Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು

| Updated By: shruti hegde

Updated on: Jun 21, 2021 | 9:35 AM

ತೂಕದ ನಷ್ಟಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ. ಸರಿಯಾದ ಆಹಾರ ಕ್ರಮವು ಸಾಮಾನ್ಯವಾಗಿ ಕೊಬ್ಬು, ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು
ಪ್ರಾತಿನಿಧಿಕ ಚಿತ್ರ
Follow us on

ತೂಕ ನಷ್ಟಕ್ಕೆ, ವ್ಯಾಯಾಮದ ಜೊತೆಗೆ ಆಹಾರ ಪದ್ಧತಿಯ ಬಗ್ಗೆ ನಾವು ವಿಶೇಷ ಗಮನ ಹರಿಸುತ್ತೇವೆ. ಪಥ್ಯವನ್ನು ಸರಿಯಾಗಿ ಅನುಸರಿಸದಿದ್ದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ನೀವು ಮಧ್ಯಂತರ ಉಪವಾಸ ಜತೆಗೆ ಕಡಿಮೆ ಕ್ಯಾಲೊರಿ ಮತ್ತು ಕೊಬ್ಬನ್ನು ಸೇವಿಸುತ್ತಿದ್ದರೂ ಸಹ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಿರುವಾಗ ನೀವು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೇ ದೇಹಕ್ಕೂ ಒಳ್ಳೆಯದು. ಸಾಮಾನ್ಯವಾಗಿ ಆಹಾರ ಪದ್ಧತಿಯಲ್ಲಿ ಏನೆಲ್ಲಾ ತಪ್ಪುಗಳಾಗುತ್ತವೆ ಎಂಬುದರ ಕುರಿತಾಗಿ ನೋಡೋಣ.

ಬೆಳಗ್ಗಿನ ಉಪಹಾರ ಸೇವಿಸದಿರುವುದು
ಬೆಳಗ್ಗಿನ ಉಪಹಾರ ನಮ್ಮ ಇಡೀ ದಿನದ ಪ್ರಮುಖ ತಿಂಡಿ. ಇದು ಸಾಕುಷ್ಟು ಪ್ರಮಾಣದ ಫೈಬರ್​ ಮತ್ತು ಸಕ್ಕರೆಯನ್ನು ನಮ್ಮ ದೇಹಕ್ಕೆ ನೀಡುತ್ತದೆ. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಹಾಗಿರುವಾಗ ಬೆಳಿಗ್ಗಿನ ಉಪಹಾರವನ್ನು ಸೇವಿಸದಿರುವುದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಕಡಿಮೆ ಕಾರ್ಬೋಹೈಡ್ರೇಟ್​ ಆಹಾರ
ತೂಕದ ನಷ್ಟಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ. ಸರಿಯಾದ ಆಹಾರ ಕ್ರಮವು ಸಾಮಾನ್ಯವಾಗಿ ಕೊಬ್ಬು, ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅದಾಗ್ಯೂ, ನಿಮ್ಮ ದೇಹದಲ್ಲಿ ಫೈಬರ್​, ಕೊಬ್ಬಿನಾಮ್ಲಗಳ ಪ್ರಮಾಣವು ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಾರ್ಬೋಹೈಡ್ರೇಟ್​ ಯುಕ್ತ ಆಹಾರ ಕ್ರಮ ನಮ್ಮದಾಗಿರಬೇಕು.

ಸಾಕಷ್ಟು ಆಹಾರನ್ನು ಸೇವಿಸುವುದಿಲ್ಲ
ಆರೋಗ್ಯಕರ ಆಹಾರ ನಿಮ್ಮ ದೇಹಕ್ಕೆ ಒಳ್ಳೆಯದು. ಆಹಾರ ಸೇವಿಸಬೇಕೆಂದು ಚಿಫ್ಸ್​, ಜಂಕ್​ಫುಡ್​ಗಳನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಆರೋಗ್ಯ ಇನ್ನೂ ಹೆಚ್ಚು ಕೆಡುತ್ತದೆ. ಹಾಗಿರುವಾಗ ಆರೋಗ್ಯ ಉತ್ತಮವಾಗಿರಬೇಕು ಎಂದಾದರೆ ನೀವು ನಿಮ್ಮ ಆರೋಗ್ಯಕ್ಕೆ ಬೇಕಾದಷ್ಟು ಆಹಾರವನ್ನು ಸೇವಿಸಬೇಕು.

ನೀರಿನ ಬದಲು ಜ್ಯೂಸ್​ ಸೇವಿಸಬಹುದು
ನಿಮ್ಮ ಆಹಾರ ಕ್ರಮದಲ್ಲಿ ಉತ್ತಮ ಪೌಷ್ಠಿಕಾಂಶವುಳ್ಲ ಹಣ್ಣುಗಳ ಜ್ಯೂಸ್​ ಸೇವಿಸಿ. ಇದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಜತೆಗೆ ಹಸಿವಿನಿಂದ ಸುಧಾರಿಸಿಕೊಳ್ಳಬಹುದು. ಹಾಗೂ ಹಣ್ಣುಗಳಲ್ಲಿರುವ ಪೌಷ್ಠಿಕಾಂಶ ನಮ್ಮ ದೇಹಕ್ಕೆ ಸೇರುವುದರಿಂದ ಆರೋಗ್ಯವಾಗಿರುತ್ತೇವೆ.

ಇದನ್ನೂ ಓದಿ:

Health Tips: ಕೆಮ್ಮು ಮತ್ತು ಮನೆಮದ್ದು; ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಮಳೆಗಾಲಕ್ಕೆ ಔಷಧಿ

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?