AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baby Skin Care Tips: ಚಳಿಗಾಲದ ಈ ಋತುವಿನಲ್ಲಿ ನಿಮ್ಮ ಮಗುವಿನ ಆರೈಕೆ ಹೀಗಿರಲಿ!

ಚಳಿಗಾಲದಲ್ಲಿ ನಿಮ್ಮ ಮಗುವಿನ ಚರ್ಮ (Skin) ವು ಒಣಗಿದ್ದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

Baby Skin Care Tips: ಚಳಿಗಾಲದ ಈ ಋತುವಿನಲ್ಲಿ ನಿಮ್ಮ ಮಗುವಿನ ಆರೈಕೆ ಹೀಗಿರಲಿ!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 21, 2022 | 8:00 AM

Share

ಚಳಿಗಾಲದಲ್ಲಿ ಮಕ್ಕಳ (Baby) ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ. ಹವಾಮಾನದಲ್ಲಿನ ಸಣ್ಣ ಬದಲಾವಣೆ ಕೂಡ ಮಕ್ಕಳ ಆರೋಗ್ಯದ ಮೇಲೆ ತಕ್ಷಣ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ನಿಮ್ಮ ಮಗುವಿನ ಚರ್ಮ (Skin) ವು ಒಣಗಿದ್ದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈಗ ನೀವು ನಿಮಗೆ ಹೇಳಲು ಹೊರಟಿರುವ ಈ ಸಲಹೆಗಳ ಸಹಾಯದಿಂದ ಮಗುವಿನ ಚರ್ಮದ ನೈಸರ್ಗಿಕ ಮಾಯಿಶ್ಚರೈಸರ್​ನ್ನು ಹೆಚ್ಚಿಸಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ.

ಮಕ್ಕಳ ಉಡುಪುಗಳ ಬಗ್ಗೆ ವಿಶೇಷ ಗಮನ ಕೊಡಿ:

ಯಾವುದೇ ಕಾಲದಲ್ಲಿ ಮಕ್ಕಳಿಗಾಗಿ ಬಳಸುವ ಬಟ್ಟೆಗಳು ಯಾವಾಗಲೂ ಮೃದುವಾಗಿರಬೇಕು. ಚಳಿಗಾಲದಲ್ಲಿ ಮಕ್ಕಳ ಚರ್ಮವು ಹೆಚ್ಚು ಸೂಕ್ಷ್ಮವಾಗುತ್ತದೆ. ಆದ್ದರಿಂದ ದದ್ದುಗಳು ಅಥವಾ ಕಿರಿಕಿರಿಯನ್ನು ತಡೆಯುವ ಬಟ್ಟೆಗಳನ್ನು ತೊಡಿಸಿ. ಈ ಬಟ್ಟೆಗಳನ್ನು ಮಾರುಕಟ್ಟೆಯಿಂದ ಪಡೆದ ತಕ್ಷಣ ಧರಿಸಬೇಡಿ. ಅವುಗಳನ್ನು ಮೊದಲು ಬೇಬಿ ಡಿಟರ್ಜೆಂಟ್‌ನಲ್ಲಿ ತೊಳೆಯಿರಿ. ಮಕ್ಕಳ ಉಡುಪುಗಳ ಮೇಲೆ ಬ್ಲೀಚ್ ಅಥವಾ ಇತರ ಯಾವುದೇ ರಾಸಾಯನಿಕಗಳನ್ನು ಎಂದಿಗೂ ಬಳಸಬೇಡಿ ಎಂಬುದನ್ನು ನೆನಪಿಡಿ.

ಮಗುವಿನ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಆರಿಸಿ:

ಮಗುವಿಗೆ ಕಾಸ್ಮೆಟಿಕ್ ಉತ್ಪನ್ನಗಳನ್ನು ಆಯ್ಕೆ ಮಾಡುವ ಅತ್ಯುತ್ತಮ ಮಾನದಂಡವೆಂದರೆ ಅವು ರಾಸಾಯನಿಕ-ಮುಕ್ತ, ಪ್ಯಾರಾಬೆನ್-ಮುಕ್ತ ಎಂದು ತಿಳಿದುಕೊಳ್ಳುವುದು. ಅವರ ಚರ್ಮವನ್ನು ತೇವಗೊಳಿಸಲು ನೈಸರ್ಗಿಕ ತೈಲಗಳನ್ನು ಬಳಸಿದರೆ ಉತ್ತಮ. ಚಳಿಗಾಲದಲ್ಲಿ ಆಲಿವ್ ಎಣ್ಣೆ ತುಂಬಾ ಒಳ್ಳೆಯದು. ಈ ರೀತಿ ಮಕ್ಕಳಿಗೆ ಮಸಾಜ್ ಮಾಡಿದರೆ ತ್ವಚೆ ಒಣಗುವುದಿಲ್ಲ. ಅವರಿಗೆ ವೈದ್ಯಕೀಯವಾಗಿ ಅನುಮೋದಿತ ಉತ್ಪನ್ನಗಳನ್ನು ಮಾತ್ರ ಬಳಸಿ. ಮಕ್ಕಳಿಗೆ ಬಬಲ್ ಸ್ನಾನವನ್ನು ಆಯ್ಕೆ ಮಾಡಬೇಡಿ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಸ್ನಾನಕ್ಕೆ ಬೆಚ್ಚಗಿನ ನೀರು:

ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಚರ್ಮ ಒಣಗಬಹುದು. ಆದ್ದರಿಂದ ಬೆಚ್ಚಗಿನ ನೀರನ್ನು ಆರಿಸಿ ಮತ್ತು ತ್ವರಿತ ಸ್ನಾನದ ನಂತರ ಮಗುವನ್ನು ಕೋಣೆಗೆ ತನ್ನಿ. ಮಕ್ಕಳು ನೀರಿನಲ್ಲಿ ಹೆಚ್ಚು ಕಾಲ ಇರುವುದರಿಂದ ಚರ್ಮವು ಒಣಗಬಹುದು. ಚಳಿಗಾಲದಲ್ಲಿ ಅವರು ಪ್ರತಿದಿನ ಸ್ನಾನ ಮಾಡುವ ಅಗತ್ಯವಿಲ್ಲ. ಮೃದುವಾದ ಕ್ಲೆನ್ಸರ್​ನ್ನು ಸಹ ಬಳಸಿ. ಹಸುವಿನ ಹಾಲಿನೊಂದಿಗೆ ಮಸಾಜ್ ಮಾಡುವ ಮೂಲಕ ನೀವು ಮಗುವನ್ನು ಸ್ನಾನ ಮಾಡಿಸಬಹುದು. ಅಂತೆಯೇ, ಮಗುವಿನ ದೇಹವನ್ನು ಆದಷ್ಟು ಆವರಿಸುವ ಬಟ್ಟೆಗಳನ್ನು ಧರಿಸಿ. ಗಾಳಿ ಕೂಡ ಚರ್ಮವನ್ನು ಒಣಗಿಸುತ್ತದೆ.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು