Cardiac Arrest: ಹೃದಯ ಸ್ತಂಭನ ಅನುಭವ ಹೇಗಿರುತ್ತೆ? ಸಿಪಿಆರ್​ನಿಂದ ಬದುಕುಳಿದ ರೋಗಿಗಳು ಹೇಳಿದ್ದೇನು?

ಪ್ರತಿಯೊಬ್ಬರ ಜೀವ ಅಮೂಲ್ಯವಾದದ್ದು. ಜೀವ ಉಳಿಸಿದವರನ್ನು ದೇವರಿಗೆ ಹೋಲಿಸಲಾಗುತ್ತದೆ. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅನೇಕ ಸಂದರ್ಭಗಳಲ್ಲಿ ವೈದ್ಯರು ಮಾತ್ರವಲ್ಲ ಪೊಲೀಸ್ ಸಿಬ್ಬಂದಿ ಕೂಡ ಜನರ ಪ್ರಾಣ ಉಳಿಸಿರುತ್ತಾರೆ.

Cardiac Arrest: ಹೃದಯ ಸ್ತಂಭನ ಅನುಭವ ಹೇಗಿರುತ್ತೆ? ಸಿಪಿಆರ್​ನಿಂದ ಬದುಕುಳಿದ ರೋಗಿಗಳು ಹೇಳಿದ್ದೇನು?
CPR
Follow us
TV9 Web
| Updated By: ನಯನಾ ರಾಜೀವ್

Updated on: Nov 07, 2022 | 4:48 PM

ಪ್ರತಿಯೊಬ್ಬರ ಜೀವ ಅಮೂಲ್ಯವಾದದ್ದು. ಜೀವ ಉಳಿಸಿದವರನ್ನು ದೇವರಿಗೆ ಹೋಲಿಸಲಾಗುತ್ತದೆ. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅನೇಕ ಸಂದರ್ಭಗಳಲ್ಲಿ ವೈದ್ಯರು ಮಾತ್ರವಲ್ಲ ಪೊಲೀಸ್ ಸಿಬ್ಬಂದಿ ಕೂಡ ಜನರ ಪ್ರಾಣ ಉಳಿಸಿರುತ್ತಾರೆ.

ಸಿಪಿಆರ್ (CPR )ಮೂಲಕ ಪ್ರಾಣ ಉಳಿತು ಎಂಬ ಮಾತನ್ನು ನಾವು ಪದೇ ಪದೇ ಕೇಳಿರಬಹುದು. ವರದಿಯೊಂದರ ಪ್ರಕಾರ, ಹೃದಯ ಸ್ತಂಭನಕ್ಕೆ ಒಳಗಾದ ಐದು ಮಂದಿ ಪೈಕಿ ಒಬ್ಬರು ಮಾತ್ರ ಬದುಕುಳಿಯುವ ಸಾಧ್ಯತೆ ಇದ್ದು ಅನುಭವವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಹೃದಯ ಸ್ತಂಭನ ಉಂಟಾಗಿ ಮೂರ್ಛೆ ತಪ್ಪಿದ ಸ್ಥಿತಿಯಲ್ಲಿದ್ದಾಗ ಸಿಪಿಆರ್ ನೀಡಲಾಗುತ್ತದೆ.

ಸಿಪಿಆರ್ ಎಂದರೇನು? ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್​ನನ್ನು ಸಿಪಿಆರ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದು ರೋಗಿಗೆ ಉಸಿರಾಡಲು ನೆರವಾಗುತ್ತದೆ.

ಸಿಪಿಆರ್ ನೀಡುವಾಗ, ಇದು ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಸಿಪಿಆರ್ ಸಹಾಯದಿಂದ, ವ್ಯಕ್ತಿಗೆ ಹೊಸ ಜೀವ ಸಿಗಬಹುದು.

ಸರ್ಕ್ಯೂಲೇಷನ್ ಎನ್ನುವ ಜರ್ನಲ್​ನಲ್ಲಿ ವರದಿ ಪ್ರಕಟಿಸಲಾಗಿದ್ದು, ಅಧ್ಯಯನದಲ್ಲಿ 567 ಮಂದಿ ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಹೃದಯ ಸ್ತಂಬನ ಉಂಟಾದಾಗ ಸಿಪಿಆರ್​ಗೆ ಒಳಗಾಗಿರುವ 2017 ಮೇ ಹಾಗೂ 2020ರ ಮಾರ್ಚ್ ನಡುವೆ ಅಮೆರಿಕ ಹಾಗೂ ಯುಕೆಯಲ್ಲಿ ನಡೆದ ಸಂಶೋಧನೆ ಇದಾಗಿದೆ.

ಯುಕೆ ಹಾಗೂ ಅಮೆರಿಕದ 25 ಆಸ್ಪತ್ರೆಗಳು ಅಧ್ಯಯನ ಒಂದು ಭಾಗವಾಗಿದ್ದವು. ಹೃದಯಸ್ತಂಭನ ಬಳಿಕ ಸಿಪಿಆರ್​ಗಾಗಿ ನೋಂದಣಿ ಮಾಡಿದವರಲ್ಲಿ ಮೆದುಳು ಸಕ್ರಿಯವಾಗಿತ್ತು, ಆದರೆ ಮೂರ್ಛೆ ಸ್ಥಿತಿಯಲ್ಲಿದ್ದರು.

ಸಾವಿನ ಸಮೀಪ ಅನುಭವ? ಬದುಕುಳಿದವರು ದೇಹದಿಂದ ಬೇರ್ಪಡುವ ಗ್ರಹಿಕೆ, ನೋವು ಅಥವಾ ಯಾತನೆಯನ್ನು ಅನುಭವಿಸುವುದಿಲ್ಲ. ಕೆಲವರು ಸ್ಪಷ್ಟವಾದ ಅನುಭವವನ್ನು ಹೊಂದಿದ್ದಾರೆ.

ಈ ಸ್ಪಷ್ಟ ಅನುಭವಗಳು ಯಾವುವು? ಭ್ರಮೆ ರೀತಿಯ ಅನುಭವಗಳಾಗಿವೆ ಇದು ಪ್ರಜ್ಞಾವಸ್ಥೆಗಿಂತ ಭಿನ್ನವಾಗಿದೆ. ಸಿಪಿಆರ್‌ಗೆ ಒಂದು ಗಂಟೆಯವರೆಗೆ ಗಾಮಾ, ಡೆಲ್ಟಾ, ಥೀಟಾ, ಆಲ್ಫಾ ಮತ್ತು ಬೀಟಾ ತರಂಗಗಳು ಸೇರಿದಂತೆ ಮೆದುಳಿನ ಚಟುವಟಿಕೆಯ ಸ್ಪೈಕ್‌ಗಳ ಆವಿಷ್ಕಾರವು ಒಂದು ಪ್ರಮುಖ ಸಂಶೋಧನೆಯಾಗಿದೆ.

ಆದ್ರೆ ಸಿಪಿಆರ್, ಜೀವ ಉಳಿಸಲು ನೆರವಾಗುತ್ತದೆ. ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ ಚ್ಚಿರುತ್ತದೆ. ಮಹಿಳೆಯರು ಸೇರಿದಂತೆ ಅನೇಕರಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಡಿಯೋ ಅರೆಸ್ಟ್ ಆದಾಗ ಈ ಚಿಕಿತ್ಸೆ ಸಿಗುವುದಿಲ್ಲ.

ಕಾರ್ಡಿಯೋ ಅರೆಸ್ಟ್ ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಆಂಬ್ಯುಲೆನ್ಸ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಸಿಪಿಆರ್ ತರಬೇತಿ ನೀಡಲಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ