Asthma: ಈಜುವುದರಿಂದ ಅಸ್ತಮಾ ನಿಯಂತ್ರಿಸಬಹುದೇ?
ಅಸ್ತಮಾವು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ದೀರ್ಘಕಾಲದವರೆಗೆ ನಿಮ್ಮನ್ನು ಕಾಡುತ್ತದೆ. ಅದು ಶ್ವಾಶನಾಳದ ಮೇಲೆ ಪರಿಣಾಮ ಬೀರುವುದು.
ಅಸ್ತಮಾವು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ದೀರ್ಘಕಾಲದವರೆಗೆ ನಿಮ್ಮನ್ನು ಕಾಡುತ್ತದೆ. ಅದು ಶ್ವಾಸನಾಳದ ಮೇಲೆ ಪರಿಣಾಮ ಬೀರುವುದು. ಶ್ವಾಸನಾಳಗಳು ಗಾಳಿಯನ್ನು ಶ್ವಾಸಕೋಶದ ಒಳಗೆ ಮತ್ತು ಹೊರಗೆ ಸಾಗಿಸುವವು. ಅಸ್ತಮಾ ಆದರೆ ಗಾಳಿಯ ಮಾರ್ಗದ ಒಳಗೋಡೆಗಳೂ ಊದಿಕೊಳ್ಳುವವು.
ಶ್ವಾಸಕೋಶದ ಅಂಗಾಂಶಗಳಿಗೆ ಕಡಿಮೆ ಗಾಳಿ ಹೋಗುವುದು. ಇದರಿಂದ ಉಸಿರಾಟ ಸಶಬ್ದವಾಗುವುದು. ಕೆಮ್ಮು, ಎದೆಬಿಗಿತ, ಉಸಿರಾಟದಲ್ಲಿ ತೊಂದರೆ ವಿಶೇಷವಾಗಿ ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಕಾಣಿಸಿಕೊಳ್ಳುವುದು. ಅಸ್ತಮಾ ಸಂಪೂರ್ಣವಾಗಿ ವಾಸಿಯಾಗುವುದಿಲ್ಲ. ಆದರೆ ಅಸ್ತಮಾ ಇರುವವರು ಅದನ್ನು ನಿಯಂತ್ರಿಸಬಹುದು.
ಅಸ್ತಮಾ ಬರುವ ವಿಧಾನವು ಒಂದೆ ರೀತಿಯಲ್ಲಿರುವುದಿಲ್ಲ. ಕೆಲವು ತೀವ್ರವಾಗಿರಬಹುದು. ಇನ್ನು ಹಲವು ಇರಲಿಕ್ಕಿಲ್ಲ. ತೀವ್ರ ಅಸ್ತಮಾವು ಬಂದಾಗ ಉಸಿರಾಟ ಮಾರ್ಗವು ಮುಚ್ಚಿಹೋಗಿ ಪ್ರಮುಖ ಅಂಗಗಳಿಗೆ ಆಮ್ಲಜನಕದ ಸರಬರಾಜು ನಿಲ್ಲಬಹುದು.
ಇದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಜನರು ತೀವ್ರವಾದ ಅಸ್ತಮಾದಿಂದ ಸಾಯಲೂಬಹುದು. ಅಸ್ತಮಾ ಇದ್ದವರು ನಿಯಮಿತವಾಗಿ ವೈದ್ಯರನ್ನು ಕಾಣಲೇ ಬೇಕು.
ಕಾರಣಗಳು ವಾತಾವರಣದಲ್ಲಿನ ಕೆಲವು ವಸ್ತುಗಳು ಅಸ್ತಮಾದ ಲಕ್ಷಣಗಳನ್ನು ಹೊರ ಹಾಕಬಹುದು ಮತ್ತು ಅದರಿಂದ ಅಸ್ತಮಾ ಬರಬಹುದು. ಬಹು ಸಾಮಾನ್ಯವಾದವು, ವ್ಯಾಯಾಮ, ಅಲೆರ್ಜಿನ್ಗಳು ಮತ್ತು ವೈರಲ್ ಸೋಂಕು. ಕೆಲವು ಜನರಿಗೆ ವ್ಯಾಯಾಮ ಮಾಡಿದಾಗ ಮತ್ತು ವೈರಲ್ ಜ್ವರಬಂದಾಗ ಮಾತ್ರ ಅಸ್ತಮಾ ಬರುವುದು.
-ಧೂಳಿನ ಕಣಗಳು (ಮನೆಯಲ್ಲಿನ ಧೂಳು) -ಸಿಗರೇಟಿನ ಹೊಗೆ -ವಾಯು ಮಾಲಿನ್ಯ -ಚಳಿಗಾಳಿ ಅಥವಾ ಹವಾಮಾನದ ಬದಲಾವಣೆ. -ಬಣ್ಣದ ಅಥವಾ ಅಡುಗೆಯ ಘಾಟುವಾಸನೆ -ಸುವಾಸಿತ ವಸ್ತುಗಳು ಅಸ್ತಮಾ ಇರುವವರು ತಣ್ಣನೆಯ ನೀರು ಕುಡಿಯುವಂತಿಲ್ಲ, ಮಳೆಯಲ್ಲಿ ನೆಲೆಯುವಂತಿಲ್ಲ, ತಣ್ಣನೆಯ ಗಾಳಿಯಲ್ಲಿ ಓಡಾಡುವಂತಿಲ್ಲ ಎಂದು ಹೇಳುತ್ತಾರೆ. ಆದರೆ ಈಜುವುದರಿಂದ ಅಸ್ತಮಾವನ್ನು ಕೂಡ ನಿಯಂತ್ರಿಸಬಹುದು ಎಂದು ವೈದ್ಯರು ಹೇಳುತ್ತಾರೆ.
ನಿಯಮಿತವಾಗಿ ಕೆಲವು ರೀತಿಯ ವ್ಯಾಯಾಮವನ್ನು ಮಾಡಿದರೆ, ರೋಗವನ್ನು ಕಡಿಮೆ ಮಾಡಬಹುದು. ಈಜುವಾಗ, ವಾಯುಮಾರ್ಗಗಳಲ್ಲಿನ ಉರಿಯೂತಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಉರಿಯೂತ ಕಡಿಮೆಯಾದಾಗ, ನೀವು ಸರಿಯಾಗಿ ಉಸಿರಾಡಬಹುದು ಮತ್ತು ಅದು ನಿಮ್ಮ ಶ್ವಾಸಕೋಶದ ಮೇಲೆ ಹಾಕಬೇಕಾದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಇದು ನಿಮ್ಮ ಸ್ನಾಯುಗಳನ್ನು ಸಹ ಬಲಪಡಿಸುತ್ತದೆ. ಈಜು ಸ್ನಾಯುಗಳ ಬಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸ್ನಾಯುಗಳು ಬಲವಾಗಿದ್ದಾಗ, ನಿಮ್ಮ ದೈನಂದಿನ ಚಟುವಟಿಕೆಗಳನ್ನು ನೀವು ಸರಾಗವಾಗಿ ಮಾಡಬಹುದು.
ಇದು ನಿಮ್ಮ ಸಹನೆಯನ್ನು ಹೆಚ್ಚಿಸುತ್ತದೆ. ನೀವು ದೀರ್ಘಕಾಲದವರೆಗೆ ಈಜುವುದನ್ನು ಅಭ್ಯಾಸ ಮಾಡಿದಾಗ, ನಿಮ್ಮ ಶ್ವಾಸಕೋಶಗಳು ಅದನ್ನು ಬಳಸಿಕೊಳ್ಳುತ್ತವೆ ಮತ್ತು ಅಂತಹ ವ್ಯಾಯಾಮಗಳಿಗೆ ನಿಮ್ಮ ಸಹಿಷ್ಣುತೆಯನ್ನು ನಿರ್ಮಿಸುತ್ತದೆ. ನಿಮ್ಮ ಸಹಿಷ್ಣುತೆ ಹೆಚ್ಚಾದಾಗ, ಯಾವುದೇ ಉಸಿರಾಟದ ತೊಂದರೆಗಳಿಲ್ಲದೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಇದು ನಿಮಗೆ ಸಹಾಯ ಮಾಡುತ್ತದೆ.