Green Tomatoes: ಟೊಮೆಟೊ ಕಾಯಿ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ
ತರಕಾರಿ ಮಾರ್ಕೆಟ್ ಹೋದಾಗ ಸರಿಯಾಗಿ ಹಣ್ಣಾಗಿರುವ ಟೊಮೆಟೊ ಕೊಡಪ್ಪ ಅನ್ನುವವರೇ ಜಾಸ್ತಿ. ಆದರೆ ಕಾಯಿ ಟೊಮೆಟೊಗಳು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ?
ತರಕಾರಿ ಮಾರ್ಕೆಟ್ ಹೋದಾಗ ಸರಿಯಾಗಿ ಹಣ್ಣಾಗಿರುವ ಟೊಮೆಟೊ(Tomato) ಕೊಡಪ್ಪ ಅನ್ನುವವರೇ ಜಾಸ್ತಿ. ಆದರೆ ಕಾಯಿ ಟೊಮೆಟೊಗಳು(Green Tomatoes) ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ಕಾಯಿ ಟೊಮೆಟೊಗಳು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಎಷ್ಟು ಪ್ರಯೋಜನಕಾರಿ? ತಜ್ಞರು ನೀಡಿದ ಉಪಯುಕ್ತ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಕಾಯಿ ಟೊಮೆಟೊಗಳನ್ನು ಚಟ್ನಿ, ಉಪ್ಪಿನಕಾಯಿ, ಗೊಜ್ಜು ಮುಂತಾದ ಆಹಾರಗಳಲ್ಲಿ ಬಳಸಲಾಗುತ್ತದೆ. ಆದರೆ ಇದು ಆಹಾರಗಳಲ್ಲಿ ಕೇವಲ ರುಚಿಯನ್ನು ನೀಡುವುದು ಮಾತ್ರವಲ್ಲದೇ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ ಎಂದು ಆಹಾರ ತಜ್ಞ ಗರಿಮಾ ಗೋಯಲ್ ಹೇಳಿದ್ದಾರೆ.
ಕಾಯಿ ಟೊಮೆಟೊಗಳನ್ನು ಬಳಸಿ ರುಚಿಕರ ಹಾಗೂ ಆರೋಗ್ಯಕರ ಚಟ್ನಿಯನ್ನು ತಯಾರಿಸಿ. ಇದು ರುಚಿಯ ಜೊತೆಗೆ ವಿಟಮಿನ್ ಸಿ ಯನ್ನು ಹೊಂದಿರುವುದರಿಂದ ನಿಮ್ಮ ಆರೋಗ್ಯಕ್ಕೂ ಉತ್ತಮ ಎಂದು ಆರೋಗ್ಯ ತಜ್ಞರಾದ ಡಾ ರಿಯಾ ಬ್ಯಾನರ್ಜಿ ಅಂಕೋಲಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಮಲಗುವ ಮುನ್ನ ದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳುಗಳನ್ನು ಇಡುವುದರಿಂದಾಗುವ ಅದ್ಭುತ ಪ್ರಯೋಜನಗಳ ತಿಳಿಯಿರಿ
ಕಾಯಿ ಟೊಮೆಟೊಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಚಳಿಗಾಲದಲ್ಲಿನ ಶೀತ, ಕೆಮ್ಮು, ನೆಗಡಿಯಂತಹ ಸೋಂಕುಗಳಿಂದ ನಿಮಗೆ ರಕ್ಷಣೆ ನೀಡುತ್ತದೆ. ಹಸಿರು ಟೊಮೆಟೊಗಳು ವಿಟಮಿನ್ ಎ, ವಿಟಮಿನ್ ಸಿ ಮತ್ತು ಫೈಟೊಕೆಮಿಕಲ್‌ಗಳ ಉತ್ತಮ ಮೂಲವಾಗಿರುವುದರಿಂದ, ಅವು ರೋಗಗಳು ಮತ್ತು ಆಕ್ಸಿಡೇಟಿವ್ ಹಾನಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಎಂದು ಚೆಂಬೂರ್‌ನ ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆಹಾರ ತಜ್ಞರಾದ ಡಾ ಪ್ರಿಯಾ ಪಾಲನ್ ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: