ಕಪ್ಪು ಜೀರಿಗೆಯಲ್ಲಿದೆ ದೇಹದ ಅತಿಯಾದ ತೂಕ ಇಳಿಸುವ ತಾಕತ್ತು

| Updated By: Pavitra Bhat Jigalemane

Updated on: Feb 08, 2022 | 11:17 AM

ಪ್ರತಿದಿನ ಕಪ್ಪು ಜೀರಿಗೆ ಅಥವಾ ಕಪ್ಪು ಜೀರಿಗೆಯ ಪುಡಿಯನ್ನು ಕಾಲು ಚಮಚ ಸೇವಿಸುವುದರಿಂದ ಕ್ರಮೇಣ ದೇಹದ ತೂಕ ಇಳಿಕೆಯಾಗುತ್ತದೆ ಎನ್ನುತ್ತಾರೆ ಡಾ ಮೈಕೆಲ್ ಗ್ರೆಗರ್

ಕಪ್ಪು ಜೀರಿಗೆಯಲ್ಲಿದೆ ದೇಹದ ಅತಿಯಾದ ತೂಕ ಇಳಿಸುವ ತಾಕತ್ತು
ಕಪ್ಪು ಜೀರಿಗೆ
Follow us on

ದೇಹದ ಅತಿಯಾದ ತೂಕ ಇಳಿಕೆಗೆ (Weight Loss) ಮಾಡುವ ಕಸರತ್ತುಗಳು ಒಂದೆರಡಲ್ಲ. ಸುಲಭದ ವಿಧಾನಗಳನ್ನು ಅನುಸರಿಸಿ ದೇಹಕ್ಕೆ ಸುಸ್ತು ಅಥವಾ ಇನ್ನಿತರ ತೊಂದರೆ ಆಗದಂತಹ ಪದಾರ್ಥಗಳನ್ನು ಬಳಸಿ ತೂಕ ಇಳಿಸಿಕೊಳ್ಳಬಹುದು. ಇದಕ್ಕೆ ಭಾರತೀಯ ಮಸಾಲೆಯ ಕೆಲವು ಪದಾರ್ಥಗಳು ಸಹಾಯಕವಾಗಿದೆ.  ಅದರಲ್ಲಿ ಕಪ್ಪು ಜೀರಿಗೆ (Black Cumin) ಅಥವಾ ಕಾಲಾಜೀರಾ ಕೂಡ ಒಂದು. ದಿನನಿತ್ಯ ಅಡುಗೆಯಲ್ಲಿ ಬಳಸುವ ಕಪ್ಪು ಜೀರಿಗೆ ಊಹೆಗೂ ನಿಲುಕದಷ್ಟು ಆರೋಗ್ಯದ ಗುಣಗಳನ್ನು ಹೊಂದಿದೆ. ಅಡುಗೆ ವಿಶೇಷ ಘಮ ನೀಡಿ, ರುಚಿಯನ್ನು ಹೆಚ್ಚಿಸುವ ಈ ಕಪ್ಪು ಜೀರಿಗೆ ನಾರು, ಕಬ್ಬಿಣಾಂಶ, ಪ್ರೋಟೀನ್​ ಗುಣಗಳನ್ನು ಹೊಂದಿದೆ. ಅನಾದಿ ಕಾಲದಿಂದಲೂ ಇದನ್ನು ಔಷಧೀಯ ಗುಣಗಳುಳ್ಳ ಪದಾರ್ಥ ಎಂದ ಗುರುತಿಸಲಾಗಿದೆ. ಇದೀಗ ಸಂಪೂರ್ಣ ಸಸ್ಯಾಧಾರಿತ ಆಹಾರಗಳ ಬಗೆಗೆ ಹೇಳುವ ವಕೀಲರಾದ ಡಾ ಮೈಕೆಲ್ ಗ್ರೆಗರ್ (Dr Michael Grege) ಕಪ್ಪು ಜೀರಿಗೆ ದೇಹದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್​ ಇಳಿಕೆಗೆ ನೆರವಾಗುತ್ತದೆ ಎಂದಿದ್ದಾರೆ. ಈ ಕುರಿತು ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ವರದಿ ಮಾಡಿದೆ.

ಕಪ್ಪು ಜೀರಿಗೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವು ಕಡಿಮೆಯಾಗಿ ರಕ್ತದೊತ್ತಡದಂತಹ ಸಮಸ್ಯೆಗಳೂ ಕೂಡ ನಿವಾರಣೆಯಾಗುತ್ತವೆ. ಅಲ್ಲದೆ ಕಪ್ಪು ಜಿರಿಗೆಯ ಸೇವನೆಯಿಂದ ಅಸ್ತಮಾ, ಟ್ರೈಗ್ಲಿಸರೈಡ್ಗಳು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ದಿನನಿತ್ಯ ಬಳಸುವ ಕಪ್ಪು ಜೀರಿಗೆ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.

ಬಳಕೆ ಹೇಗೆ?:
ಪ್ರತಿದಿನ ಕಪ್ಪು ಜೀರಿಗೆ ಅಥವಾ ಕಪ್ಪು ಜೀರಿಗೆಯ ಪುಡಿಯನ್ನು ಕಾಲು ಚಮಚ ಸೇವಿಸುವುದರಿಂದ ಕ್ರಮೇಣ ದೇಹದ ತೂಕ ಇಳಿಕೆಯಾಗುತ್ತದೆ ಎನ್ನುವ ಡಾ ಮೈಕೆಲ್ ಗ್ರೆಗರ್, ತನ್ನ ಕುಟುಂಬದಲ್ಲಿ ಕಪ್ಪು ಜೀರಿಗೆಯ ಬಳಕೆ ಸದಾ ಇರುತ್ತದೆ. ಹೃದಾಯಾಘಾತದಿಂದ ಚೇತರಿಕೆ ಕಂಡ ಬಳಿಕ  ಮನೆಗೆ ಬಂದ ವ್ಯಕ್ತಿಗೂ  ಕಪ್ಪು ಜೀರಿಗೆಯಂತಹ ಮನೆಮದ್ದುಗಳು ಆರೋಗ್ಯವನ್ನು ಸುಧಾರಿಸಿದ ಉದಾಹರಣೆಗಳಿವೆ ಎಂದಿದ್ದಾರೆ. ಇನ್ನು ಮಹಿಳೆಯರ ಋತುಚಕ್ರದ ಸಮಯದಲ್ಲಿಯೂ ಕಪ್ಪು ಜೀರಿಗೆಯನ್ನು ಕಾಲು ಚಮಚ ಸೇವಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ.

ಕಪ್ಪು ಜೀರಿಗೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​ಗಳನ್ನು ಕಡಿಮೆ ಮಾಡಿ, ಆರೋಗ್ಯಕರ ಕೊಬ್ಬಿನಾಮ್ಲಗಳನ್ನು ದೇಹ ಸೇರುವಂತೆ ಮಾಡುತ್ತದೆ. ಇದು ಕೆಲವು ತಿಂಗಳ ನಿರಂತರ ಬಳಕೆಯ ನಂತರ ಪರಿಣಾಮ ಬೀರುತ್ತದೆ. ಅಲ್ಲದೆ ಚರ್ಮದ ಆರೋಗ್ಯ, ಕೂದಲು ಅಷ್ಟೇ ಏಕೆ ಹಲ್ಲು ನೋವಿನ ಸಮಸ್ಯೆಗೂ ಪರಿಹಾರ ನೀಡುತ್ತದೆ ಎಂದು ಹೇಳಲಾಗಿದೆ.

(ಇಲ್ಲಿರುವ ಮಾಹಿತಿಯು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಡಾ ಮೈಕೆಲ್ ಗ್ರೆಗರ್ ಅವರ ಸಲಹೆಯನ್ನು ಆಧರಿಸಿ ಟೈಮ್ಸ್​ ನೌನ ವರದಿಯನ್ನು ಆಧರಿಸಿದೆ)

ಇದನ್ನೂ ಓದಿ:

Papaya side effects: ಪಪ್ಪಾಯಿ ಹಣ್ಣು ಇಷ್ಟಪಡುವವರಿಗೆ ಶಾಕ್; ಇದರ ಅಡ್ಡಪರಿಣಾಮಗಳು ನಿಮ್ಮನ್ನು ಬಾಧಿಸುತ್ತದೆ