ಓಟ್ಸ್​ ಪಡ್ಡು: ಮಾಡುವುದು ಸುಲಭ, ತಿನ್ನಲು ಬಲು ರುಚಿ, ಇಲ್ಲಿದೆ ವಿಧಾನ

ನಿತ್ಯ ಇಂದು ಏನು ತಿಂಡಿ ಮಾಡುವುದು ಎಂದು ತಲೆ ಕೆಡಿಸಿಕೊಳ್ಳುತ್ತೀರಿ ಅಲ್ಲವೇ? ವಾರದಲ್ಲಿ ಒಂದು ದಿನ ಓಟ್ಸ್​ ಪಡ್ಡು ಮಾಡಿ, ವಿಧಾನವವನ್ನು ನಾವಿಲ್ಲಿ ತಿಳಿಸಿಕೊಡುತ್ತೇವೆ.

ಓಟ್ಸ್​ ಪಡ್ಡು: ಮಾಡುವುದು ಸುಲಭ, ತಿನ್ನಲು ಬಲು ರುಚಿ, ಇಲ್ಲಿದೆ ವಿಧಾನ
Oats AppeImage Credit source: Cookpad.com
Follow us
TV9 Web
| Updated By: ನಯನಾ ರಾಜೀವ್

Updated on: Oct 22, 2022 | 8:00 AM

ನಿತ್ಯ ಇಂದು ಏನು ತಿಂಡಿ ಮಾಡುವುದು ಎಂದು ತಲೆ ಕೆಡಿಸಿಕೊಳ್ಳುತ್ತೀರಿ ಅಲ್ಲವೇ? ವಾರದಲ್ಲಿ ಒಂದು ದಿನ ಓಟ್ಸ್​ ಪಡ್ಡು ಮಾಡಿ, ವಿಧಾನವವನ್ನು ನಾವಿಲ್ಲಿ ತಿಳಿಸಿಕೊಡುತ್ತೇವೆ. ನೀವು ಚಹಾದೊಂದಿಗೆ ಬಿಸ್ಕತ್ತು ಮತ್ತು ಬ್ರೆಡ್​ ಹಾಗೆಯೇ ಇನ್ನೇನೋ ತಿನ್ನುವ ಮೂಲಕ ನಿಮ್ಮ ಉಪಹಾರವನ್ನು ಪೂರ್ಣಗೊಳಿಸುತ್ತೀರಿ.

ಇದರ ಹಿಂದಿನ ದೊಡ್ಡ ಕಾರಣವೆಂದರೆ ಹೆಚ್ಚಿನ ಜನರು ಬೆಳಿಗ್ಗೆ ಎದ್ದ ತಕ್ಷಣ ತಿಂಡಿ ತಿನ್ನುವ ಬದಲು ಕೆಲಸದಲ್ಲಿ ನಿರತರಾಗಿರುತ್ತೀರಿ. ನೀವು ಸಹ ಅದೇ ರೀತಿ ಮಾಡುತ್ತಿದ್ದರೆ, ನೀವು ಬಿಸ್ಕತ್ತು, ಬ್ರೆಡ್ ಜಾಮ್ ಸೇರಿದಂತೆ ಇತರೆ ಅನಾರೋಗ್ಯಕರ ಆಹಾರವನ್ನು ಸೇವಿಸುವುದರ ಬದಲು ಓಟ್ಸ್​ ಪಡ್ಡನ್ನು ತಿನ್ನಬಹುದು.

ಉತ್ತಮ ಭಾಗವೆಂದರೆ ಅವು ಆರೋಗ್ಯಕರವಾಗಿರುವುದರ ಜೊತೆಗೆ ರುಚಿಕರವೂ ಆಗಿರುತ್ತವೆ. ಈ ಉಪಹಾರವನ್ನು ನೀವು ಚಹಾ ಮತ್ತು ಕಾಫಿಯೊಂದಿಗೆ ಸುಲಭವಾಗಿ ತಿನ್ನಬಹುದು. ಮಕ್ಕಳು ಕೂಡ ಈ ರೆಸಿಪಿಯನ್ನು ಇಷ್ಟಪಡುತ್ತಾರೆ. ಬನ್ನಿ ವಿಧಾನದ ಬಗ್ಗೆ ತಿಳಿಯೋಣ.

ಓಟ್ಸ್ ಪಡ್ಡು ಓಟ್ಸ್ ಪೌಡರ್ ಉದ್ದಿನ ಬೇಳೆ ಕೆಂಪು ಮೆಣಸಿನ ಪೌಡರ್ ಉಪ್ಪು ಕಪ್ಪು ಮೆಣಸು ಈರುಳ್ಳಿ ಕ್ಯಾರೆಟ್ ಡೊಳ್ಳು ಮೆಣಸು ತುಪ್ಪ / ಎಣ್ಣೆ

ಓಟ್ಸ್​ ಪಡ್ಡು ಮಾಡುವ ವಿಧಾನ ಮೊದಲನೆಯದಾಗಿ ನೆನೆಸಿದ ಉದ್ದಿನಬೇಳೆಯನ್ನು ತೆಗೆದುಕೊಂಡು ನಯವಾದ ತನಕ ರುಬ್ಬಿಕೊಳ್ಳಿ. ಅದಕ್ಕೆ ಓಟ್ಸ್ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಕರಿಮೆಣಸು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ.

ಅದನ್ನು ಬೆರೆಸಿದ ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಸೇರಿಸಿ. ನಂತರ ಪಡ್ಡು ಕಾವಲಿಯನ್ನು ತೆಗೆದುಕೊಂಡು ಅದರಲ್ಲಿ ಈ ಹಿಟ್ಟಿನ ಮಿಶ್ರಣ ಹಾಕಿ, ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಾಗ, ಅದನ್ನು ಹೊರತೆಗೆಯಿರಿ. ಇದಕ್ಕೆ ನಿಮ್ಮ ಆಯ್ಕೆಯ ಕೆಲವು ತರಕಾರಿಗಳನ್ನು ಕೂಡ ಸೇರಿಸಬಹುದು. ಈಗ ಬಿಸಿ ಬಿಸಿ ಓಟ್ಸ್​ ಪಡ್ಡು ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ