ಬೇಸಿಗೆಯಲ್ಲಿ ಕೋಲ್ಡ್​​ ನೀರು ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ

ಬೇಸಿಗೆಯಲ್ಲಿ ಜನರು ದೇಹವನ್ನು ತಂಪಾಗಿರಿಸುವುದು ಹೇಗೆ ಎಂಬುದರ ಕಡೆಗೆ ಹೆಚ್ಚು ಗಮನವನ್ನು ಕೊಡುತ್ತಾರೆ, ವಿವಿಧ ಬಗೆಯ ಹಣ್ಣಿನ ಜ್ಯೂಸ್, ಮಜ್ಜಿಗೆ ಸೇರಿದಂತೆ ತಣ್ಣನಿಗಿನ ಪಾನೀಯಗಳನ್ನೇ ಹೆಚ್ಚು ಪ್ರಿಫರ್ ಮಾಡುತ್ತಾರೆ. ಹಾಗೆಯೇ ತಣ್ಣನೆಯ ನೀರು ಕುಡಿಯುವುದು ಕೂಡ, ಪ್ರತಿನಿತ್ಯ ಫ್ರಿಡ್ಜ್​ನಲ್ಲಿ ಇಟ್ಟಿರುವ ತಣ್ಣನೆಯ ನೀರನ್ನು ಕುಡಿಯುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಹೇಳಲಾಗಿದೆ.

ಬೇಸಿಗೆಯಲ್ಲಿ ಕೋಲ್ಡ್​​ ನೀರು ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ
ಕೋಲ್ಡ್​ ನೀರು
Follow us
TV9 Web
| Updated By: ನಯನಾ ರಾಜೀವ್

Updated on:May 12, 2022 | 5:49 PM

ಬೇಸಿಗೆ (Summer)ಯಲ್ಲಿ ಜನರು ದೇಹವನ್ನು ತಂಪಾಗಿರಿಸುವುದು ಹೇಗೆ ಎಂಬುದರ ಕಡೆಗೆ ಹೆಚ್ಚು ಗಮನವನ್ನು ಕೊಡುತ್ತಾರೆ, ವಿವಿಧ ಬಗೆಯ ಹಣ್ಣಿನ ಜ್ಯೂಸ್, ಮಜ್ಜಿಗೆ ಸೇರಿದಂತೆ ತಣ್ಣನಿಗಿನ ಪಾನೀಯಗಳನ್ನೇ ಹೆಚ್ಚು ಪ್ರಿಫರ್ ಮಾಡುತ್ತಾರೆ. ಹಾಗೆಯೇ ತಣ್ಣನೆಯ ನೀರು ಕುಡಿಯುವುದು ಕೂಡ, ಪ್ರತಿನಿತ್ಯ ಫ್ರಿಡ್ಜ್​ನಲ್ಲಿ ಇಟ್ಟಿರುವ ತಣ್ಣನೆಯ ನೀರನ್ನು ಕುಡಿಯುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಹೇಳಲಾಗಿದೆ.

ಬಿಸಿಲ ಬೇಗೆಯಲ್ಲಿ ಕೋಲ್ಡ್ ನೀರು(Cold Water) ಕುಡಿಯುವುದು ಒಂದು ಕ್ಷಣಕ್ಕೆ ಹಿತ ಎನಿಸಬಹುದು. ಆದರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇದು ನಮ್ಮ ಹೃದಯ ಮತ್ತು ಮೆದುಳಿನ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಬೇಸಿಗೆಯಲ್ಲಿ ತಣ್ಣೀರು ಕುಡಿಯುವುದರಿಂದ ಆಗುವ ಅನನುಕೂಲಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹೃದಯ ಬಡಿತ ಕಡಿಮೆ ಬೇಸಿಗೆಯಲ್ಲಿ ನಿತ್ಯ ಕೋಲ್ಡ್​ ನೀರು ಕುಡಿಯುವುದರಿಂದ ಹೃದಯ ಬಡಿತದ ವೇಗ ಕಡಿಮೆಯಾಗುತ್ತದೆ. ಹೀಗಾಗಿ ಎಷ್ಟೇ ಸೆಕೆ ಇದ್ದರೂ ಸಾಮಾನ್ಯ ನೀರನ್ನೇ ಕುಡಿಯಲು ಪ್ರಯತ್ನಿಸಿ, ತಣ್ಣನೆಯ ನೀರನ್ನು ಕುಡಿಯುವುದರಿಂದ ಹೇದಯ ಹಾಗೂ ಮೆದುಳಿನ ಮೇಲೆ ದುಷ್ಪರಿಣಾಮ ಉಂಟಾಗಲಿದೆ.

ರೋಗನಿರೋಧಕ ಶಕ್ತಿಯೂ ದುರ್ಬಲ ಕೊರೊನಾ ಸೇರಿದಂತೆ ವಿವಿಧ ವೈರಸ್​ಗಳ ಅಪಾಯ ಹೆಚ್ಚಿರುವುದರಿಂದ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಕೋಲ್ಡ್​ ನೀರನ್ನು ಕುಡಿಯಲೇಬೇಡಿ.

ಜೀರ್ಣಾಂಗ ವ್ಯವಸ್ಥೆ ತಲೆಕೆಳಗಾಗಲಿದೆ ಬಿಸಿಲ ಸಮಯದಲ್ಲಿ ಕೋಲ್ಡ್​ ನೀರು ಕುಡಿಯುವುದರಿಂದ ಆ ಹೊತ್ತಿಗಷ್ಟೇ ನಿಮಗೆ ಆರಾಮವೆನಿಸಬಹುದು ಆದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಅಂದರೆ ನಾವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ತಲೆನೋವು ಬರುವ ಸಾಧ್ಯತೆ: ನೀವು ಕೋಲ್ಡ್ ನೀರು ಕುಡಿದ ತಕ್ಷಣ ತಲೆನೋವಿನ ಸಮಸ್ಯೆ ಉದ್ಭವವಾಗಬಹುದು, ಬೇಸಿಗೆಯಲ್ಲಿ ಬಹುತೇಕ ಮಂದಿ ತಲೆನೋವು ಸಮಸ್ಯೆ ಎದುರಿಸಲು ಕೋಲ್ಡ್ ನೀರು ಕುಡಿಯುವುದು ಕೂಡ ಕಾರಣವಾಗಿರಬಹುದು.

ಈ ಮಾಹಿತಿ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಎಲ್ಲವೂ ಸಾಮಾನ್ಯ ಹಾಗೂ ಮನೆಮದ್ದು ಆಧಾರಿತ ಮಾಹಿತಿಯಾಗಿರುತ್ತದೆ. ನಿಮಗೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Thu, 12 May 22