Child Health: ನಿಮ್ಮ ಮಕ್ಕಳು ಅಸಭ್ಯವಾಗಿ ವರ್ತಿಸಿದ್ರೆ ಗದರಬೇಡಿ, ತಿಳಿಹೇಳಿ! ಇಲ್ಲವಾದ್ರೆ ಪರಿಣಾಮ ತಪ್ಪಿದಲ್ಲ

ಬೇರೆಯವರ ಎದುರು ನಿಮ್ಮ ಮಕ್ಕಳನ್ನು ಗದರುವುದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

Child Health: ನಿಮ್ಮ ಮಕ್ಕಳು ಅಸಭ್ಯವಾಗಿ ವರ್ತಿಸಿದ್ರೆ ಗದರಬೇಡಿ, ತಿಳಿಹೇಳಿ! ಇಲ್ಲವಾದ್ರೆ ಪರಿಣಾಮ ತಪ್ಪಿದಲ್ಲ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2022 | 8:49 PM

ಮಕ್ಕಳು ಸಾಮಾನ್ಯವಾಗಿ ಕಿಡಿಗೇಡಿಗಳು, ಅದಕ್ಕೆ ಅವರನ್ನು ಮಕ್ಕಳು (Child) ಎನ್ನುವುದು. ಚೇಷ್ಟೆ ಇಲ್ಲದ ಬಾಲ್ಯವಿಲ್ಲ. ನಾವೆಲ್ಲರೂ ಆ ಹಂತವನ್ನು ದಾಟಿದ್ದೇವೆ. ಈಗ ಅವರಿಗೆ ಮಾಡಬೇಡಿ ಎಂದು ಹೇಳಿದರೆ ಅವರು ಖಂಡಿತವಾಗಿಯೂ ಕೇಳಲ್ಲ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಎಷ್ಟು ಗಲಾಟೆಯಾಗುತ್ತದೆ ಎಂಬುದನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಇದು ಕೆಲವೊಮ್ಮೆ ಸಂತಸ ಉಂಟು ಮಾಡಿದರೆ, ಇನ್ನು ಕೆಲವೊಮ್ಮೆ ಉತ್ತಮ ಅನುಭವವನ್ನು ನೀಡುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಮಕ್ಕಳು ಮಾಡುವ ಕಿಡಿಗೇಡಿತನ ಗಂಭೀರವಾಗುತ್ತದೆ. ಇದರಿಂದ ಪೋಷಕರು ಅವರ ಮೇಲೆ ಕೋಪ ತೋರಿಸುತ್ತಾರೆ. ತ್ರಾಸದಾಯಕ ಮತ್ತು ಚೇಷ್ಟೆಯ ಮಕ್ಕಳೊಂದಿಗೆ ವ್ಯವಹರಿಸುವಾಗ ಪೋಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಅವರು ತಮ್ಮ ಸ್ನೇಹಿತರು ಅಥವಾ ಸಹಪಾಠಿಗಳ ಮುಂದೆ ಮಕ್ಕಳ ಮೇಲೆ ಕೋಪವನ್ನು ತೋರಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞರು.

ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆತಂಕವಿದೆ. ಇತರರ ಮುಂದೆ ಮಕ್ಕಳನ್ನು ಬೈಯುವುದು ಅನೇಕ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆಗಳು ಪ್ರೌಢಾವಸ್ಥೆಯವರೆಗೂ ಅವರನ್ನು ಬಾಧಿಸುತ್ತಲೇ ಇರುತ್ತವೆ. 13 ವರ್ಷ ವಯಸ್ಸಿನ ಮಕ್ಕಳ ವರ್ತನೆ ಮೇಲೆ ಅಧ್ಯಯನವನ್ನು ನಡೆಸಿದ್ದು, ಅವರ ಪೋಷಕರು ಬೈಯುತ್ತಿದ್ದು, ಈ ಅಧ್ಯಯನವು ಮಕ್ಕಳಲ್ಲಿ ಖಿನ್ನತೆಯ ಲಕ್ಷಣಗಳು ಕಂಡುಬಂದಿವೆ ಎನ್ನಲಾಗುತ್ತಿದೆ.

ಮಕ್ಕಳನ್ನು ಬೈಯುವುದರಿಂದ ಸಂಧಿವಾತ, ತಲೆನೋವು, ಬೆನ್ನು ಮತ್ತು ಕತ್ತಿನ ಸಮಸ್ಯೆಗಳಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಅಧ್ಯಯನದಿಂದ ದೃಢಪಟ್ಟಿದೆ. ಈ ಅಧ್ಯಯನದ ಪ್ರಕಾರ ಪ್ರತಿಕೂಲ ಬಾಲ್ಯದ ಅನುಭವಗಳು ಆಘಾತಕಾರಿ ವೈದ್ಯಕೀಯ ಪರಿಸ್ಥಿತಿಗಳಿಗೆ ನಿಕಟ ಸಂಬಂಧ ಹೊಂದಿವೆ. ಆಘಾತಕಾರಿ ಬಾಲ್ಯದ ಅನುಭವಗಳು ಖಿನ್ನತೆ, ಬೈಪೋಲಾರ್ ಡಿಸಾರ್ಡರ್ ಮತ್ತು ಒತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಗದರಿಸುವಿಕೆ ಮತ್ತು ಇತರ ಕಠಿಣ ಶಿಕ್ಷೆಯು ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ.

13 ವರ್ಷ ವಯಸ್ಸಿನ ಮಕ್ಕಳು ತಮ್ಮ ಹೆತ್ತವರೊಂದಿಗೆ ಕೋಪಗೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಈ ಕಠಿಣ ನಡವಳಿಕೆಯು ಮಕ್ಕಳಿಗೆ ಶಿಸ್ತನ್ನು ಕಲಿಸುತ್ತದೆ ಎಂದು ಕೆಲವರು ನಂಬುತ್ತಾರೆ. ಆದರೆ ಇದಕ್ಕೆ ವಿರುದ್ಧವಾಗಿ ಇದು ಅವರ ನಡವಳಿಕೆಯಲ್ಲಿ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನೆನಪಿನಲ್ಲಿಡಬೇಕು. ಆದುದರಿಂದಲೇ ಮಕ್ಕಳಿಗೆ ಚಿಕ್ಕಂದಿನಿಂದಲೇ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಕಲಿಸುವ ಜವಾಬ್ದಾರಿ ಪೋಷಕರ ಮೇಲಿದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.