Health Tips: ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಹಲವು ಪ್ರಯೋಜನಗಳು

| Updated By: sandhya thejappa

Updated on: Jun 29, 2021 | 8:50 AM

ಹಣ್ಣಿನ ರಾಜ ಎಂಬ ಪಟ್ಟ ಹೊಂದಿರುವ ಮಾವಿನ ಹಣ್ಣು ಬಹಳ ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಅದರೆ ಅದೆಷ್ಟೋ ಜನರಿಗೆ ಮಾವಿನ ಹಣ್ಣಿನ ಸಿಪ್ಪೆಯಲ್ಲಿರುವ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.

Health Tips: ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಹಲವು ಪ್ರಯೋಜನಗಳು
ಮಾವಿನ ಹಣ್ಣು
Follow us on

ಇದು ಮಾವಿನ ಹಣ್ಣಿನ ಸೀಜನ್. ರಸ್ತೆ ಬದಿ ಬದಿಗೂ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿದೆ. ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಹಣ್ಣಿನ ರಾಜ ಎಂಬ ಪಟ್ಟ ಹೊಂದಿರುವ ಮಾವಿನ ಹಣ್ಣು ಬಹಳ ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಅದರೆ ಅದೆಷ್ಟೋ ಜನರಿಗೆ ಮಾವಿನ ಹಣ್ಣಿನ ಸಿಪ್ಪೆಯಲ್ಲಿರುವ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಹಣ್ಣು ತಿಂದು ಸಿಪ್ಪೆಯನ್ನು ಕಸದ ತೊಟ್ಟಿಗೆ ಹಾಕುತ್ತಾರೆ. ಮಾವಿನ ಹಣ್ಣಿನ ಸಿಪ್ಪೆಯಿಂದ ಸಿಗುವ ಪ್ರಯೋಜನಗಳನ್ನು ತಿಳಿದರೆ ಸಿಪ್ಪೆಯನ್ನು ಎಸೆಯುವುದಕ್ಕೆ ಮುಂದಾಗಲ್ಲ. ಮಾವಿನ ಹಣ್ಣಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶವಿದೆ. ಜೊತೆಗೆ ಸಿಪ್ಪೆ ಕೂಡಾ ಹೆಚ್ಚು ಪೋಷಕಾಂಶದಿಂದ ಕೂಡಿದೆ.

ಪ್ರಯೋಜನಗಳು
* ಮುಖದ ಸುಕ್ಕು ನಿವಾರಣೆ
ಚಿಕ್ಕ ವಯಸ್ಸಿನಲ್ಲಿ ಮುಖ ಸುಕ್ಕಾಗಿ ವಯಸ್ಸಾದಂತೆ ಕಾಣುತ್ತಾರೆ. ಇದಕ್ಕೆ ಒತ್ತಡ ಮುಖ್ಯ ಕಾರಣವಾಗಿರುತ್ತದೆ. ಇದಕ್ಕೆ ಸೂಕ್ತ ಪರಿಹಾರ ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ. ಮಾವಿನ ಸಿಪ್ಪೆಯ ಪೇಸ್ಟ್ ಮುಖಕ್ಕೆ ಹಚ್ಚಿ. 15 ರಿಂದ 20 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಮುಖದ ಸುಕ್ಕು ಕಡಿಮೆಯಾಗುತ್ತದೆ.

* ಮೊಡವೆ ನಿವಾರಣೆ
ಮುಖದ ಮೇಲಿನ ಮೊಡವೆ ಹೆಚ್ಚು ಮುಜುಗರಕ್ಕೆ ಕಾರಣವಾಗಿದೆ. ಈ ಮುಜುಗರವನ್ನು ಹೋಗಲಾಡಿಸುವ ಸಾಮರ್ಥ್ಯ ಮಾವಿನ ಹಣ್ಣಿನ ಸಿಪ್ಪೆಗಿದೆ. ಮೊಡವೆಗಳು ಸಾಮಾನ್ಯವಾಗಿ ಪ್ರೌಢಾವಸ್ಥೆಯ ವಯಸ್ಸಿನಲ್ಲಿ ಕಂಡುಬರುತ್ತದೆ. ಮಾವಿನ ಹಣ್ಣಿನ ಬಳಕೆಯಿಂದ ಮೊಡವೆ ನಿವಾರಣೆಯಾಗುವುದು.

* ರೋಗ ನಿರೋಧಕ ಶಕ್ತಿ ಹೆಚ್ಚಳ
ಕೊರೊನಾ ಕಾಲವಿದು. ಕೊರೊನಾ ಸೋಂಕು ಹತ್ತಿರ ಸುಳಿಯದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಹೀಗಾಗಿ ಮಾವಿನ ಹಣ್ಣಿನ ಸಿಪ್ಪೆ ಸೇವಿಸಬೇಕು. ಇದರಲ್ಲಿ ಕರಗದ ನಾರಿನ ಅಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗಿದೆ.

* ತೂಕ ಇಳಿಕೆ
ಅತಿಯಾದ ತೂಕ ಇತರೆ ಕಾಯಿಲೆಗಳಿಗೆ ಆಹ್ವಾನಿಸಿದಂತಾಗುತ್ತದೆ. ಫಿಟ್ ಆ್ಯಂಡ್ ಫೈನ್ ಆಗಲು ದೇಹದ ತೂಕ ಕಡಿಮೆಗೊಳಿಸಬೇಕು. ತೂಕವನ್ನು ಕಡಿಮೆಗೊಳಿಸಲು ಮಾವಿನ ಸಿಪ್ಪೆ ಸಹಾಯಕವಾಗಿದೆ. ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುವ ಗುಣವನ್ನು ಮಾವಿನ ಸಿಪ್ಪೆ ಹೊಂದಿದೆ.

* ರಕ್ತಸ್ರಾವ ನಿವಾರಣೆ
ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತಸ್ರಾವ ದೇಹದಲ್ಲಿ ರಕ್ತದ ಕೊರತೆಯನ್ನು ಉಂಟುಮಾಡುತ್ತದೆ. ಮಾವಿನ ಸಿಪ್ಪೆಯ ಬಳಕೆಯಿಂದ ರಕ್ತಸ್ರಾವ ನಿವಾರಣೆಯಾಗುತ್ತದೆ. ಸ್ವಲ್ಪ ಎಣ್ಣೆಯೊಂದಿಗೆ ಮಾವಿನ ಹಣ್ಣಿನ ಸಿಪ್ಪೆಯನ್ನು ಹುರಿದು ತಿಂದರೆ ಈ ರಕ್ತಸ್ರಾವದ ಸಮಸ್ಯೆ ಕಡಿಮೆಯಾಗುತ್ತದೆ.

ಬಳಕೆ ಹೇಗೆ?
* ಬೇಯಿಸಿದ ಮಾವಿನಕಾಯಿಯನ್ನು ಕತ್ತರಿಸಿ, ನಯವಾಗಿಸಬೇಕು. ಇದನ್ನು ಐಸ್ ಕ್ರೀಂ ಅಥವಾ ಬೇರೆ ಹಣ್ಣುಗಳ ಜೊತೆ ಮಿಶ್ರಣ ಮಾಡಿ ತಿನ್ನಬೇಕು.

* ಮಾವಿನ ಹಣ್ಣಿನ ಸಿಪ್ಪೆಯನ್ನು ತುರಿದು, ಸಲಾಡ್ ಮಾಡಿ ಸೇವಿಸಬಹುದು.

ಇದನ್ನೂ ಓದಿ

Health Tips: ದಾಸವಾಳದ ಗಿಡಮೂಲಿಕೆ ಚಹಾ ಎಂದಾದರೂ ಸೇವಿಸಿದ್ದೀರಾ? ಒಂದು ಸಿಪ್​ ಸವಿದರೂ ಆರೋಗ್ಯಕ್ಕೆ ಪ್ರಯೋಜನಗಳಿವೆ

Health Tips: ಬೀಟ್​ರೂಟ್​​ ಡಿಟಾಕ್ಸ್​ ಜ್ಯೂಸ್; ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

(Benefits of Mango Peel to good health)

Published On - 8:38 am, Tue, 29 June 21