ಗುಲಾಬಿ ಹೂವುಗಳು ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಆರೋಗ್ಯದ ಕಾರಣದಿಂದಲೂ ಹಲವು ಪ್ರಯೋಜನಗಳನ್ನು ಹೊಂದಿದೆ. ಸಾವಿರಾರು ವರ್ಷಗಳಿಂದ ಆಯುರ್ವೇದ ವೈದ್ಯರು ಗುಲಾಬಿ ಗಿಡವನ್ನು ಗಿಡಮೂಲಿಕೆಯಾಗಿ, ಚಹಾ, ತೈಲ ಮತ್ತು ಚರ್ಮದ ರಕ್ಷಣೆಯ ಕಾರಣಕ್ಕೆ ಬಳಸುತ್ತಿದ್ದಾರೆ. ಗುಲಾಬಿ ಹೂವನ್ನು ಒಣಗಿಸಿ, ಸಂರಕ್ಷಿಸಿಟ್ಟುಕೊಂಡು ಕೂಡ ಬಳಸಬಹುದು. ಅಥವಾ ಅದನ್ನು ಜ್ಯೂಸ್ ಮಾಡಿ, ಭಟ್ಟಿ ಇಳಿಸಿ ಕೂಡ ಬಳಸಬಹುದು. ರೋಸ್ ವಾಟರ್ ಔಷಧಿಯಲ್ಲಿ ಮತ್ತು ಸೌಂದರ್ಯ ಪರಿಕರಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ.
ಆಯುರ್ವೇದದ ಪ್ರಕಾರ, ಗುಲಾಬಿ ನಮ್ಮ ದೇಹದ ಪಿತ್ತವನ್ನು ಸಮತೋಲನಗೊಳಿಸುತ್ತದೆ, ಭಾವನೆಗಳನ್ನು ನಿಯಂತ್ರಿಸುತ್ತದೆ. ಹೃದಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದು ಪಿತ್ತ ಮತ್ತು ವಾತ, ಮನಸ್ಸು, ಉಸಿರಾಟ, ಶ್ವಾಸಕೋಶ ಮತ್ತು ಗಂಟಲನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಗುಲಾಬಿ ಹೃದಯ ಮತ್ತು ಭಾವನೆಗಳನ್ನು ನಿಯಂತ್ರಿಸುತ್ತದೆ.
ಇದನ್ನೂ ಓದಿ: Lychee Side Effects: ಅತಿಯಾಗಿ ಲಿಚಿ ಹಣ್ಣು ತಿಂದರೆ ಏನಾಗುತ್ತೆ?
ಗುಲಾಬಿಯು ದೇಹವನ್ನು ತಂಪುಗೊಳಿಸುವ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಾತ, ಪಿತ್ತ ಮತ್ತು ಕಫಗಳಿಗೆ ಗುಲಾಬಿಯಿಂದ ಅನೇಕ ಪ್ರಯೋಜನಗಳಿವೆ. ಬೇಸಿಗೆಯ ತಿಂಗಳುಗಳಲ್ಲಿ ಪಿತ್ತದ ಅಸಮತೋಲನ ಉಂಟಾದರೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಗುಲಾಬಿಯಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಹೀಗಿವೆ:
– ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ.
– ಕಣ್ಣುಗಳು ಮತ್ತು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.
– ನೋಯುತ್ತಿರುವ ಗಂಟಲು ಮತ್ತು ಕೆಮ್ಮನ್ನು ಶಮನಗೊಳಿಸುತ್ತದೆ.
– ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ದಾಳಿಂಬೆ ಹಣ್ಣಿನಲ್ಲಿದೆ ಪರಿಹಾರ
– ಜೀರ್ಣಾಂಗವನ್ನು ಸರಿಯಾಗಿಸುತ್ತದೆ.
– ನರ, ಕೋಪ ಮತ್ತು ದುಃಖದ ಭಾವನೆಗಳನ್ನು ಶಮನಗೊಳಿಸುತ್ತದೆ.
– ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
– ನೋವು ನಿವಾರಕವಾಗಿದೆ.
– ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.
– ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.
– ನ್ಯೂರೋಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿದೆ.
– ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿದೆ.