ಚಕ್ರ(Chakra) ಎಂದರೆ ಉಂಗುರದಂತೆ ಸುತ್ತಿರುವ ಎಂದರ್ಥ ಈ ಚಕ್ರಗಳು ಚೈತನ್ಯವಾಹನಕಗಳಾಗಿರುತ್ತವೆ, ನಮ್ಮ ದೇಹದಲ್ಲಿರುವ ಚಕ್ರಗಳು ಪ್ರಕೃತಿಯಲ್ಲಿನ ತರಂಗ ಭಾವನೆಗಳನ್ನು ಸಂಗ್ರಹಿಸಿ ದೇಹದ ನಾಡಿ, ಧಮನಿ, ಹಾಗೂ ಮೆದುಳಿಗೆ ತಲುಪಿಸುತ್ತದೆ. ಮನುಷ್ಯನ ಬೆನ್ನುಹುರಿಯ ಕೆಳಭಾಗದಿಂದ ಶಿರೋಭಾಗದವರೆಗೆ ಶಕ್ತಿ ಅಂತರ್ಗತವಾಗಿರುತ್ತದೆ. ಬೆನ್ನುಹುರಿಯಲ್ಲಿ ಇಡಾ, ಪಿಂಗಳಾ ಹಾಗೂ ಸುಷುಮ್ನಾ ಎಂಬುವ ನಾಡಿಗಳಿವೆ ಇದೇ ಬೆನ್ನುಹುರಿಯಲ್ಲಿ ಏಳು ಶಕ್ತಿ ಕೇಂದ್ರಗಳನ್ನು ಚಕ್ರಗಳು ಎನ್ನುತ್ತಾರೆ. ಚಕ್ರಗಳು ಯಾವಾಗಲೂ ನಮ್ಮೊಳಗೆ ತಿರುಗುತ್ತಲೇ ಇದ್ದು, ಇದರಿಂದ ಶಕ್ತಿ ಸಂಚಯಿಸುತ್ತದೆ.
ಸಹಸ್ರಾರ ಚಕ್ರ
ತತ್ವ: ಚೈತನ್ಯ
ಬಣ್ಣ: ಬಿಳಿ ಅಥವಾ ನೇರಳೆ
ಮಂತ್ರ: ಮೌನ
ಸ್ಥಳ: ತಲೆಯ ಮೇಲ್ಭಾಗ
ಸಹಸ್ರಾರ ಚಕ್ರವೆಂದರೆ ಸಹಸ್ರ ದಳವನ್ನು ಹೊಂದಿರುವ ಕಮಲವೆಂದು ಅರ್ಥ, ಅಂತಸ್ಫುರಣೆಯಿಂದ ಕೂಡಿದ ತಿಳಿವಳಿಕೆಯ ಮೇಲೆ, ಅಧ್ಯಾತ್ಮದ ಜತೆ ಸಂಬಂಧದ ಮೇಲೆ, ಮನಸು-ದೇಹ-ಆತ್ಮದೊಡನೆ ಮತ್ತು ಪ್ರಜ್ಞಾಪೂರ್ವಕವಾದ ಅರಿವಿನೊಡನೆ ಸಂಬಂಧಪಟ್ಟಿದೆ. ಈ ಚಕ್ರವು ತಲೆಯ ಕೇಂದ್ರ ಭಾಗವನ್ನು, ಕಿವಿಗಳ ಮೇಲಿರುವ ಮಧ್ಯಭಾಗವನ್ನು, ಮೆದುಳನ್ನು, ನರವ್ಯವಸ್ಥೆಯನ್ನು, ಪೀನಿಯಲ್ ಗ್ರಂಥಿಯನ್ನು ಆಳುತ್ತದೆ. ಸಹಸ್ರಾರ ಚಕ್ರದ ಅಸಮತೋಲನದಿಂದ ದೀರ್ಘ ಕಾಲದ ದಣಿವು, ಬೆಳಕು ಹಾಗೂ ಶಬ್ದಗಳೊಂದಿಗೆ ಸೂಕ್ಷ್ಮತೆ ಉಂಟಾಗುತ್ತವೆ.
ಗುರಿಯೇ ಇಲ್ಲದಇರುವುದು, ಗುರುತಿನ ಸಮಸ್ಯೆ, ಯಾವುದೇ ಅಧ್ಯಾತ್ಮಿಕ ಅಭ್ಯಾಸಗಳಲ್ಲಿ ಅಪನಂಬಿಕೆ, ಭಕ್ತಿಯ ಅಭಾವ , ಸ್ಫೂರ್ತಿಯ ಅಭಾವ, ಭಯ, ಜಗತ್ತಿನ ವಿಷಯಗಳಲ್ಲಿ ಅನುರಕ್ತಿ. ಇಂತವರ ಮನೆಯಲ್ಲಿ ತೀಕ್ಷ್ಣವಾದ ಲೈಟ್ಗಳನ್ನು ಹಾಕಲು ಇಷ್ಟಪಡುವುದಿಲ್ಲ.
ಮೂಲಾಧಾರ ಚಕ್ರ
ತತ್ವ: ಭೂಮಿ
ಬಣ್ಣ: ಕೆಂಪು
ಮಂತ್ರ : ಲಂ
ಸ್ಥಳ: ಜನನೇಂದ್ರಿಯ ಮತ್ತು ಗುದದ್ವಾರದ ನಡುವೆ, ಬೆನ್ನೆಲುಬಿನ ಮೂಲ
ಮೂಲಾಧಾರ ಚಕ್ರವು ಮೂಳೆ, ಹಲ್ಲು, ಉಗುರುಗಳ, ಗುದದ್ವಾರ, ಪ್ರಾಸ್ಟೇಟ್ ಗ್ರಂಥಿ, ಅಡ್ರಿನಲ್ ಗ್ರಂಥಿ, ಮೂತ್ರಪಿಂಡದ, ಜೀರ್ಣ ಪ್ರಕ್ರಿಯೆಯ ಕೆಳಹಂತದ ಕಾರ್ಯ, ವಿಸರ್ಜನೆ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.
ಅವರು ಜಾಸ್ತಿ ಪದಾರ್ಥಗಳನ್ನು ಬಳಸುವಾಗ ಅವರು ಬಳಕೆ ಮಾಡುವ ಬಟ್ಟೆ, ಮನೆಯಲ್ಲಿರುವ ವಸ್ಯತುಗಳು, ಟ್ಯೂಬ್ಲೈಟ್ನ ಕಲರ್ ಇರಬಹುದು ಅಡುಗೆ ಮನೆಯಲ್ಲಿರುವ ಬಣ್ಣಗಳನ್ನು ಆದಷ್ಟು ಕೆಂಪು ಬಣ್ಣವಾಗಿ ಮಾರ್ಪಾಟು ಮಾಡಿಕೊಳ್ಳಬೇಕು. ಜಪಮಾಲೆಯಲ್ಲಿ ಲಂ ಕಾರದ ಉಚ್ಛಾರಣೆ ಮಾಡಬೇಕು. ಬೇಕಾದಷ್ಟು ಆಸನಗಳು, ಧ್ಯಾನ, ಪ್ರಣಾಯಾಮವನ್ನು ಕೂಡ ಮಾಡಬಹುದು. ಹಾರ್ಮೋನ್ ಸಮತೋಲನ ಉಂಟಾದಾಗ ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಸಮಸ್ಯೆ ಕಡಿಮೆ ಮಾಡಬಹುದು.
ವಿಶುದ್ಧಿ ಚಕ್ರ
ವಿಶುದ್ಧವೆಂದರೆ ಆ ಶಬ್ಧವೇ ಹೇಳುವಂತೆ ಶುದ್ಧಿಯನ್ನು ಮಾಡುವಂಥದ್ದು ಎಂದರ್ಥ
ತತ್ವ: ಶಬ್ದ ಅಥವಾ ಆಕಾಶ
ಬಣ್ಣ: ನೀಲಿ
ಮಂತ್ರ: ಹಂ
ಸ್ಥಳ: ಗಂಟಲಿನ ಭಾಗ, ಧ್ವನಿ ಪೆಟ್ಟಿಗೆಯ ನರಗಳ ಬಳಿ
ವಿಶುದ್ಧಿ ಚಕ್ರ ಉತ್ತಮವಾಗಿರುವವರಿಗೆ ಎಕ್ಸ್ಪ್ರೆಷನ್ ವಿಚಾರದಲ್ಲಿ ಯಾವುದೇ ತೊಂದರೆಯಿರುವುದಿಲ್ಲ, ಹಾಗೆಯೇ ಅವರು ಯಾವುದನ್ನೇ ಆಸೆ ಪಟ್ಟರೂ ಅದಕ್ಕೆ ಬೇಕಾಗುವ ಶ್ರಮ ಹಾಕಿ ಕಷ್ಟಪಟ್ಟು ಪಡೆಯುವ ಮನಸ್ಥಿತಿಯವರಾಗಿರುತ್ತಾರೆ.
ವಿಶುದ್ಧಿ ಚಕ್ರವು ಸಂಪರ್ಕ, ಸೃಜನಶೀಲತೆ, ವಿಶ್ವಾಸ, ಸತ್ಯಪರತೆ, ಸ್ವ ಅರಿವು, ಅಭಿವ್ಯಕ್ತಿಯೊಡನೆ ಸಂಬಂಧಪಟ್ಟಿದೆ. ಈ ಚಕ್ರವು ಗಂಟಲು, ಥೈರಾಯ್ಡ್ ಗ್ರಂಥಿ, ಪ್ಯಾರಾಥೈರಾಯ್ಡ್ ಗ್ರಂಥಿ, ಧ್ವನಿ ಪೆಟ್ಟಿಗೆ, ಕತ್ತು, ಭುಜಗಳನ್ನು, ತೋಳುಗಳು, ಅನ್ನನಾಳ, ಬಾಯಿ, ಹಲ್ಲು.
ಇದರಲ್ಲಿ ಏನೇ ತೊಂದರೆಯಾದರೂ ವಿಶುದ್ಧ ಚಕ್ರದ ರೆಕ್ಟಿಫಿಕೇಷನ್ ಮಾಡಬೇಕಾಗುತ್ತದೆ.
ಈ ಚಕ್ರದ ಅಸಮತೋಲನದಿಂದ ಥೈರಾಯ್ಡ್ ಗ್ರಂಥಿಯ ಖಾಯಿಲೆಗಳು, ಕಟ್ಟಿದ ಗಂಟಲು, ಬಿಗಿಯಾದ ಕತ್ತು, ಬಾಯಿಯ ಹುಣ್ಣು, ವಸಡಿನ ಅಥವಾ ಹಲ್ಲಿನ ಸಮಸ್ಯೆಗಳು, ಲ್ಯಾರಿಂಜೈಟಿಸ್, ಕಿವಿ ಕೇಳಿಸದ ಸಮಸ್ಯೆಗಳು, ಇತ್ಯಾದಿ ಉಂಟಾಗುತ್ತವೆ.
ಆಜ್ಞ ಚಕ್ರ
ತತ್ವ: ಬೆಳಕು
ಬಣ್ಣ: ಇಂಡಿಗೊ
ಮಂತ್ರ: ಓಂ
ಸ್ಥಳ: ಭ್ರೂಗಳ ಮಧ್ಯೆ , ಎರಡು ಕಣ್ಣುಗಳ ಮಧ್ಯೆ ಕುಂಕುಮವನ್ನು ಇಟ್ಟುಕೊಳ್ಳುವುದು ಏಕೆಂದರೆ ಪ್ರತಿನಿತ್ಯ ನಮ್ಮ ದೃಷ್ಟಿಯನ್ನು ಧರಿಸಿ ನೋಡಿದಾಗ ಆಜ್ಞ ಚಕ್ರದ ಆಕ್ಟಿವೇಷನ್ ಪ್ರತಿನಿತ್ಯವೂ ಆಗಲಿದೆ.
ಆಜ್ಞ ಚಕ್ರವು ಸ್ವ ಅರಿವಿನೊಂದಿಗೆ, ಜ್ಞಾನದೊಡನೆ, ಬುದ್ಧಿಯೊಡನೆ, ಅಂತಸ್ಫುರಣೆಯೊಡನೆ, ಯೋಜನೆಗಳನ್ನು ಜಾರಿಗೆ ತರುವ ಸಾಮರ್ಥ್ಯದೊಡನೆ, ನಿರ್ಮೋಹತ್ವದೊಡನೆ, ಒಳನೋಟದೊಡನೆ, ತಿಳಿವಳಿಕೆಯೊಡನೆ, ಅಂತಸ್ಫುರಣೆಯೊಡನೆ ಸಂಬಂಧಪಟ್ಟ ವೈಚಾರಿಕತೆಯೊಡನೆ ಸಂಬಂಧಪಟ್ಟಿದೆ. ಈ ಚಕ್ರವು ಮೆದುಳನ್ನು, ಕಿವಿಗಳನ್ನು, ಕಣ್ಣುಗಳನ್ನು, ಮೂಗನ್ನು, ಪಿಟ್ಯೂಟರಿ ಗ್ರಂಥಿಯನ್ನು, ಪೀನಿಯಲ್ ಗ್ರಂಥಿಯನ್ನು ಮತ್ತು ನರವ್ಯವಸ್ಥೆಯನ್ನು ಆಳುತ್ತದೆ.
ಪಿಟ್ಯೂಟಿ ಗ್ರಂಥಿಯ ಪ್ರಭಾವ ಬೇರೆಲ್ಲಾ ಗ್ರಂಥಿಗಳ ಮೇಲೆ ಇರುತ್ತದೆ. ಮೆದುಳು ದೇಹದ ಎಲ್ಲಾ ಭಾಗಗಳನ್ನು ನಿಯಂತ್ರಿಸುವ ರೀತಿಯಲ್ಲಿ ಮನಯೇವ ಮನುಷ್ಯಾಣಾಂ ಕಾರಣಂ ಬಂಧಮೋಚನಂ. ನಾವು ಹೇಗೆ ಯೋಚನೆ ಮಾಡುತ್ತೀವೋ ನಮ್ಮ ಮನಸ್ಸು ಯಾವ ದಾರಿಯಲ್ಲಿ ನಡೆಯುತ್ತೋ ನಮ್ಮ ಜೀವನ ನಿರ್ಧರಿತವಾಗಿರುತ್ತದೆ.
ಎಲ್ಲಾ ಸರಿಯಾಗಿದ್ದು ನಮ್ಮ ಬುದ್ಧಿಯೇ ನಮ್ಮ ಕೈಯಲ್ಲಿ ಇಲ್ಲದೇ ಹೋದರೆ ಏನೇ ಇದ್ದರೂ ಪ್ರಯೋಜನವಿಲ್ಲ.
ಈ ಚಕ್ರದ ಅಸಮತೋಲನದಿಂದ ತಲೆನೋವು, ಭೀಕರ ಸ್ವಪ್ನಗಳು, ಕಣ್ಣಿನ ಒತ್ತಡ, ಕಲಿಕೆಯ ಅಸಾಮರ್ಥ್ಯ, ಗಾಬರಿ, ಖಿನ್ನತೆ, ಅಂಧತ್ವ, ಕಿವುಡುತನ, ಮೂರ್ಛೆ ರೋಗ , ಬೆನ್ನೆಲುಬು ಬಾಗಿರುವ ಸಮಸ್ಯೆಗಳು ಉಂಟಾಗುತ್ತವೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Fri, 13 May 22