Health Tips: ನಾಲಿಗೆ ಬಣ್ಣ ಬದಲಾಯಿಸಿದ್ದರೆ ಎಚ್ಚರಿಕೆ; ಅನಾರೋಗ್ಯದ ಮುನ್ಸೂಚನೆಯಿರಬಹುದು
ನಿಮ್ಮ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯಾಗುತ್ತಿದೆ ಎಂದು ನಿಮ್ಮ ಕಡು ಕಪ್ಪು ಬಣ್ಣದ ನಾಲಿಗೆ ತಿಳಿಸುತ್ತದೆ. ಹೀಗಾಗಿ ನಿಮ್ಮ ನಾಲಿಗೆಯ ಬಗ್ಗೆ ಎಚ್ಚರವಹಿಸಿ.
ದೇಹದ ಪ್ರತಿಯೊಂದು ಭಾಗವೂ ಒಂದೊಂದು ವೈಶಿಷ್ಟ್ಯತೆಯಿಂದ ಕೂಡಿದೆ. ಆಂತರಿಕವಾಗಿ ಆಗುವ ಅನಾರೋಗ್ಯದ ಸೂಚನೆಯನ್ನು ನೀಡುತ್ತದೆ. ಅದರಲ್ಲಿ ನಾಲಿಗೆ (Tongue) ಕೂಡ ಒಂದು. ವಿವಿಧ ರೀತಿಯ ತಿನಿಸುಗಳ ರುಚಿಯನ್ನು ತಿಳಿಸುವ ಅಂಗ ನಾಲಿಗೆ ಬಣ್ಣ (Tongue colour) ಬದಲಾಯಿಸಿದರೆ ನಿಮ್ಮ ಆರೋಗ್ಯ (Health) ಕೆಟ್ಟಿದೆ ಎಂದರ್ಥ. ಹೀಗಾಗಿಯೇ ಆಸ್ಪತ್ರೆಗೆ ಹೋದ ವೇಳೆ ವೈದ್ಯರು ಮೊದಲು ನೋಡುವುದು ನಿಮ್ಮ ನಾಲಿಗೆಯನ್ನು. ದೇಹದ ಸಂಪೂರ್ಣ ಸ್ಥಿತಿಯನ್ನು ಕಣ್ಣು ಮತ್ತು ನಾಲಿಗೆ ತಿಳಿಸುತ್ತದೆ. ದೇಹದಲ್ಲಿನ ರಕ್ತದ ಪ್ರಮಾಣವನ್ನು ಕಣ್ಣು ತಿಳಿಸಿದರೆ, ನಾಲಿಗೆ ಆಂತರಿಕ ರೋಗದ ಬಗ್ಗೆ ತಿಳಿಸುತ್ತದೆ. ರುಚಿ ತಿಳಿಸುವ ನಾಲಿಗೆ ನಿಮ್ಮ ದೇಹಕ್ಕೆ ಹೊಕ್ಕಿದ ರೋಗ ಲಕ್ಷಣಗಳ ಬಗ್ಗೆಯೂ ತಿಳಿಸುತ್ತದೆ. ಹಾಗಾದರೆ ನಿಮ್ಮ ನಾಲಿಗೆ ಯಾವ ಯಾವ ಬಣ್ಣಕ್ಕೆ ತಿರುಗಿದರೆ ಯಾವ ಅರ್ಥ ನೀಡುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಕಡು ಕಪ್ಪು ಬಣ್ಣ: ನಿಮ್ಮ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯಾಗುತ್ತಿದೆ ಎಂದು ನಿಮ್ಮ ಕಡು ಕಪ್ಪು ಬಣ್ಣದ ನಾಲಿಗೆ ತಿಳಿಸುತ್ತದೆ. ಹೀಗಾಗಿ ನಿಮ್ಮ ನಾಲಿಗೆಯ ಬಗ್ಗೆ ಎಚ್ಚರವಹಿಸಿ. ಸ್ವಲ್ಪ ಬಣ್ಣ ಬದಲಾದಂತೆ ಕಂಡರೂ ವೈದ್ಯರನ್ನು ಸಂಪರ್ಕಿಸಿ.
ಬಿಳಿಯ ನಾಲಿಗೆ: ಸಾಮಾನ್ಯವಾಗಿ ದೇಹ ನಿರ್ಜಲೀಕರಣಗೊಂಡರೆ ನಾಲಿಗೆ ಬಿಳಿಯಾಗುತ್ತದೆ. ಚೀಸ್ ಅನ್ನು ಸೇವಿಸಿದರೆ ಕೂಢ ನಾಲಿಗೆ ಬಿಳಿಯಾಗುವ ಸಾಧ್ಯತೆ ಇರುತ್ತದೆ. ಅದನ್ನು ಹೊರತುಪಡಿಸಿ ಮುಖ್ಯವಾಗಿ ಬಳಿಯ ನಾಲಿಗೆ ಫ್ಲೂ ರೋಗದ ಲಕ್ಷಣವಾಗಿದೆ. ಹೀಗಾಗಿ ನಾಲಿಗೆ ಕಾರಣವಿಲ್ಲದೆ ಬಿಳಿಯಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಹಳದಿ ನಾಲಿಗೆ: ಹೊಟ್ಟೆ ಅಥವಾ ಲಿವರ್ ಸಮಸ್ಯೆಗಳಿದ್ದಾಗ ನಾಳಿಗೆ ಹಳದಿಯಾಗುತ್ತದೆ. ನಿಮಗೆ ಅಜೀರ್ಣವಾದರೂ ಕೆಲವೊಮ್ಮೆ ನಾಲಿಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಎಚ್ಚರಿವಹಿಸಿರಿ.
ನೀಲಿ ಬಣ್ಣ: ಆಕಸ್ಮಾತ್ ನಿಮ್ಮ ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿದರೆ ದೇಹಕ್ಕೆ ವಿಷದ ಅಂಶ ಸೇರಿಕೊಂಡಿದೆ ಎಂದರ್ಥ. ಅಥವಾ ದೇಹಕ್ಕೆ ಆಮ್ಲಜನಕದ ಕೊರತೆಯುಂಟಾಗಿದೆ ಎನ್ನುವುದನ್ನು ಸೂಚಿಸುತ್ತದೆ.
ಕೆಂಪು ನಾಲಿಗೆ: ದೇಹದಲ್ಲಿ ಪೊಲಿಕ್ ಆಸಿಡ್ ಅಥವಾ ವಿಟಮಿನ್ ಬಿ12ನ ಕೊರತೆಯಿಂದಾಗಿ ನಾಲಿಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೆ ಈ ರೀತಿಯ ನಾಲಿಗೆಯ ಮೇಲೆ ಸಣ್ಣ ಗೆರೆಗಳು ಮೂಡಿರುವುದನ್ನು ಕಾಣಬಹುದು. ಇದು ನಿಮ್ಮ ದೇಹದಲ್ಲಿ ಅನಾರೋಗ್ಯದ ಮುನ್ಸೂಚನೆ ನೀಡಿದೆ ಎಂದರ್ಥ.
ನೇರಳೆ ಬಣ್ಣ: ವಿಟಮಿನ್ 12 ಕೊರತೆಯಿಂದ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದು ಕೂಡ ನಿಮ್ಮ ದೇಹದಲ್ಲಿ ಅನಾರೋಗ್ಯವನ್ನು ಸೂಚಿಸುತ್ತದೆ. ಹೀಗಾಗಿ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗಿದರೆ ಕಡೆಗಣಿಸುವಂತಿಲ್ಲ.
ಇದನ್ನೂ ಓದಿ:
ಪಾಪ್ಕಾರ್ನ್ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ
Published On - 4:39 pm, Sun, 6 February 22