Orange Side Effects: ಕಿತ್ತಳೆ ಹಣ್ಣನ್ನು ಅತಿಯಾಗಿ ತಿಂದರೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು
ಕಿತ್ತಳೆ ಹಣ್ಣು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎನ್ನುವ ಮಾತು ಸತ್ಯ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾಗಿ ತಿಂದರೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಕಿತ್ತಳೆ ಹಣ್ಣು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎನ್ನುವ ಮಾತು ಸತ್ಯ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾಗಿ ತಿಂದರೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಚಳಿಗಾಲ ಬಂತೆಂದರೆ ಸಾಕು ಈ ಕಿತ್ತಳೆ ಬಣ್ಣದ ಹಣ್ಣು ಮಾರುಕಟ್ಟೆಯನ್ನು ಆವರಿಸಿಕೊಂಡುಬಿಡುತ್ತದೆ. ಹುಳಿ-ಸಿಹಿ ಮಿಶ್ರಿತ ಹಣ್ಣು ಬಹುತೇಕರಿಗೆ ಇಷ್ಟ ಆಗುತ್ತದೆ.
ಕೆಲವರು ಬೆಳಗ್ಗಿನ ತಿಂಡಿಯನ್ನೂ ಕ್ವಿಟ್ ಮಾಡಿ, ಕಿತ್ತಳೆ ಹಣ್ಣನ್ನು ತಿನ್ನುವುದುಂಟು. ಕಿತ್ತಳೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್-ಸಿ ಮತ್ತು ನೀರು ಇರುವುದರಿಂದ ಅವು ದೇಹವನ್ನು ಹೈಡ್ರೀಕರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕಿತ್ತಳೆ ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ, ಆದರೆ ಯಾವುದನ್ನಾದರೂ ಹೆಚ್ಚು ಸೇವಿಸುವುದರಿಂದ ಹಾನಿಯಾಗಬಹುದು, ಹಾಗೆಯೇ ಕಿತ್ತಳೆ ತಿನ್ನುವುದರಿಂದ ಹಾನಿಯಾಗುತ್ತದೆ.
ಏಕೆಂದರೆ ಕಿತ್ತಳೆಯಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳು, ನೀರು, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ, ಫೈಬರ್ ಮತ್ತು ವಿಟಮಿನ್-ಸಿ ಇದೆ, ಇದನ್ನು ಅತಿಯಾಗಿ ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನೀವು ಹೆಚ್ಚು ಕಿತ್ತಳೆ ತಿಂದರೆ ಏನಾಗುತ್ತದೆ? ನೀವು ದಿನಕ್ಕೆ 4-5 ಕಿತ್ತಳೆ ಹಣ್ಣುಗಳನ್ನು ಸೇವಿಸುತ್ತಿದ್ದರೆ, ಇದು ದೇಹದಲ್ಲಿ ಫೈಬರ್ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳು ಪ್ರಾರಂಭವಾಗಬಹುದು. ವಿಟಮಿನ್-ಸಿ ಯ ಅತಿಯಾದ ಸೇವನೆಯು ಎದೆಯುರಿ, ವಾಂತಿ, ನಿದ್ರೆಯ ತೊಂದರೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಒಂದು ದಿನದಲ್ಲಿ ಎಷ್ಟು ಕಿತ್ತಳೆ ತಿನ್ನುವುದು ಒಳ್ಳೆಯದು? ಕೆಲವು ತೀವ್ರತರವಾದ ಪ್ರಕರಣಗಳಲ್ಲಿ, ಇದು ವಾಂತಿ ಮತ್ತು ಎದೆಯುರಿ ಉಂಟುಮಾಡಬಹುದು. ಹೆಚ್ಚಿನ ಪೊಟ್ಯಾಸಿಯಮ್ ಮಟ್ಟವನ್ನು ಹೊಂದಿರುವ ಜನರು ಕಿತ್ತಳೆ ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.
ಕಿತ್ತಳೆ ಹಣ್ಣಿನಲ್ಲಿ ಕಡಿಮೆ ಮಟ್ಟದ ಪೊಟ್ಯಾಸಿಯಮ್ ಇದೆ, ಆದರೆ ದೇಹವು ಈಗಾಗಲೇ ಹೆಚ್ಚು ಪೊಟ್ಯಾಸಿಯಮ್ ಹೊಂದಿದ್ದರೆ, ಅದು ಹೈಪರ್‌ಕೆಲೆಮಿಯಾ ಎಂಬ ಗಂಭೀರ ಸ್ಥಿತಿಗೆ ಕಾರಣವಾಗಬಹುದು.
ಕಿತ್ತಳೆ ಹಣ್ಣುಗಳು ಆಮ್ಲೀಯ ಗುಣವನ್ನು ಹೊಂದಿದ್ದು, ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‌ಡಿ) ಯಿಂದ ಬಳಲುತ್ತಿರುವ ಜನರಲ್ಲಿ ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡಬಹುದು. GERD ಯಿಂದ ಬಳಲುತ್ತಿರುವ ಜನರು ಕಿತ್ತಳೆ ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ