ತನ್ನದೇ ಆದ ವಿಭಿನ್ನ ಶೈಲಿಯ ರ‍್ಯಾಪ್ ಹಾಡು(Rap songs) ಗಳ ಮೂಲಕ ಬಾಲಿವುಡ್ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಯೋ ಯೋ ಹನಿಸಿಂಗ್ ಗಳಿಸಿದ್ದಾರೆ. ಇದೀಗಾ ಹನಿ ಸಿಂಗ್ ಬೈಪೋಲಾರ್ ಡಿಸಾರ್ಡರ್(Bipolar Disorder) ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಹನಿ ಸಿಂಗ್ ಬಳಲುತ್ತಿರುವ ಬೈಪೋಲಾರ್ ಡಿಸಾರ್ಡರ್ ಎಂದರೇನು? ಇದರ ರೋಗ ರೋಗಲಕ್ಷಣಗಳ ಕುರಿತು ಮಾಹಿತಿ ಇಲ್ಲಿವೆ.
ಬೈಪೋಲರ್ ಡಿಸಾರ್ಡರ್ ಎಂಬುದು ಮಾನಸಿಕ ಅಸ್ವಸ್ಥತೆಯಾಗಿದ್ದು, ಈ ರೋಗ ಲಕ್ಷಣ ಇರುವ ವ್ಯಕ್ತಿಯಲ್ಲಿ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಪ್ರಮುಖವಾಗಿ ಕಿರಿ ಕಿರಿಯ ಅನುಭವ ಹಾಗೂ ಮಾನಸಿಕ ಖಿನ್ನತೆಯನ್ನು ಹೊಂದಿರುತ್ತಾರೆ. ಬೈಪೋಲರ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಯು ತನ್ನ ಶಕ್ತಿ, ಆಲೋಚನೆ, ನಡವಳಿಕೆ ಮತ್ತು ನಿದ್ರೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಅನುಭವಿಸುತ್ತಾನೆ. ಇದು ಆತನ ದೈನಂದಿನ ಜೀವನದಲ್ಲಿ ಅಡ್ಡಿಯುಂಟು ಮಾಡುತ್ತದೆ. ಇಂತಹ ಸಮಯದಲ್ಲಿ ವ್ಯಕ್ತಿಯು ತಮ್ಮ ಸಂಗಾತಿ, ಸ್ನೇಹಿತರಿಂದ ಸಾಕಷ್ಟು ದೂರದಲ್ಲಿರಲು ಬಯಸುತ್ತಾನೆ.
ಬೈಪೋಲರ್ ಡಿಸಾರ್ಡರ್ ಇತ್ತೀಚೆಗೆ ಹೆಚ್ಚಾಗಿ ಹದಿಹರೆಯದ ಅಥವಾ ಇಪ್ಪತ್ತರ ಹರೆಯದವರಲ್ಲಿ ಹೆಚ್ಚಾಗಿ ಕಂಡುಬರುವ ಕಾಯಿಲೆ ಎಂದು ವರದಿಯಾಗಿದೆ. ಜೊತೆಗೆ ಎಲ್ಲಾ ವಯಸ್ಕರಲ್ಲಿ ಕಂಡು ಬರುವ ಕಾಯಿಲೆಯಾಗಿದೆ. ಈ ಕಾಯಿಲೆ ಸಾಮಾನ್ಯವಾಗಿ ಹಳೆಯ ಅಘಾತಕಾರಿ ಘಟನೆಗಳಿಂದ ಕೂಡ ಸಂಭವಿಸುತ್ತದೆ. ಜೊತೆಗೆ ಈ ಖಿನ್ನತೆಯಿಂದ ಹೊರಬರಲು ಡ್ರಗ್ಸ್ ಅಥವಾ ಆಲ್ಕೋಹಾಲ್ ವಿಪರೀತವಾಗಿ ಈ ಸಮಸ್ಯೆ ದುಪ್ಪಟಾಗುವ ಸಾಧ್ಯತೆ ಹೆಚ್ಚಿದೆ.
ಬೈಪೋಲರ್ ಡಿಸಾರ್ಡರ್‌ಗಳಲ್ಲಿ ಮೂರು ವಿಧಗಳನ್ನು ಕಾಣಬಹುದು. ಈ ಮೂರು ವಿಧಗಳಲ್ಲಿ ಅಸ್ವಸ್ಥತೆಯ ರೂಪಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮನಸ್ಥಿತಿ ಬದಲಾವಣೆಗಳು ಎಷ್ಟು ತೀವ್ರವಾಗಿರುತ್ತವೆ ಮತ್ತು ಅವು ಎಷ್ಟು ಕಾಲ ಉಳಿಯುತ್ತವೆ ಎಂಬುದನ್ನು ತಿಳಿಸುತ್ತದೆ.
ಬೈಪೋಲರ್ I ಡಿಸಾರ್ಡರ್: ದೀರ್ಘಕಾಲದ ವರೆಗೆ ಮೂಡ್ ಸ್ವಿಂಗ್ಗಳಿಂದ ಹಿಡಿದು ತೀವ್ರ ಖಿನ್ನತೆಯ ವರೆಗೆ ತಲುಪುತ್ತದೆ.
ಬೈಪೋಲರ್ II ಡಿಸಾರ್ಡರ್: ಇದು ಬೈಪೋಲಾರ್ ಡಿಸಾರ್ಡರ್‌ಗಳ ಎರಡನೇ ಹಂತವಾಗಿದೆ. ಇದನ್ನು ಹೈಪೋಮ್ಯಾನಿಕ್ ಸ್ಥಿತಿಗಳು ಎಂದು ಕರೆಯಲಾಗುತ್ತದೆ.
ಸೈಕ್ಲೋಥೈಮಿಕ್ ಡಿಸಾರ್ಡರ್: ದೀರ್ಘಕಾಲದ ಮೂಡ್ ಸ್ವಿಂಗ್ಗಳನ್ನು ಹೊಂದಿರುತ್ತದೆ. ಬೈಪೋಲಾರ್ I ಅಥವಾ II ಅಸ್ವಸ್ಥತೆಯಲ್ಲಿ ಅನುಭವಿಸಿದಷ್ಟು ದೀರ್ಘ, ತೀವ್ರ ಲಕ್ಷಣಗಳು ಕಂಡುಬುರುವುದಿಲ್ಲ.
ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾ ಎಂದೇ ಆತಂಕ ಸೃಷ್ಟಿಸಿರುವ ನೇಗ್ಲೇರಿಯಾ ಫೌಲೆರಿ ಸೋಂಕು ಎಂದರೇನು?
ನಿದ್ರಾಹೀನತೆ ಅಥವಾ ಚಡಪಡಿಕೆ, ವೇಗವಾಗಿ ಮಾತನಾಡುವುದು ಅಥವಾ ಅಸಾಮಾನ್ಯವಾಗಿ ಮಾತನಾಡುವುದು, ಗೊಂದಲದ ಆಲೋಚನೆಗಳನ್ನು ಹೊಂದಿರುವುದು, ಕಿರಿಕಿರಿಯ ಅನುಭವ, ದು:ಖ,ಚಟುವಟಿಕೆಗಳಲ್ಲಿ ಆಸಕ್ತಿಯ ಕೊರತೆ, ಅಥವಾ ಆಸಕ್ತಿ ಇಲ್ಲದಿರುವುದು, ಸಾವು ಅಥವಾ ಆತ್ಮಹತ್ಯೆಯ ಆಲೋಚನೆಗಳು ಮುಂತಾದ ಲಕ್ಷಣಗಳನ್ನು ಕಂಡುಬರುತ್ತದೆ.
ಮಾನಸಿಕ ಚಿಕಿತ್ಸೆ:
ಮನೋತಜ್ಞರ ಮೂಲಕ ಥೆರಪಿ ಸಹಾಯದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ದೀರ್ಘಕಾಲೀನ, ನಿರಂತರ ಚಿಕಿತ್ಸೆಯಿಂದ ಬೈಪೋಲಾರ್ ಡಿಸಾರ್ಡರ್ ಕಡಿಮೆಯಾಗುತ್ತಾ ಹೋಗುತ್ತದೆ.
ಯೋಗಾಭ್ಯಾಸ:
ಬೈಪೋಲರ್ ಡಿಸಾರ್ಡರ್ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದಿಷ್ಟು ಕಾಲ ಯೋಗಾಭ್ಯಾಸಕ್ಕಾಗಿ ಮೀಸಲಿಡಿ. ಯೋಗಾಭ್ಯಾಸದಿಂದ ಮಾನಸಿಕವಾಗಿ ಆರೋಗ್ಯವನ್ನು ಕಂಡುಕೊಳ್ಳಬಹುದಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:59 pm, Thu, 29 December 22