ್ಪೆ ತೆಗೆದು ಎಸೆಯುತ್ತಾರೆ. ಹಾಗೆ ಮಾಡುವುದರಿಂದ ನೀವು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಹಾಗಾದರೆ ಈ ಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಯಕೃತ್ತು ಆರೋಗ್ಯವಾಗಿರುತ್ತದೆ

ಸೇಬಿನ ಸಿಪ್ಪೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೆ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ. ಸೇಬುವಿನ ಹೊರಭಾಗ ಅಂದರೆ ಅದರ ಸಿಪ್ಪೆಯನ್ನು ಸೇವನೆ ಮಾಡುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ

ಸೇಬು ಹಣ್ಣನ್ನು ಅದರ ಸಿಪ್ಪೆಯೊಂದಿಗೆ ಸೇವಿಸಿದರೆ, ಅದರಲ್ಲಿರುವ ಫೈಬರ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪಾಲಿಫಿನಾಲ್ ಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದ್ರೋಗಗಳನ್ನು ತಡೆಯುತ್ತದೆ. ಸೇಬಿನ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಕೆ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿತ್ತದೆ. ಜೊತೆಗೆ ಈ ಹಣ್ಣಿನ ಹೊರಭಾಗದ ಚರ್ಮದ ಮೇಲಿರುವ ಫೈಬರ್ ಅಂಶವು ಹಸಿವನ್ನು ಕಡಿಮೆ ಮಾಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಸೇಬಿನ ಸಿಪ್ಪೆಗಳು ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಲ್ಲದೆ ಇದು ಕ್ವೆರೆಕ್ಟಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಶ್ವಾಸಕೋಶ ಮತ್ತು ಹೃದಯವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.