Health Tips: ಕರುಳನ್ನು ಎರಡನೇ ಮೆದುಳು ಎಂದು ಏಕೆ ಕರೆಯಲಾಗುತ್ತದೆ, ತಜ್ಞರ ಅಭಿಪ್ರಾಯ ಇಲ್ಲಿದೆ
ಏನಾದರೂ ಹೆದರಿಕೆ, ಭಯ, ಆತಂಕ, ಖುಷಿಯಾದಾಗ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂಗೈಯಿತದೆ ಎಂದು ಹೇಳುವುದುಂಟು ಅಥವಾ ಬೇರೆಯವರು ಹೇಳಿದನ್ನು ನೀವೂ ಕೇಳಿರ್ತಿರಾ. ಆದರೆ ಇದು ನಿಜ ನೀವು ವ್ಯಕ್ತಪಡಿಸುವ ಪ್ರತಿಯೊಂದು ಭಾವನೆಗಳು ನಿಮ್ಮ ಕರುಳಿನೊಂದಿಗೆ ನೇರ ಸಂಬಂಧವನ್ನು ಹೊಂದಿದೆ.
ನಿಮ್ಮ ದೇಹದ ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯನಿರ್ವಹಿಸುವಲ್ಲಿ ಕರುಳಿನ ಪಾತ್ರ ಪ್ರಮುಖವಾಗಿರುತ್ತದೆ. ಕರುಳಿನ ಆರೋಗ್ಯವು ನಿಮ್ಮ ದೇಹದಲ್ಲಿನ ವಿವಿಧ ಪ್ರಕ್ರಿಯೆಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ. ಆದ್ದರಿಂದ ಕರುಳನ್ನು ಎರಡನೇ ಮೆದುಳು ಎಂದು ಏಕೆ ಕರೆಯಲಾಗುತ್ತದೆ ಎಂದು ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರರಾದ ಡಾ ಡಿಂಪಲ್ ಜಂಗ್ಡಾರವರು ಹೇಳುತ್ತಾರೆ.
ಕರುಳು ನಿಮ್ಮ ಚರ್ಮ, ಕೂದಲು ಜಠರಗರುಳು, ಶ್ವಾಸನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕ್ಯಾನ್ಸರ್ ಸೇರಿದಂತೆ ಶೇಕಡಾ 90ರಷ್ಟು ಕಾಯಿಲೆಗೆ ನಿಮ್ಮ ಕರುಳು ನೇರವಾಗಿ ಕಾರಣವಾಗಿರುತ್ತದೆ. ಆದ್ದರಿಂದ ಕರುಳಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಎಂದು ಜಂಗ್ಡಾರವರು ಸಲಹೆ ನೀಡುತ್ತಾರೆ.
ಕರುಳಿನ ಬಗ್ಗೆ ನಿಮಗೆ ತಿಳಿದಿಲ್ಲದಿರುವ ಸಂಗತಿಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕರುಳಿನ ಆರೋಗ್ಯಕ್ಕೆ ಸಂಬಂಧಿಸಿರುವ ವಿಡಿಯೋ ಇಲ್ಲಿದೆ.
View this post on Instagram
ನಿಮ್ಮ ಕರುಳು ಮಾನಸಿಕವಾಗಿಯೂ ಭಾವನೆಗಳು ಮತ್ತು ನೆನಪುಗಳನ್ನು ವ್ಯಕ್ತಪಡಿಸುತ್ತದೆ. ಆತಂಕ, ಭಯ, ಉತ್ಸುಕತೆ, ಸಂತೋಷ ಅಥವಾ ಉದ್ವೇಗವನ್ನು ಅನುಭವಿಸಿದಾಗ, ನೀವು ಅದನ್ನು ಮೊದಲು ನಿಮ್ಮ ಕರುಳಿನಲ್ಲಿ ಅನುಭವಿಸುತ್ತೀರಿ ಎಂದು ಇವರು ಹೇಳುತ್ತಾರೆ. ಅಂದರೆ ಉದಾಹರಣೆಗೆ ಹೇಳುವುದಾದರೆ ನಿಮಗೆ ಎನಾದರೂ ಹೆದರಿಕೆ, ಭಯ, ಆತಂಕ, ಖುಷಿಯಾದಾಗ ಸಾಮಾನ್ಯವಾಗಿ ಹೇಳುವ ಮಾತು ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂಗೈಯಿತದೆ. ಆದ್ದರಿಂದ ನೀವು ವ್ಯಕ್ತಪಡಿಸುವ ಪ್ರತಿಯೊಂದು ಭಾವನೆಗೂ ನಿಮ್ಮ ಕರುಳಿಗೆ ನೇರ ಸಂಬಂಧವನ್ನು ಹೊಂದಿದೆ.
ಇದನ್ನು ಓದಿ: ಪದೇ ಪದೇ ನೀವು ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಮಧುಮೇಹ ಮಾತ್ರವಲ್ಲ ಈ ಆರೋಗ್ಯ ಸಮಸ್ಯೆಯೂ ನಿಮಗಿರಬಹುದು
ನೀವು ಆತಂಕ, ಭಯ, ಉತ್ಸುಕತೆ, ಸಂತೋಷ ಅಥವಾ ಉದ್ವೇಗವನ್ನು ಅನುಭವಿಸಿದಾಗ, ನೀವು ಅದನ್ನು ಮೊದಲು ನಿಮ್ಮ ಕರುಳಿನಲ್ಲಿ ಅನುಭವಿಸುತ್ತೀರಿ. 75 ರಷ್ಟು ಸಿರೊಟೋನಿನ್ ಕರುಳಿನಲ್ಲಿ ಬಿಡುಗಡೆಯಾಗುತ್ತದೆ. ಆರೋಗ್ಯವಂತ ಕರುಳು 1 ಕೆಜಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ಮಾನಸಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಹೇಳುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:53 am, Sat, 10 December 22