AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Sunlight: ಚಳಿಗಾಲದಲ್ಲಿ ಸೂರ್ಯನ ಮೋಹಕ ಶಾಖ ಆಹ್ಲಾದಕರ, ಹಿತಕರ! ಏಕೆ?

ಚಳಿಗಾಲ ಅದಾಗಲೆ ಕಾಲಿಟ್ಟಿದೆ. ಬೆಳಿಗ್ಗೆ ಮತ್ತು ಸಂಜೆ ಎಲ್ಲರಿಗೂ ಚಳಿ ಅನುಭವ ಶುರುವಾಗಿದೆ. ಆಶ್ಚೆರ್ಯಕರ ಸಂಗತಿಯೆಂದರೆ ಮಧ್ಯಾಹ್ನದ ಬಿಸಿಲಿನಲ್ಲಿಯೂ ಅಷ್ಟೊಂದು ಬಿಸಿ ಬಾಧಿಸುವುದಿಲ್ಲ. ಸೂರ್ಯ ಎಲ್ಲರಿಗೂ ಆಪ್ತನೆನಿಸುತ್ತಾನೆ. ಅದೇ ಬೇಸಿಗೆಯಲ್ಲಿ ಸೂರ್ಯ ಎಂಥವರನ್ನೂ ಕಂಗೆಡಿಸಿಬಿಡುತ್ತಾನೆ.

Winter Sunlight: ಚಳಿಗಾಲದಲ್ಲಿ ಸೂರ್ಯನ ಮೋಹಕ ಶಾಖ ಆಹ್ಲಾದಕರ, ಹಿತಕರ! ಏಕೆ?
ಚಳಿಗಾಲದಲ್ಲಿ ಸೂರ್ಯನ ಮೋಹಕ ಶಾಖ ಆಹ್ಲಾದಕರ, ಹಿತಕರ! ಏಕೆ?
TV9 Web
| Updated By: ಸಾಧು ಶ್ರೀನಾಥ್​|

Updated on: Nov 07, 2022 | 2:37 PM

Share

ಚಳಿಗಾಲದಲ್ಲಿ ತುಂಬಾ ಹೊತ್ತು ಬಿಸಿಲಿನಲ್ಲಿ ಇರೋದು ಒಳ್ಳೇದು ಅಂತ ಅನಿಸುತ್ತೆ.. ಸೂರ್ಯನ ಮೋಹಕ ರಶ್ಮಿಗಳು ಹಿತಕರವಾಗಿ, ಆರಾಮದಾಯಕವಾಗಿ ಇರುತ್ತದೆ. ಆದರೆ ಬೇಸಿಗೆಯಲ್ಲಿ ಅದೇ ಕಡು ಬಿಸಿಲು ಕಂಡರೆ ಭಯದಿಂದ ಥರಗುಟ್ಟಿ ನೆರಳನ್ನು ಆಶ್ರಯಿಸುತ್ತೇವೆ. ಚಳಿಗಾಲದಲ್ಲಿ ಸೂರ್ಯ ಹೀಗೆ ಹಿತಕರವಾಗಿರಲು ಕಾರಣವೇನು ಎಂಬುದಕ್ಕೆ ಇಲ್ಲಿದೆ ಉತ್ತರ.

ಚಳಿಗಾಲ ಅದಾಗಲೆ ಕಾಲಿಟ್ಟಿದೆ. ಬೆಳಿಗ್ಗೆ ಮತ್ತು ಸಂಜೆ ಎಲ್ಲರಿಗೂ ಚಳಿ ಅನುಭವ ಶುರುವಾಗಿದೆ. ಆಶ್ಚೆರ್ಯಕರ ಸಂಗತಿಯೆಂದರೆ ಮಧ್ಯಾಹ್ನದ ಬಿಸಿಲಿನಲ್ಲಿಯೂ ಅಷ್ಟೊಂದು ಬಿಸಿ ಬಾಧಿಸುವುದಿಲ್ಲ. ಸೂರ್ಯ ಎಲ್ಲರಿಗೂ ಆಪ್ತನೆನಿಸುತ್ತಾನೆ. ಅದೇ ಬೇಸಿಗೆಯಲ್ಲಿ ಸೂರ್ಯ ಎಂಥವರನ್ನೂ ಕಂಗೆಡಿಸಿಬಿಡುತ್ತಾನೆ. ಸೂರ್ಯನ ಬಿಸಿಲು ಚಳಿಗಾಲ ಬಂತೆಂದರೆ ಮೃದುವಾಗಿ, ಮಧುರವಾಗಿ, ಹಿತವಾಗಿ ಇರುತ್ತಾನೆ ಏಕೆ ಎಂಬುದನ್ನು ಗಮನಿಸಿದ್ದೀರಾ? ಬೇಸಿಗೆಯಲ್ಲಿ ಉರಿಯುವ ಸೂರ್ಯ.. ಚಳಿಗಾಲದಲ್ಲಿ ಮೋಹಕವಾಗಿ ಕಾಣುವುದೇಕೆ..? ಚಳಿಗಾಲದಲ್ಲಿ ಬಿಸಿಲು ಕಾಯಿಸುವ ಮಜವೇ ಬೇರೆ!

ಚಳಿಗಾಲದಲ್ಲಿ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚಳಿಗಾಲದಲ್ಲಿ ಈ ಬೆಚ್ಚಗಿನ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ದೇಹವು ಆರಾಮದಾಯಕವಾಗಿರುತ್ತದೆ. ಬೇಸಿಗೆಯ ರಣ ಸೂರ್ಯ ತುಂಬಾ ಬಿಸಿಯಾಗಿರುತ್ತಾನೆ. ಅದೇ ಚಳಿಗಾಲದ ಸೂರ್ಯ ಬೆಚ್ಚಗಿರುತ್ತದೆ. ಇದರ ಹಿಂದಿರುವ ವಿಜ್ಞಾನ ಏನೆಂದು ಇಂದು ತಿಳಿಯೋಣ..

ನಾಲ್ಕು ಋತುಗಳಿಗೆ ವಿರುದ್ಧವಾಗಿ, ಅನೇಕ ಪ್ರದೇಶಗಳಲ್ಲಿ ಚಳಿಗಾಲವು ಹಿಮ ಮತ್ತು ಘನೀಕರಿಸುವ ತಾಪಮಾನದೊಂದಿಗೆ ಸಂಬಂಧಿಸಿದೆ. ಅತ್ಯಂತ ತಂಪಾದ ಸಮಯ. ಇದು ನಾಲ್ಕು ಋತುಗಳಲ್ಲಿ ಒಂದಾಗಿದೆ. ಚಳಿಗಾಲವು ಶರತ್ಕಾಲದ ನಂತರ, ವಸಂತಕಾಲದ ಮೊದಲು ಬರುತ್ತದೆ. ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಅಯನ ಸಂಕ್ರಾಂತಿ ಸಾಮಾನ್ಯವಾಗಿ ಡಿಸೆಂಬರ್ 21 ಅಥವಾ ಡಿಸೆಂಬರ್ 22. ದಕ್ಷಿಣ ಗೋಳಾರ್ಧದಲ್ಲಿ ಚಳಿಗಾಲದ ಅಯನ ಸಂಕ್ರಾಂತಿ ಸಾಮಾನ್ಯವಾಗಿ ಜೂನ್ 21 ಅಥವಾ ಜೂನ್ 22.

ಇದೇ ಕಾರಣ..

ಬೇಸಿಗೆಯಲ್ಲಿ ಭೂಮಿಯು ಸೂರ್ಯನಿಗೆ ಹತ್ತಿರವಾಗಿರುತ್ತದೆ. ಅದೇ ಚಳಿಗಾಲದಲ್ಲಿ ಭೂಮಿ ಮತ್ತು ಸೂರ್ಯನ ನಡುವಿನ ಅಂತರವು ಹೆಚ್ಚಾಗುತ್ತದೆ. ಚಳಿಗಾಲದ ಸೂರ್ಯ ಮೃದುವಾಗಿರಲು ಇದೇ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ಸೂರ್ಯನು ಭೂಮಿಯ ಅಕ್ಷದಿಂದ ದೂರದಲ್ಲಿರುವ ಅರ್ಧಗೋಳದಲ್ಲಿರುವುದರಿಂದ ಇದು ಸಂಭವಿಸುತ್ತದೆ. ಇದೆಲ್ಲವೂ ಭೂಮಿಯ ಅಕ್ಷದ ಓರೆಯಿಂದಾಗಿ. ವಾಸ್ತವವೆಂದರೆ ಜುಲೈನಲ್ಲಿ ಭೂಮಿಯು ಸೂರ್ಯನಿಂದ ಅತ್ಯಂತ ದೂರದಲ್ಲಿದೆ. ಜನವರಿ ತಿಂಗಳಲ್ಲಿ ಸೂರ್ಯನಿಗೆ ಹತ್ತಿರದಲ್ಲಿರುತ್ತದೆ.

ಬೇಸಿಗೆಯ ಬಿಸಿಲು ಕಾರಣ:

ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ಓರೆಯಾಗಿ ಹೊಡೆಯುತ್ತವೆ. ಇದರಿಂದಾಗಿ ಬೆಳಕು ಅಷ್ಟಾಗಿ ಹರಡುವುದಿಲ್ಲ. ಆದ್ದರಿಂದ, ಸೂರ್ಯನ ಕಿರಣಗಳು ನೇರವಾಗಿ ಬೀಳುವ ಸ್ಥಳಗಳಲ್ಲಿ.. ಅವುಗಳ ತೀವ್ರತೆಯು ಹೆಚ್ಚಾಗುತ್ತದೆ. ಜೊತೆಗೆ, ಬೇಸಿಗೆಯಲ್ಲಿ ದಿನದ ಸಮಯ ಹೆಚ್ಚು ಇರುತ್ತದೆ. ಆದ್ದರಿಂದ, ಸೂರ್ಯನ ಕಿರಣಗಳು ಭೂಮಿಯ ಮೇಲೆ ಹೆಚ್ಚು ಕಾಲ ಬೀಳುತ್ತವೆ. ಬೇಸಿಗೆಯ ಬಿಸಿಲು ಹೆಚ್ಚು ಪ್ರಖರವಾಗಿರಲು ಕಾರಣವಿದೆ.

ಚಳಿಗಾಲದಲ್ಲಿ ಸೂರ್ಯನ ಬೆಳಕು ಬೆಚ್ಚಗಿರಲು ಇದು ಕಾರಣವಾಗುತ್ತದೆ:

ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ಕಡಿಮೆ ಕೋನದಲ್ಲಿ ತಲುಪುತ್ತದೆ ಅಥವಾ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ.. ಈ ಕಿರಣಗಳು ನೇರವಾಗಿ ಬೀಳುವುದಿಲ್ಲ. ಆದ್ದರಿಂದ, ಇದು ಚಳಿಗಾಲದಲ್ಲಿ ಹೆಚ್ಚು ಸ್ಥಳಗಳಿಗೆ ಹರಡುತ್ತದೆ. ಹಾಗಾಗಿ ಚಳಿಗಾಲದ ಸೂರ್ಯನ ಬೆಳಕು ಕ್ಷೀಣವಾಗಿ ಮತ್ತು ಸೌಮ್ಯವಾಗಿರುತ್ತದೆ. ಅದಕ್ಕಾಗಿಯೇ ಚಳಿಗಾಲದ ದಿನಗಳಲ್ಲಿ ಹಗಲು ಕಡಿಮೆ ಮತ್ತು ರಾತ್ರಿಯ ಸಮಯವು ದೀರ್ಘವಾಗಿರುತ್ತದೆ. ಅಯನ ಸಂಕ್ರಾಂತಿಯ ನಂತರ ಋತುವು ಮುಂದುವರೆದಂತೆ ಹಗಲಿನ ಸಮಯ ಹೆಚ್ಚಾಗುತ್ತದೆ ಮತ್ತು ಶೀತವು ಕಡಿಮೆಯಾಗುತ್ತದೆ. ಹಾಗಾಗಿ ಚಳಿಗಾಲವು ಅತ್ಯಂತ ತಂಪಾದ ಸಮಯ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್