Home Remedie for Insomnia: ನಿಮಗೆ ನಿದ್ರಾಹೀನತೆ ಕಾಡುತ್ತಿದೆಯಾ ಈ ಮನೆ ಮದ್ದು ಪ್ರಯತ್ನಿಸಿ

ರಾತ್ರಿ ತಡವಾಗಿ ನಿದ್ರೆ ಬರುವುದು , ಅಥವಾ ಆಗಾಗ ಎಚ್ಚರವಾಗುವುದು ಇಂತಹ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ನಿರ್ಲಕ್ಷ್ಯಿಸದಿರಿ. ನೀವೂ ಕ್ರಮೇಣ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ.

Home Remedie for Insomnia: ನಿಮಗೆ ನಿದ್ರಾಹೀನತೆ ಕಾಡುತ್ತಿದೆಯಾ ಈ ಮನೆ ಮದ್ದು ಪ್ರಯತ್ನಿಸಿ
ಸಾಂದರ್ಭಿಕ ಚಿತ್ರ
Image Credit source: Harvard Gazette - Harvard University
Edited By:

Updated on: Dec 10, 2022 | 1:25 PM

ಇಂದಿನ ಬದಲಾದ ಜೀವನಶೈಲಿಯಿಂದಾಗಿ ಒತ್ತಡದ ಜೀವನ, ನಿದ್ರಾಹೀನತೆಯು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ. ಆರೋಗ್ಯವಂತ ವ್ಯಕ್ತಿಗೆ ದಿನದಲ್ಲಿ 8 ಗಂಟೆಗಳ ಕಾಲ ನಿದ್ರೆ ಅವಶ್ಯಕವಾಗಿದೆ. ಸರಿಯಾದ ನಿದ್ದೆಯೂ ನಿಮ್ಮನ್ನು ಉಲ್ಲಾಸದಿಂದಿರುವಂತೆ ಮಾಡುತ್ತದೆ. ಆದರೆ ರಾತ್ರಿ ತಡವಾಗಿ ನಿದ್ರೆ ಬರುವುದು , ಅಥವಾ ಆಗಾಗ ಎಚ್ಚರವಾಗುವುದು ಇಂತಹ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ನಿರ್ಲಕ್ಷ್ಯಿಸದಿರಿ. ನೀವೂ ಕ್ರಮೇಣ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ.

ಆದ್ದರಿಂದ ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಕೆಳಗಿನ ಮನೆಮದ್ದನ್ನು ಪ್ರಯತ್ನಿಸಿ ನೋಡಿ. ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗಲು ಸಾಧ್ಯವಿಲ್ಲ. ಯಾಕೆಂದರೆ ಇದು ಸೇಬು ಹಣ್ಣು, ಜೇನು ತುಪ್ಪ ಹಾಗೂ ದಾಲ್ಚಿನಿ ಈ ಮೂರು ಪದಾರ್ಥಗಳನ್ನು ಬಳಸಲಾಗುತ್ತದೆ. ಈ ಮೂರು ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ದೇಹದ ಮೇಲೆ ಯಾವುದೇ ದುಷ್ಟರಿಣಾಮ ಬೀರಲು ಸಾಧ್ಯವಿಲ್ಲ.

ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸುವ ಈ ಮನೆಮದ್ದಿಗಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಸೇಬು ಹಣ್ಣು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಒಂದು ಚಿಕ್ಕ ಬೌಲ್ ಗೆ ಹಾಕಿಡಿ. ನಂತರ ಇದಕ್ಕೆ ಒಂದು ಚಿಟಿಕಿ ದಾಲ್ಚಿನಿ ಪುಡಿಯನ್ನು ಹಾಕಿ. ನಂತರ ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಮನೆಮದ್ದು ಸಿದ್ದವಾಗಿದೆ.

ಇದನ್ನು ಓದಿ: ಕರುಳನ್ನು ಎರಡನೇ ಮೆದುಳು ಎಂದು ಏಕೆ ಕರೆಯಲಾಗುತ್ತದೆ, ತಜ್ಞರ ಅಭಿಪ್ರಾಯ ಇಲ್ಲಿದೆ

ಪ್ರತಿದಿನ ಮಲಗುವ ಮುನ್ನ ಈ ಮನೆಮದ್ದು ಸೇವಿಸಿ ಮಲಗಿ. ಇದರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೇವಲ ಒಂದು ವಾರ ಪ್ರತಿ ದಿನ ಇದನ್ನು ಸೇವಿಸಿ. ನೀವೂ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: