Belly Lat Loss Drink: ಪ್ರತಿದಿನ ಈ ಪಾನೀಯಗಳನ್ನು ಕುಡಿದ್ರೆ ಹೊಟ್ಟೆಯ ಕೊಬ್ಬು ಮಂಜಿನಂತೆ ಕರಗುತ್ತಂತೆ

ಅತಿಯಾದ ಜಂಕ್‌ ಫುಡ್‌ ಸೇವನೆ, ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದ ತೂಕ ಹೆಚ್ಚಾಗುವುದರ ಜೊತೆಗೆ ದೇಹದಲ್ಲಿ ಕೊಬ್ಬನ್ನು ಕೂಡ ಸಂಗ್ರಹಣೆ ಮಾಡುತ್ತದೆ. ಅದರಲ್ಲೂ ಹೊಟ್ಟೆಯ ಭಾಗದಲ್ಲಿನ ಕೊಬ್ಬು ದೇಹದ ಅಂದ ಮತ್ತು ಆಕಾರವನ್ನೇ ಹದಗೆಡಿಸುತ್ತದೆ. ನೀವು ಸಹ ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಹರ ಸಾಹಸ ಪಡುತ್ತಿದ್ದೀರಾ? ಹಾಗಿದ್ರೆ ಪ್ರತಿನಿತ್ಯ ಈ ಕೆಲವೊಂದು ಪಾನೀಯಗಳನ್ನು ತಪ್ಪದೆ ಸೇವನೆ ಮಾಡಿ, ಇದರಿಂದ ಕೊಬ್ಬು ಮಂಜಿನಂತೆ ಕರಗುತ್ತದೆ.

Belly Lat Loss Drink: ಪ್ರತಿದಿನ ಈ ಪಾನೀಯಗಳನ್ನು ಕುಡಿದ್ರೆ ಹೊಟ್ಟೆಯ ಕೊಬ್ಬು ಮಂಜಿನಂತೆ ಕರಗುತ್ತಂತೆ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 19, 2025 | 5:02 PM

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೊಜ್ಜಿನ (Fat) ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜಂಕ್‌ ಫುಡ್‌ನಂತಹ ಅನಾರೋಗ್ಯಕರ ಆಹಾರಗಳ ಸೇವನೆ, ದೈಹಿಕ ಚಟುವಟಿಕೆಯ ಈ ಎಲ್ಲಾ ಅಂಶಗಳು ದೇಹ ತೂಕ ಹೆಚ್ಚಾಗಲು ಕಾರಣ. ದೇಹ ತೂಕ ಹೆಚ್ಚಾಗುವುದರ ಜೊತೆಗೆ ಬೊಜ್ಜಿನ ಸಮಸ್ಯೆ ಕೂಡಾ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಬೆಲ್ಲಿ ಫ್ಯಾಟ್‌ ಅಥವಾ ಹೊಟ್ಟೆಯ ಸುತ್ತ ಕಾಣಿಸಿಕೊಳ್ಳುವ ಬೊಜ್ಜು ದೇಹದ ಆಕಾರವನ್ನೇ ಹಾಳು ಮಾಡಿಬಿಡುತ್ತದೆ.  ಹಲವರು ದೇಹದ ತೂಕ ಇಳಿಸಲು, ಹೊಟ್ಟೆಯ ಬೊಜ್ಜನ್ನು (belly fat) ಕರಗಿಸಲು ಇನ್ನಿಲ್ಲದ ಪರಿಶ್ರಮ ವಹಿಸುತ್ತಾರೆ. ಆದರೂ ಬೊಜ್ಜು ಕರಗುತ್ತಿಲ್ಲ ಎಂದು ಹೇಳ್ತಾರೆ.  ನೀವು ಸಹ ಬೆಲ್ಲಿ ಫ್ಯಾಟ್‌ ಕರಗಿಸಲು ಸಾಹಸ ಪಡುತ್ತಿದ್ದೀರಾ? ಹಾಗಿದ್ರೆ ಪ್ರತಿದಿನ ಈ  ಕೆಲವೊಂದು ಸೂಪರ್‌ ಪಾನೀಯಗಳನ್ನು (drinks) ಸೇವಿಸುವ ಮೂಲಕ ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿ ಈ ಪಾನೀಯಗಳು:

ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಕುಡಿಯಿರಿ:

ಚಿಯಾ ಬೀಜಗಳಲ್ಲಿ ಸಾಕಷ್ಟು ಪ್ರಮಾಣದ ಕರಗುವ ನಾರಿನಾಂಶವಿದೆ. ಇದು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಮತ್ತು ಇದು ಹೊಟ್ಟೆಯ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಅಲ್ಲದೆ ಅವುಗಳಲ್ಲಿರುವ ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ನಿಮ್ಮನ್ನು ಚೈತನ್ಯಪೂರ್ಣರನ್ನಾಗಿಸುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು  ಬಲಪಡಿಸುತ್ತದೆ. ಮತ್ತು ತೂಕ ಇಳಿಕೆಗೂ ಸಹಕಾರಿ.

ಗ್ರೀನ್‌ ಟೀ ಕುಡಿಯಿರಿ:

ತೂಕ ಇಳಿಕೆಗೆ ಹಾಗೂ ಹೊಟ್ಟೆಯ ಕೊಬ್ಬನ್ನು ಕರಗಿಸಲು ಗ್ರೀನ್ ಟೀ  ಸಹಕಾರಿಯಾಗಿದೆ. ಇದರಲ್ಲಿರುವ ಕ್ಯಾಟೆಚಿನ್ ಎಂಬ ಉತ್ಕರ್ಷಣ ನಿರೋಧಕವು ಕೊಬ್ಬನ್ನು ಸುಡಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಗ್ರೀನ್‌ ಟೀಯಲ್ಲಿ ಕೆಫೀನ್ ಇದ್ದು, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ.

ಇದನ್ನೂ ಓದಿ
ಬಿಸಿಬಿಸಿ ಪಾಸ್ತಾ ತಿನ್ನುವ ಬದಲು, ತಣ್ಣಗಾಗಿಸಿ ತಿಂದರೆ ಹಲವು ಪ್ರಯೋಜನ
ಪಿತ್ತದೋಷ ನಿವಾರಣೆಗೆ ಆಯುರ್ವೇದ ಪರಿಹಾರ: ಪತಂಜಲಿ
ಮಹಿಳೆಯರೇ ನಿಮ್ಮ ಒಳ ಉಡುಪುಗಳ ಮಧ್ಯದಲ್ಲಿ ಈ ಪಾಕೆಟ್ ಯಾಕಿರುತ್ತದೆ?
ಅನಾನಸ್ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳಿವು

ನಿಂಬೆ ರಸ ಮತ್ತು ಜೇನುತುಪ್ಪ:

ತೂಕ ಇಳಿಸಿಕೊಳ್ಳಲು, ಹೊಟ್ಟೆಯ ಕೊಬ್ಬನ್ನು ಕರಗಿಸಲು ನಿಂಬೆ ರಸ ಪ್ರಸಿದ್ಧ ಪಾನೀಯವಾಗಿದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಸಾಮರ್ಥ್ಯದ ವಿಷಯಕ್ಕೆ ಬಂದಾಗ, ನಿಂಬೆ ರಸವನ್ನು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ. ಇದರಲ್ಲಿ ಬರೆಸುವ ಜೇನುತುಪ್ಪ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಶುಂಠಿ ಚಹಾ:

ಶುಂಠಿಯು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಒಂದು ಕಪ್ ಶುಂಠಿ ಚಹಾ ಕುಡಿಯುವುದರಿಂದ ರಾತ್ರಿಯಿಡೀ ಆರಾಮವಾಗಿ ನಿದ್ರೆ ಸಹ ಬರುತ್ತದೆ.

ಇದನ್ನೂ ಓದಿ: ದಿನನಿತ್ಯ ಅನಾನಸ್ ಸೇವಿಸಿ ಆರೋಗ್ಯದಲ್ಲಿ ಈ ಬದಲಾವಣೆ ನೋಡಿ

ಮೆಂತ್ಯ ನೀರು:

ಮೆಂತ್ಯದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ವಿಟಮಿನ್ ಸಿ, ವಿಟಮಿನ್ ಡಿ ಮುಂತಾದ ಹಲವು ಪೋಷಕಾಂಶಗಳು ಕಂಡುಬರುತ್ತವೆ. ಪ್ರತಿದಿನ ಬೆಳಿಗ್ಗೆ ಮೆಂತ್ಯವನ್ನು ನೆನೆಸಿ ಅದರ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮೆಂತ್ಯ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಈ ಮೂಲಕ ನೀವು ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.

ಜೀರಿಗೆ ನೀರು:

ಜೀರಿಗೆಯಲ್ಲಿ ಥೈಮೋಕ್ವಿನೋನ್ ಎಂಬ ಅಂಶವಿದ್ದು, ಇದು ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಜೀರಿಗೆ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಯಸಿದರೆ ಪ್ರತಿನಿತ್ಯ ಜೀರಿಗೆ ನೀರನ್ನು ಕುಡಿಯಿರಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ