AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Papaya side effects: ಪಪ್ಪಾಯಿ ಹಣ್ಣು ಇಷ್ಟಪಡುವವರಿಗೆ ಶಾಕ್; ಇದರ ಅಡ್ಡಪರಿಣಾಮಗಳು ನಿಮ್ಮನ್ನು ಬಾಧಿಸುತ್ತದೆ

Health Tips: ಪಪ್ಪಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಪಪ್ಪಾಯಿ ಸೇವನೆಯಿಂದ ಅನೇಕ ಅಡ್ಡಪರಿಣಾಮಗಳಿವೆ.

Papaya side effects: ಪಪ್ಪಾಯಿ ಹಣ್ಣು ಇಷ್ಟಪಡುವವರಿಗೆ ಶಾಕ್; ಇದರ ಅಡ್ಡಪರಿಣಾಮಗಳು ನಿಮ್ಮನ್ನು ಬಾಧಿಸುತ್ತದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 08, 2022 | 8:10 AM

Share

ಪಪ್ಪಾಯಿ ಹಣ್ಣನ್ನು ಹೆಚ್ಚಿನವರು ತಿನ್ನಲು ಇಷ್ಟಪಡುತ್ತಾರೆ. ಪೋಷಕಾಂಶಗಳಿಂದ ಕೂಡಿದ ಪಪ್ಪಾಯಿ(Papaya) ಕಡಿಮೆ ಕ್ಯಾಲೋರಿ ಹಣ್ಣು. ಇದನ್ನು ಆಹಾರದ(Food) ಭಾಗವಾಗಿ ಮಾಡಲು ವೈದ್ಯರು ಶಿಫಾರಸು ಮಾಡುತ್ತಾರೆ. ನಿಮಗೆ ಅಕಾಲಿಕ ಹಸಿವಿನ ಭಾವನೆ ಇದ್ದರೆ, ನೀವು ಪಪ್ಪಾಯಿಯನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಹೃದ್ರೋಗ, ಮಧುಮೇಹ, ಕ್ಯಾನ್ಸರ್(Cancer) ಮತ್ತು ಕಡಿಮೆ ಒತ್ತಡದಂತಹ ಗಂಭೀರ ಸಮಸ್ಯೆಗಳು ದೇಹದಿಂದ ದೂರ ಉಳಿಯುತ್ತವೆ. ಪಪ್ಪಾಯಿಯಲ್ಲಿ ಫೈಬರ್, ಕ್ಯಾರೋಟಿನ್, ವಿಟಮಿನ್ ಸಿ, ಇ, ಎ ಮತ್ತು ಇತರ ಅನೇಕ ಖನಿಜಗಳಿವೆ. ಇದು ದೇಹವನ್ನು ಆರೋಗ್ಯಕರವಾಗಿಡಲು ಬಹಳ ಮುಖ್ಯವಾಗಿದೆ. ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಹಾಗೆಯೇ ವಿಟಮಿನ್ ಎ ಕೂಡ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಪಪ್ಪಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಪಪ್ಪಾಯಿ ಸೇವನೆಯಿಂದ ಅನೇಕ ಅಡ್ಡಪರಿಣಾಮಗಳಿವೆ. ಈ ಕಾರಣದಿಂದಾಗಿ ಕಾಯಿಲೆಗೆ ತುತ್ತಾಗಿರುವವರು ಪಪ್ಪಾಯಿಯನ್ನು ಸೇವಿಸಬಾರದು. ಅಂತಹ ಕಾಯಿಲೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕಾಮಾಲೆ

ಜಾಂಡೀಸ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪಾಗಿಯೂ ಪಪ್ಪಾಯಿಯನ್ನು ತಿನ್ನಬಾರದು ಎಂಬುವುದು ತಜ್ಞರ ಅಭಿಪ್ರಾಯ. ಪಪ್ಪಾಯಿಯಲ್ಲಿರುವ ಪಪೈನ್ ಮತ್ತು ಬೀಟಾ ಕ್ಯಾರೋಟಿನ್ ಜಾಂಡೀಸ್ ಕಾಯಿಲೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅದಗ್ಯೂ ವ್ಯಕ್ತಿಯು ಪಪ್ಪಾಯಿಯನ್ನು ಸೇವಿಸಲು ಬಯಸಿದರೆ, ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು.

ಜೀರ್ಣಕ್ರಿಯೆ

ಮಿತಿಗಿಂತ ಹೆಚ್ಚಿನದನ್ನು ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಅಂತೆಯೇ ಪಪ್ಪಾಯಿ ಕೂಡ. ನೀವು ಪಪ್ಪಾಯಿಯನ್ನು ಅತಿಯಾಗಿ ಸೇವಿಸಿದರೆ ಜೀರ್ಣಕ್ರಿಯೆಯು ಕೆಟ್ಟದಾಗಬಹುದು. ವಾಸ್ತವವಾಗಿ, ಪಪ್ಪಾಯಿಯಲ್ಲಿರುವ ಫೈಬರ್ ದೇಹಕ್ಕೆ ಅಧಿಕವಾಗಿ ಹೋದರೆ, ಅದು ಹೊಟ್ಟೆ ನೋವು, ಉರಿ ಮತ್ತು ಗ್ಯಾಸ್ ಸಮಸ್ಯೆಗಳಿಗೆ ಕಾರಣವಾಗಬಹುದು. ಪಪ್ಪಾಯಿಯಿಂದ ಮಲಬದ್ಧತೆಯನ್ನು ಹೋಗಲಾಡಿಸಬಹುದು. ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಅತಿಸಾರವೂ ಉಂಟಾಗುತ್ತದೆ.

ಬಿಪಿ

ಬಿಪಿ ಸಮಸ್ಯೆ ಇರುವವರು ಕೂಡ ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ತಜ್ಞರ ಪ್ರಕಾರ, ಪಪ್ಪಾಯಿಯನ್ನು ಅತಿಯಾಗಿ ತಿನ್ನುವುದರಿಂದ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಆದರೆ ಬಿಪಿ ಇರುವ ವ್ಯಕ್ತಿಯು ಪಪ್ಪಾಯಿಯನ್ನು ಸೇವಿಸಲು ಬಯಸಿದರೆ ಅದಕ್ಕೂ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು.

ಚರ್ಮದ ಅಲರ್ಜಿಗಳು

ನೀವು ದೀರ್ಘಕಾಲದವರೆಗೆ ಚರ್ಮದ ಅಲರ್ಜಿಯನ್ನು ಎದುರಿಸುತ್ತಿದ್ದರೆ, ಪಪ್ಪಾಯಿ ತಿನ್ನುವುದು ನಿಮಗೆ ಹಾನಿಕಾರಕವೆಂದು ತಿಳಿಸಲಾಗಿದೆ. ಪಪ್ಪಾಯಿ ತಿನ್ನುವುದರಿಂದ ತ್ವಚೆಯಲ್ಲಿ ಅಲರ್ಜಿ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಇದು ಚರ್ಮದ ಮೇಲೆ ದದ್ದುಗಳು ಅಥವಾ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಕಲ್ಲು

ಹೊಟ್ಟೆಯಲ್ಲಿ ಕಲ್ಲುಗಳ ಸಮಸ್ಯೆ ಇರುವವರು ಪಪ್ಪಾಯಿಯನ್ನು ಕಡಿಮೆ ಸೇವಿಸಬೇಕು ಎಂದು ಹೇಳಲಾಗುತ್ತದೆ. ತಜ್ಞರ ಪ್ರಕಾರ, ಇದು ಕಲ್ಲಿನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಅಷ್ಟೇ ಅಲ್ಲ, ಪಪ್ಪಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಒಣ ನೆಲ್ಲಿಕಾಯಿ ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ನೀವು ತಿಳಿಯಲೇಬೇಕು

ಪ್ರತಿದಿನ ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಆರೋಗ್ಯದಲ್ಲಿನ ಈ ಬದಲಾವಣೆ ನಿಮ್ಮನ್ನು ಬಾಧಿಸುತ್ತದೆ ಎಚ್ಚರ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು