ನಿಂಬೆ ರಸವನ್ನು ಮುಖಕ್ಕೆ ಬಳೆದುಕೊಳ್ಳುತ್ತಿದ್ದೀರಾ.. ಈ ಸಲಹೆಗಳು ನಿಮಗಾಗಿ!

|

Updated on: Sep 09, 2023 | 6:06 AM

ನಿಂಬೆ ರಸವನ್ನು ಬಳಸುವಾಗ ಯಾವಾಗಲೂ ಕಾಳಜಿಯನ್ನು ತೆಗೆದುಕೊಳ್ಳಬೇಕು. ನಿಂಬೆಯೊಂದಿಗೆ ಹಲವು ರೀತಿಯ ಸೌಂದರ್ಯ ಸಲಹೆಗಳಿವೆ. ನಿಮ್ಮ ಮುಖಕ್ಕೆ ಹೊಂದಿಕೆಯಾಗುವುದನ್ನು ಆರಿಸಿಕೊಳ್ಳಿ. ಏಕೆಂದರೆ ಕೆಲವು ಪದಾರ್ಥಗಳು ಕೆಲವು ಚರ್ಮದ ಪ್ರಕಾರಗಳಿಗೆ ಹೊಂದಿಕೆಯಾಗುವುದಿಲ್ಲ. ಇದು ಅಲರ್ಜಿ, ತುರಿಕೆ ಮತ್ತು ಕಪ್ಪಾಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ನಿಂಬೆ ರಸವನ್ನು ಮುಖಕ್ಕೆ ಬಳೆದುಕೊಳ್ಳುತ್ತಿದ್ದೀರಾ.. ಈ ಸಲಹೆಗಳು ನಿಮಗಾಗಿ!
ನಿಂಬೆ ರಸವನ್ನು ನೇರವಾಗಿ ಹಚ್ಚಬೇಡಿ
Follow us on

ನಿಂಬೆ (Lemon) ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ತ್ವಚೆಯ ಹೊಳಪಿನ ಜೊತೆಗೆ ತ್ವಚೆಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಆದರೆ ನಿಂಬೆಯನ್ನು ಹೇಗೆ ಬಳಸಬೇಕೆಂದು ತಿಳಿಯದ ಕಾರಣ ಅನೇಕ ಜನರು ತಪ್ಪುಗಳನ್ನು ಮಾಡುತ್ತಾರೆ. ನಿಂಬೆಯನ್ನು ನೇರವಾಗಿ ಮುಖದ ಮೇಲೆ ಬಳಸಿದರೆ ಇಲ್ಲಸಲ್ಲದ ಸಮಸ್ಯೆಗಳು ಉಂಟಾಗುತ್ತವೆ. ಇದು ದೊಡ್ಡ ತಪ್ಪು ಎಂದು ತಜ್ಞರು (Health) ಎಚ್ಚರಿಸಿದ್ದಾರೆ. ನಿಂಬೆ ರಸವನ್ನು ನೇರವಾಗಿ ಮುಖಕ್ಕೆ ಬಳಸಬೇಡಿ. ಮತ್ತು ನಿಂಬೆಯ (Lemon juice) ಇತರೆ ಪ್ರಯೋಜನಗಳೇನು? ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ.

ನಿಂಬೆ ರಸವನ್ನು ನೇರವಾಗಿ ಹಚ್ಚಬೇಡಿ:

ನಿಂಬೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅದ್ಭುತ ಪವಾಡ ಮಾಡುತ್ತದೆ. ಆದರೆ ಸರಿಯಾಗಿ ಬಳಸಿದರೆ ಯಾವುದೇ ತೊಂದರೆಗಳಿಲ್ಲ. ಇದು ಹೆಚ್ಚು ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಚರ್ಮದ ಮೇಲೆ ನೇರವಾಗಿ ಬಳಿಯಬಾರದು. ಆದರೆ ಇತರ ವಸ್ತುಗಳೊಂದಿಗೆ ಬಳಸಬಹುದು. ನೇರವಾಗಿ ಬಳೆದುಕೊಂಡರೆ ತುರಿಕೆ, ದದ್ದು, ಚರ್ಮದ ಅಲರ್ಜಿ, ತ್ವಚೆಯಲ್ಲಿ ಕಪ್ಪಾಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕೆಲವರು ತಮಗೆ ಗೊತ್ತಿಲ್ಲದೆಯೇ ಸಮಸ್ಯೆಗಳನ್ನು ನೇರವಾಗಿ ಆಹ್ವಾನಿಸುತ್ತಾರೆ. ನಿಂಬೆ ರಸವನ್ನು ಯಾವಾಗಲೂ ಕೆಲವು ಪದಾರ್ಥಗಳೊಂದಿಗೆ ಮಾತ್ರ ಬೆರೆಸಬೇಕು. ತ್ವಚೆಯ ಮೇಲೆ ನೇರವಾಗಿ ನಿಂಬೆಹಣ್ಣನ್ನು ಹಚ್ಚುವುದರಿಂದ ಸನ್ ಬರ್ನ್ ಪರಿಣಾಮ ಹೆಚ್ಚಾಗುತ್ತದೆ. ಇದರಿಂದ ಮುಖ ಕೆಂಪಾಗಿ ತುರಿಕೆಯಾಗುತ್ತದೆ.

ನಿಂಬೆ ರಸವನ್ನು ಇದರೊಂದಿಗೆ ಸಂಯೋಜಿಸಬಹುದು:

ನಿಂಬೆ ರಸವನ್ನು ಇತರ ವಸ್ತುಗಳ ಸಂಯೋಜನೆಯಲ್ಲಿ ಬಳಸಬಹುದು. ಇದನ್ನು ಜೇನುತುಪ್ಪ, ಮೊಸರು, ಶ್ರೀಗಂಧ, ಬೇಳೆ ಹಿಟ್ಟು, ಅಕ್ಕಿ ಹಿಟ್ಟು ಇತ್ಯಾದಿಗಳೊಂದಿಗೆ ಬೆರೆಸಬಹುದು. ಇದರಿಂದ ಚರ್ಮದ ಸಮಸ್ಯೆಗಳು ಬರುವುದಿಲ್ಲ. ಅಲ್ಲದೆ, ನಿಂಬೆ ರಸವನ್ನು ಚರ್ಮ ಮತ್ತು ಮುಖಕ್ಕೆ ಬಳಸುವಾಗ ಹೆಚ್ಚು ತೆಗೆದುಕೊಳ್ಳಬಾರದು. ಮೂರರಿಂದ ನಾಲ್ಕು ಹನಿ ನಿಂಬೆ ರಸ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ನಿಂಬೆ ರಸ ಬಳಕೆ ಮುನ್ನೆಚ್ಚರಿಕೆ ವಹಿಸಬೇಕು:

ಆದರೆ ನಿಂಬೆಯೊಂದಿಗೆ ಹಲವು ರೀತಿಯ ಸೌಂದರ್ಯ ಸಲಹೆಗಳಿವೆ. ನಿಮ್ಮ ಮುಖಕ್ಕೆ ಹೊಂದಿಕೆಯಾಗುವುದನ್ನು ಆರಿಸಿಕೊಳ್ಳಿ. ಏಕೆಂದರೆ ಕೆಲವು ಪದಾರ್ಥಗಳು ಕೆಲವು ಚರ್ಮದ ಪ್ರಕಾರಗಳಿಗೆ ಹೊಂದಿಕೆಯಾಗುವುದಿಲ್ಲ. ಇದು ಅಲರ್ಜಿ, ತುರಿಕೆ ಮತ್ತು ಕಪ್ಪಾಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ವೈದ್ಯರ ಬಳಿಗೆ ಓಡಬೇಕು. ನಿಮಗೆ ತಿಳಿದಿರುವ ಬ್ಯೂಟಿಷಿಯನ್‌ಗಳ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ನಿಂಬೆ ರಸವನ್ನು ಬಳಸುವಾಗ ಯಾವಾಗಲೂ ಕಾಳಜಿಯನ್ನು ತೆಗೆದುಕೊಳ್ಳಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ