Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Weather: ಬೆಂಗಳೂರಿನಲ್ಲಿ ತಾಪಮಾನ ಕುಸಿತ: ಸೋಂಕಿನ ಬಗ್ಗೆ ವೈದ್ಯರ ಎಚ್ಚರಿಕೆ

ಒಂದೆಡೆ ತಾಪಮಾನದ ಕುಸಿತ, ಮತ್ತೊಂದೆಡೆ ತೇವಾಂಶದ ಹೆಚ್ಚಳವು ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ವೈದ್ಯರು ಹೇಳಿದ್ದಾರೆ. ಉಸಿರುಕಟ್ಟುವುದು, ಶೀತ(Cold) ಹಾಗೂ ಗಂಟಲು ನೋವು ಕಾಣಿಸಿಕೊಳ್ಳಬಹುದು.

Bengaluru Weather: ಬೆಂಗಳೂರಿನಲ್ಲಿ ತಾಪಮಾನ ಕುಸಿತ: ಸೋಂಕಿನ ಬಗ್ಗೆ ವೈದ್ಯರ ಎಚ್ಚರಿಕೆ
Fever
Follow us
TV9 Web
| Updated By: ನಯನಾ ರಾಜೀವ್

Updated on:Dec 11, 2022 | 11:47 AM

ಒಂದೆಡೆ ತಾಪಮಾನದ ಕುಸಿತ, ಮತ್ತೊಂದೆಡೆ ತೇವಾಂಶದ ಹೆಚ್ಚಳವು ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ವೈದ್ಯರು ಹೇಳಿದ್ದಾರೆ. ಉಸಿರುಕಟ್ಟುವುದು, ಶೀತ(Cold) ಹಾಗೂ ಗಂಟಲು ನೋವು ಕಾಣಿಸಿಕೊಳ್ಳಬಹುದು, ಮ್ಯಾಂಡಸ್ (Mandous))ಚಂಡಮಾರುತದಿಂದಾಗಿ ಡಿಸೆಂಬರ್ 12ರವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮನೆಯಲ್ಲಿ ಕ್ರಾಸ್ ವೆಂಟಿಲೇಷನ್ ಮುಖ್ಯ, ಮನೆಯ ಎಲ್ಲಾ ಕಿಟಕಿಗಳನ್ನು ಮುಚ್ಚಿದಾಗ ಗಾಳಿಗೆ ಯಾವುದೇ ಮಾರ್ಗವಿರುವುದಿಲ್ಲ, ಯಾರಾದರೂ ಮನೆಯಲ್ಲಿ ಸೀನುತ್ತಿದ್ದರೆ , ಉಳಿದವರಿಗೂ ಕೂಡ ಸೋಂಕು ತಗುಲಿ, ಶೀತ, ಜ್ವರ ಮತ್ತಿತರೆ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ ಎಂದು ಮಕ್ಕಳ ತಜ್ಞ ಡಾ. ಎಚ್​ ಪರಮೇಶ್ ಅವರು ಡೆಕ್ಕನ್ ಹೆರಾಲ್ಡ್​ಗೆ ತಿಳಿಸಿದ್ದಾರೆ.

ಕ್ರಾಸ್ ವೆಂಟಿಲೇಷನ್ ಕೊರತೆಯು ಕುಟುಂಬ ಸದಸ್ಯರಲ್ಲಿ ವೇಗವಾಗಿ ಸೋಂಕು ಹರಡಲು ಕಾರಣವಾಗುತ್ತದೆ.  ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಮೂಗನ್ನು ಮುಚ್ಚಿಕೊಳ್ಳಿ, ಮೇಲಾಗಿ ಹತ್ತಿ ಅಥವಾ ಕರವಸ್ತ್ರವನ್ನು ಬಳಸಿ ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಿರಿ. ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಿ, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಳಪಡಿಸಲು ಹಣ್ಣುಗಳು, ತರಕಾರಿಗಳು ಬಹಳ ಮುಖ್ಯ ಏಕೆಂದರೆ ಅವುಗಳು ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಶೀತ ವಾತಾವರಣದಲ್ಲಿ ಆವಿಯಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದು ಸೂಕ್ತ.

ಮತ್ತಷ್ಟು ಓದಿ: Cyclone Mandous: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಭೀತಿ; ಚೆನ್ನೈನ 16 ವಿಮಾನಗಳ ಹಾರಾಟ ರದ್ದು

ವೈರಲ್​ ಜ್ವರ ಕಾಲಾನಂತರದಲ್ಲಿ ಹೆಚ್ಚುತ್ತಿದೆ, ಇದನ್ನು ಕಡಿಮೆ ಮಾಡಲು ಮನೆಯಲ್ಲಿಯೇ ತಯಾರಿಸಿದ ಆಹಾರಗಳ ಕಡೆ ಹೆಚ್ಚು ಗಮನಕೊಡಿ. ಫ್ರಿಜ್​ನಲ್ಲಿರಿಸಿರುವ ಆಹಾರವನ್ನು ಸೇವಿಸುವ ಮೊದಲು ಸ್ವಲ್ಪ ಹೊತ್ತು ಹೊರಗೆ ತೆಗೆದಿಡಿ, ಇದು ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸೀನುವಾಗ ಅಥವಾ ಜ್ವರ ಇರುವವರಿಂದ ಸ್ವಲ್ಪ ದೂರವಿರಿ ಯಾಕೆಂದರೆ ಆರ್ದ್ರ ವಾತಾವರಣದಲ್ಲಿ ಸುಲಭವಾಗಿ ಸೋಂಕು ಮತ್ತೊಬ್ಬರಿಗೆ ತಗುಲುತ್ತದೆ. ರೋಗಾಣುಗಳು ಹರಡುವುದನ್ನು ತಡೆಯಲು ಮಾಸ್ಕ್​ ಬಳಸಿ.

ಬೆಂಗಳೂರಿನ ಎಚ್​ಎಎಲ್​ನಲ್ಲಿ 22.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 21.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 22.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:59 am, Sun, 11 December 22

ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ