AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನನಿತ್ಯ ಅನಾನಸ್ ಸೇವಿಸಿ ಆರೋಗ್ಯದಲ್ಲಿ ಈ ಬದಲಾವಣೆ ನೋಡಿ

ಘಮ್ ಎನ್ನುವ ಅನಾನಸ್ ಯಾರಿಗೆ ಇಷ್ಟ ಹೇಳಿ. ಹೊರಗಿನಿಂದ ಮುಳ್ಳು ಮುಳ್ಳಾಗಿ ಒರಟಾಗಿ ಕಂಡರೂ ಈ ಹಣ್ಣು ರಸಭರಿತವಾಗಿದ್ದು, ಹುಳಿ ಹಾಗೂ ಸಿಹಿ ಮಿಶ್ರಿತವಾಗಿದೆ. ಕೆಲವರು ಹಾಗೆ ತಿನ್ನಲು ಇಷ್ಟ ಪಟ್ಟರೆ ಇನ್ನು ಕೆಲವರು ಜ್ಯೂಸ್ ಮಾಡಿ ಕುಡಿಯುತ್ತಾರೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ದಿನನಿತ್ಯ ಅನಾನಸ್ ಸೇವಿಸಿ ಆರೋಗ್ಯದಲ್ಲಿ ಈ ಬದಲಾವಣೆ ನೋಡಿ
ಸಾಂದರ್ಭಿಕ ಚಿತ್ರ Image Credit source: Getty Images
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on:May 18, 2025 | 7:51 PM

Share

ದಿನನಿತ್ಯ ಸೇವಿಸುವ ಆಹಾರದಲ್ಲಿ ಹಣ್ಣು (fruits) ಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆ ಯಲ್ಲಿ ಹೆಚ್ಚಿನವರು ಹಣ್ಣಿನ ಜ್ಯೂಸ್ (fruits juice) ಮಾಡಿ ಕುಡಿಯುತ್ತಾರೆ. ಆದರೆ ಈ ಋತುವಿನಲ್ಲಿ ಅನಾನಸ್ (pineapple) ಹಣ್ಣಿನ ಜ್ಯೂಸ್ ಮಾಡಿ ಸೇವಿಸುವುದು ಉತ್ತಮ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಮ್ಯಾಂಗನೀಸ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ಫೈಬರ್  ಸೇರಿದಂತೆ ಇನ್ನಿತರ ಪೋಷಕಾಂಶಗಳು ಹೇರಳವಾಗಿದೆ. ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ಅನಾನಸ್ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳಿವು:

ಹೃದಯದ ಆರೋಗ್ಯ ಕಾಪಾಡುತ್ತದೆ: ನಿಯಮಿತವಾಗಿ ಅನಾನಸ್  ಸೇವನೆಯೂ ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದಲ್ಲದೇ ಗಂಭೀರ ಮತ್ತು ಮಾರಣಾಂತಿಕ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ ಸಮಸ್ಯೆ ನಿವಾರಿಸುತ್ತದೆ: ಅನಾನಸ್ ನಲ್ಲಿ ಕಿಣ್ವಗಳು  ಹೇರಳವಾಗಿದ್ದು, ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದರ ಸೇವನೆಯಿಂದ  ಹಸಿವನ್ನು ಕಡಿಮೆ ಮಾಡಿ ಅರ್ಜಿರ್ಣ ಸೇರಿದಂತೆ,  ಹೊಟ್ಟೆಗೆ ಸಂಬಂಧಿಸಿದ ಹತ್ತಾರು ಸಮಸ್ಯೆಗಳನ್ನು ದೂರ ಮಾಡುತ್ತದೆ.

ಇದನ್ನೂ ಓದಿ
Image
ಏಡ್ಸ್ ಬಗ್ಗೆ ಭಯ ಬೇಡ; ಬರದಂತೆ ಮುನ್ನೆಚ್ಚರಿಕೆ ವಹಿಸಿ
Image
ಕರ್ನಾಟಕದಲ್ಲಿ ಹೆಚ್ಚುತ್ತಿದೆ ಅಧಿಕ ರಕ್ತದೊತ್ತಡ ಪ್ರಕರಣ
Image
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
Image
ಮುಖ ಕಾಂತಿಯುತವಾಗಿರಲು ಈ ಆಹಾರಗಳ ಸೇವನೆ ಮಾಡಬೇಡಿ

ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ: ಈಗಿನ ಕಾಲದಲ್ಲಿ ಅತಿಯಾಗಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳನ್ನು ಬಳಸುವವರ ಸಂಖ್ಯೆ ಹೆಚ್ಚು. ಇದರ ಬಳಕೆಯೂ ಕಣ್ಣಿನ ಸಮಸ್ಯೆಯನ್ನು ತಂದೊಡ್ದುತ್ತಿದೆ. ಹೀಗಾಗಿ ಕಣ್ಣಿನ ಆರೋಗ್ಯ ಕಾಪಾಡಲು ಅನಾನಸ್ ಸೇವನೆ ಮಾಡುವುದು ಉತ್ತಮ.  ಇದರಲ್ಲಿ ವಿಟಮಿನ್ ಎ ಹಾಗೂ ಆ್ಯಂಟಿಆಕ್ಸಿಡೆಂಟ್ ಗಳು ಹೇರಳವಾಗಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ: ಈ ಗಿಡವನ್ನು ಮನೆಯಲ್ಲಿ ಅಗತ್ಯವಾಗಿ ಬೆಳೆಸಿ, ಆರೋಗ್ಯಕ್ಕೆ ಒಳ್ಳೆಯದು

ಮೂಳೆಗಳು ಬಲಪಡಿಸಲು ಸಹಕಾರಿ: ಅನಾನಸ್‌ನಲ್ಲಿ ಮ್ಯಾಂಗನೀಸ್ ಅಂಶವು ಸಮೃದ್ಧವಾಗಿದ್ದು ಇದು ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹೀಗಾಗಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ: ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಅಂಶವು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಸೇವನೆಯೂ ಆರೋಗ್ಯ ಸಮಸ್ಯೆ ಬರುವುದನ್ನು ತಪ್ಪಿಸಿ ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳುತ್ತದೆ.

ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಸಹಕಾರಿ: ಅನಾನಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಈ ಹಣ್ಣನ್ನು ಸೇವನೆ ಮಾಡುವುದರಿಂದ  ಚರ್ಮವು ಕಾಂತಿಯುತವಾಗಿರಿಸಿ, ಕೂದಲು ದಪ್ಪವಾಗಿ ರೇಷ್ಮೆಯಂತೆ ಬೆಳೆಯಲು ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Sun, 18 May 25