Bitter Gourd Juice: ಚಳಿಗಾಲದಲ್ಲಿ ಹಾಗಲಕಾಯಿ ರಸವನ್ನು ಕುಡಿದು ಈ ಅದ್ಭುತ ಪ್ರಯೋಜನಗಳ ಪಡೆಯಿರಿ
ಅಯ್ಯೋ ಹಾಗಲಕಾಯಾ ಅಂತ ಮೂಗು ಮುರಿಬೇಡಿ, ಆ ಕಹಿ ರಸದಲ್ಲಿರುವ ಅದ್ಭುತ ಪ್ರಯೋಜನಗಳ ತಿಳಿದರೆ ಮೂಗಿ ಮುಚ್ಚಿಕೊಂಡಾದರೂ ರಸವನ್ನು ಕುಡಿಯುತ್ತೀರಿ.
ಅಯ್ಯೋ ಹಾಗಲಕಾಯಾ ಅಂತ ಮೂಗು ಮುರಿಬೇಡಿ, ಆ ಕಹಿ ರಸದಲ್ಲಿರುವ ಅದ್ಭುತ ಪ್ರಯೋಜನಗಳ ತಿಳಿದರೆ ಮೂಗಿ ಮುಚ್ಚಿಕೊಂಡಾದರೂ ರಸವನ್ನು ಕುಡಿಯುತ್ತೀರಿ. ಚಳಿಗಾಲದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಹಾಗಲಕಾಯಿ ರಸವು ಪ್ರಮುಖ ಪಾತ್ರವಹಿಸುತ್ತದೆ. ಒಮ್ಮೆ ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ಇಂದಿನಿಂದ ನಿಮ್ಮ ಆಹಾರದಲ್ಲಿ ಇದನ್ನು ನೀವು ಸೇರಿಸಿಕೊಳ್ಳದೆ ಬಿಡುವುದಿಲ್ಲ. ಚಳಿಗಾಲದಲ್ಲಿ ಅನೇಕ ರೋಗಗಳಿಂದ ತಪ್ಪಿಸಿಕೊಳ್ಳುವುದೇ ಬಹುದೊಡ್ಡ ಸವಾಲು.
ಉದಾಹರಣೆಗೆ, ಶೀತ ಮತ್ತು ಗಂಟಲು ನೋವು, ಚಳಿಗಾಲದಲ್ಲಿ ಪ್ರತಿಯೊಬ್ಬರೂ ಈ ಕಾಯಿಲೆಗಳಿಂದ ಪ್ರಭಾವಿತರಾಗುತ್ತಾರೆ. ಅದಕ್ಕಾಗಿಯೇ ವಿಶೇಷವಾಗಿ ಚಳಿಗಾಲದಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವಿಶೇಷವಾಗಿ ಈ ಋತುವಿನಲ್ಲಿ ತಿನ್ನಲು ಸೂಕ್ತವಾದ ಅನೇಕ ಹಣ್ಣುಗಳು ಮತ್ತು ತರಕಾರಿಗಳಿವೆ.
ಈ ಲೇಖನದ ಮೂಲಕ, ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ಸೋಂಕುಗಳನ್ನು ನಿಭಾಯಿಸಲು ಹಾಗಲಕಾಯಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ಶೀತವನ್ನು ನಿಭಾಯಿಸಲು ಸಹಾಯಕ ಹಾಗಲಕಾಯಿಯ ಹೆಸರಿನಲ್ಲಿ ಹೆಚ್ಚಿನವರು ಮೂಗು ಮುರಿಯುತ್ತಾರೆ, ಏಕೆಂದರೆ ಅದರ ರುಚಿ ಕಹಿಯಾಗಿರುವುದಕ್ಕೆ, ಆದರೆ ಈ ಹಾಗಲಕಾಯಿ ನಿಮಗೆ ಶೀತ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಒಮ್ಮೆ ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ಇಂದಿನಿಂದ ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುತ್ತೀರಿ.
ಹಾಗಲಕಾಯಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಹಾಗಲಕಾಯಿಯ ರಸ ಚಳಿಗಾಲದಲ್ಲಿ ತುಂಬಾ ಪ್ರಯೋಜನಕಾರಿ. ಈ ಹಾಗಲಕಾಯಿ ರಸವನ್ನು ತಯಾರಿಸಲು ನೀವು ಕಷ್ಟಪಡಬೇಕಾಗಿಲ್ಲ, ಏಕೆಂದರೆ ಇದನ್ನು ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಮೊದಲನೆಯದಾಗಿ, ಬ್ಲೆಂಡರ್‌ನಲ್ಲಿ ರುಚಿಗೆ ತಕ್ಕಂತೆ ಹಾಗಲಕಾಯಿ, ಸ್ವಲ್ಪ ಶುಂಠಿ, ಕರಿಮೆಣಸು, ಅರಿಶಿನ ಮತ್ತು ಕಪ್ಪು ಉಪ್ಪನ್ನು ಮಿಶ್ರಣ ಮಾಡಿ. ಅದರ ನಂತರ ನಿಮ್ಮ ಹಾಗಲಕಾಯಿ ರಸ ಸಿದ್ಧವಾಗಿದೆ. ಬೇಕಿದ್ದರೆ ಹಾಗಲಕಾಯಿ ರಸವನ್ನು ಬೇರೆ ರೀತಿಯಲ್ಲಿ ತಯಾರಿಸಬಹುದು.
ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ
ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನು ಸೇವಿಸಿದರೆ, ಅದು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಬೆಳಿಗ್ಗೆ ಅದನ್ನು ಕುಡಿಯುವುದರಿಂದ ಹೊಟ್ಟೆಯು ಸಂಪೂರ್ಣವಾಗಿ ಶುದ್ಧವಾಗುತ್ತದೆ. ನೀವು ಇದನ್ನು ಪ್ರತಿದಿನ ಕುಡಿಯಲು ಪ್ರಾರಂಭಿಸಿದರೆ, ಅದು ನಿಮ್ಮ ರಕ್ತವನ್ನು ಸ್ವಚ್ಛಗೊಳಿಸುತ್ತದೆ, ಇದರಿಂದ ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ನಿಮ್ಮ ಮುಖವೂ ಒಮ್ಮೆಗೆ ಹೊಳೆಯುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Fri, 9 December 22