AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Methi Leaves Benefits: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಿ, ತೂಕ ಇಳಿಕೆವರೆಗೂ ಮೆಂತ್ಯೆ ಸೊಪ್ಪಿನ ಪ್ರಯೋಜನಗಳು ಹತ್ತು ಹಲವು

ಹಸಿರು ಎಲೆಗಳ ತರಕಾರಿಗಳು ಚಳಿಗಾಲದಲ್ಲಿ ಹೇರಳವಾಗಿ ಲಭ್ಯವಿರುತ್ತದೆ. ಈ ಋತುವಿನಲ್ಲಿ ಮೆಂತ್ಯೆ ಎಲೆಗಳು ಸಹ ಹೆಚ್ಚಾಗಿ ಸಿಗುತ್ತದೆ.

Methi Leaves Benefits: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಿ, ತೂಕ ಇಳಿಕೆವರೆಗೂ ಮೆಂತ್ಯೆ ಸೊಪ್ಪಿನ ಪ್ರಯೋಜನಗಳು ಹತ್ತು ಹಲವು
Methi Leaves
TV9 Web
| Edited By: |

Updated on: Nov 07, 2022 | 2:38 PM

Share

ಮೆಂತ್ಯೆಯ ರುಚಿ ಕಹಿ ಇರಬಹುದು ಆದರೆ ಆರೋಗ್ಯಕ್ಕೆ ಸಿಹಿಯಾದ ಅನುಭವವನ್ನು ನೀಡುತ್ತದೆ, ಮೆಂತ್ಯೆ ಸೊಪ್ಪಿನಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

ಹಸಿರು ಎಲೆಗಳ ತರಕಾರಿಗಳು ಚಳಿಗಾಲದಲ್ಲಿ ಹೇರಳವಾಗಿ ಲಭ್ಯವಿರುತ್ತದೆ. ಈ ಋತುವಿನಲ್ಲಿ ಮೆಂತ್ಯೆ ಎಲೆಗಳು ಸಹ ಹೆಚ್ಚಾಗಿ ಸಿಗುತ್ತದೆ. ಜನರು ಈ ಎಲೆಗಳನ್ನು ಸಾರು, ಪರೋಟ, ಮೆಂತ್ಯೆ ಬಾತ್ ಮಸೂರ ಇತ್ಯಾದಿಗಳಲ್ಲಿ ಬಳಸುತ್ತಾರೆ. ತಿನ್ನಲು ರುಚಿಕರವಾಗಿದ್ದು, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

ತೂಕ ಇಳಿಕೆಗೆ ಸಹಕಾರಿ ಮೆಂತ್ಯೆ ಎಲೆಗಳಲ್ಲಿ ಫೈಬರ್ ಹೆಚ್ಚಾಗಿ ಕಂಡುಬರುತ್ತದೆ. ಇದು ತಿಂದ ನಂತರ ನಿಮಗೆ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವಿರುತ್ತದೆ. ಮೆಂತ್ಯೆ ಕಾಳುಗಳು ಕೂಡ ತೂಕ ನಷ್ಟದಲ್ಲಿ ಉತ್ತಮ ಪಾತ್ರವಹಿಸುತ್ತದೆ.

ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ನಿಮ್ಮ ರಕ್ತದಲ್ಲಿನ ಸಕ್ಕರೆ ಅಧಿಕವಾಗಿದ್ದರೆ, ನೀವು ಮೆಂತ್ಯೆ ಎಲೆಗಳನ್ನು ಸೇವಿಸಬಹುದು. ಇದು ಮಧುಮೇಹವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ, ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವುದು ಇದು ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಮಗೆ ಗ್ಯಾಸ್ ಮತ್ತು ಹೊಟ್ಟೆಯಲ್ಲಿ ಭಾರವಾಗುವಂತಹ ಸಮಸ್ಯೆಗಳಿದ್ದರೆ, ನೀವು ಮೆಂತ್ಯೆ ಎಲೆಗಳನ್ನು ಸೇವಿಸಬಹುದು.

ಹೃದಯಕ್ಕೆ ಪ್ರಯೋಜನಕಾರಿ ಮೆಂತ್ಯೆ ಸೊಪ್ಪು ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿ. ಅವು ಅನೇಕ ಹೃದಯ ಕಾಯಿಲೆಗಳಿಂದ ರಕ್ಷಿಸಬಹುದು. ಹೃದಯ ರೋಗಿಗಳು ಈ ಎಲೆಗಳನ್ನು ಸೇವಿಸಬಹುದು.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ, ನೀವು ಮೆಂತ್ಯೆ ಎಲೆಗಳನ್ನು ಸೇವಿಸಬಹುದು. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.

ಹಾಲಿಟೋಸಿಸ್ ಬಾಯಿ ದುರ್ವಾಸನೆ ಇದ್ದರೆ ಮೆಂತ್ಯೆ ಸೊಪ್ಪನ್ನು ಸೇವಿಸಬಹುದು. ಈ ಎಲೆಗಳಿಂದ ನೀವು ಚಹಾವನ್ನು ಕುಡಿಯಬಹುದು. ಇದು ದುರ್ವಾಸನೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ಎಲೆಗಳು ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ