AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಲು ಕಾಳು ಮೆಣಸು ಸೇವಿಸಿ

ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳವನ್ನು ಕರಿಮೆಣಸಿನ ಸಹಾಯದಿಂದ ನಿಯಂತ್ರಿಸಬಹುದು. ಕಾಳು ಮೆಣಸನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಇನ್ನೂ ಸಾಕಷ್ಟು ಪ್ರಯೋಜನಗಳಿವೆ. ಕಾಳು ಮೆಣಸನ್ನು ನೀವು ಇಡಿಯಾಗಿ ಅಗಿಯಬಹುದು ಅಥವಾ ನಿಮ್ಮ ಸಲಾಡ್‌, ಸೂಪ್‌ ಮತ್ತು ಊಟದ ಜೊತೆ ಸೇರಿಸಿಕೊಳ್ಳಬಹುದು.

ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಲು ಕಾಳು ಮೆಣಸು ಸೇವಿಸಿ
ಕಾಳು ಮೆಣಸು
ಸುಷ್ಮಾ ಚಕ್ರೆ
|

Updated on: Jan 16, 2024 | 7:35 PM

Share

ಅಧಿಕ ರಕ್ತದೊತ್ತಡವನ್ನು ತಕ್ಷಣ ನಿಯಂತ್ರಿಸಲು ಕಪ್ಪು ಕರಿ ಮೆಣಸು ಬಳಸಿ. ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡವು ಆರೋಗ್ಯಕ್ಕೆ ಬಹಳ ಹಾನಿ ಉಂಟುಮಾಡುತ್ತದೆ. ರಕ್ತದೊತ್ತಡದ ವ್ಯಾಪ್ತಿಯು 140/90ಕ್ಕಿಂತ ಹೆಚ್ಚಿದ್ದರೆ ನೀವು ವೈದ್ಯರನ್ನು ಭೇಟಿಯಾಗಬೇಕು.

ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳವನ್ನು ಕರಿಮೆಣಸಿನ ಸಹಾಯದಿಂದ ನಿಯಂತ್ರಿಸಬಹುದು. ಕಾಳು ಮೆಣಸನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಇನ್ನೂ ಸಾಕಷ್ಟು ಪ್ರಯೋಜನಗಳಿವೆ.

ಕಪ್ಪು ಕಾಳು ಮೆಣಸನ್ನು ನೀವು ಇಡಿಯಾಗಿ ಅಗಿಯಬಹುದು ಅಥವಾ ನಿಮ್ಮ ಸಲಾಡ್‌, ಸೂಪ್‌ ಮತ್ತು ಊಟದ ಜೊತೆ ಸೇರಿಸಿಕೊಳ್ಳಬಹುದು. ಅಥವಾ ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಕರಿಮೆಣಸಿನ ಪುಡಿಯನ್ನು ಹಾಕಿಕೊಂಡು ಕುಡಿಯುವುದರಿಂದಲೂ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: ರಕ್ತದೊತ್ತಡವನ್ನು ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಬಳಸಿ

ರಕ್ತದೊತ್ತಡವನ್ನು ಕಡಿಮೆ ಮಾಡಲು ಕರಿಮೆಣಸು ಹೇಗೆ ಸಹಾಯ ಮಾಡುತ್ತದೆ?:

ಕರಿಮೆಣಸು ಅಥವಾ ಕಪ್ಪು ಕಾಳು ಮೆಣಸು ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಕ್ಯಾರೋಟಿನ್ ಮತ್ತು ಥೈಮ್‌ನಂತಹ ಪೌಷ್ಟಿಕಾಂಶದ ಅಂಶಗಳನ್ನು ಪೈಪೆರಿನ್ ಜೊತೆಗೆ ಒಳಗೊಂಡಿದೆ. ಇದು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುವ ಸಂಯುಕ್ತವಾಗಿದೆ. ಹೃದಯದ ಕೆಲಸದಲ್ಲಿ ಪೊಟ್ಯಾಸಿಯಮ್ ಅನ್ನು ಹೆಚ್ಚಿಸುವ ಮೂಲಕ ಪೈಪರಿನ್ ಸೋಡಿಯಂ ಇರುವಿಕೆಯನ್ನು ನಿರಾಕರಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರಪಂಚದಾದ್ಯಂತ ಶೇ. 46ರಷ್ಟು ವಯಸ್ಕರಲ್ಲಿ ಅಧಿಕ ರಕ್ತದೊತ್ತಡವಿದೆ. ಆದರೆ ಅವರಿಗೆ ಅದರ ಬಗ್ಗೆ ತಿಳಿದೇ ಇಲ್ಲ. ನಿಮ್ಮ ರಕ್ತದೊತ್ತಡವು 180/120 mmHgಗಿಂತ ಹೆಚ್ಚಾದಾಗ ನೀವು ಈ ಕೆಳಗಿನ ರೋಗಲಕ್ಷಣಗಳನ್ನು ಅನುಭವಿಸಬಹುದು.

– ತಲೆನೋವು

– ಹೃದಯ ಬಡಿತ ಹೆಚ್ಚುವುದು

– ಮೂಗಿನಲ್ಲಿ ರಕ್ತಸ್ರಾವ

ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ 5 ಯೋಗಾಸನಗಳನ್ನು ಮಾಡಿ

ಅಧಿಕ ರಕ್ತದೊತ್ತಡಕ್ಕೆ ಕಾರಣವೇನು?:

ಅಧಿಕ ರಕ್ತದೊತ್ತಡಕ್ಕೆ ಉಪ್ಪು ಅಧಿಕವಾಗಿರುವ ಆಹಾರ ಸೇರಿದಂತೆ ಅನಾರೋಗ್ಯಕರ ಆಹಾರ ಕ್ರಮಗಳು, ದೈಹಿಕ ಚಟುವಟಿಕೆಯ ಕೊರತೆ, ಮದ್ಯಪಾನ, ಧೂಮಪಾನ, ನಿದ್ರಾಹೀನತೆ, ಮೂತ್ರಪಿಂಡದ ಸಮಸ್ಯೆ, ಮಾದಕ ವ್ಯಸನ ಹೀಗೆ ಹಲವು ಕಾರಣಗಳಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ