
ರಕ್ತದೊತ್ತಡ, ಅಕಾ ಬ್ಲಡ್ ಪ್ರೆಷರ್! ದೇಹದಲ್ಲಿ ಈ ಬ್ಲಡ್ ಪ್ರೆಷರ್ ಅಥವಾ ಬಿಪಿ ಹೆಚ್ಚಾದರೂ ತೊಂದರೆಯೇ, ಕಡಿಮೆಯಾದರೂ ತೊಂದರೆಯೇ. ರಕ್ತದೊತ್ತಡದ (Blood Pressure) ಏರಿಳಿತದ ಸುಳಿವು ತತ್ಕ್ಷಣಕ್ಕೆ ಸಿಕ್ಕೊಲ್ಲ. ಕೆಲವೊಮ್ಮೆ ತಲೆನೋವು ಅಥವಾ ಉಸಿರಾಟದ ತೊಂದರೆ ಇದ್ದಾಗ ಮಾತ್ರ ಬಿಪಿ ಸಮಸ್ಯೆ ಇರಬಹುದು ಎಂಬುದು ಗೊತ್ತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಅಂದರೆ ಹೈ ಬಿಪಿ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮಿದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಜನರು ನಿರಂತರವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲೋಪತಿ ಪದ್ಧತಿಯಲ್ಲಿ, ಅಧಿಕ ಬಿಪಿಗೆ ಕೆಲವು ಔಷಧಿಗಳಿದ್ದು, ಅವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಆಯುರ್ವೇದದಲ್ಲಿ ಈ ಕಾಯಿಲೆಗೆ ಸುಲಭವಾದ ಚಿಕಿತ್ಸೆ ಇದೆ.
ಹರಿದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆಯು ಬ್ಲಡ್ ಪ್ರೆಷರ್ಗೆ ಯಾವ ಔಷಧ ಸೂಕ್ತ ಎಂದು ರಿಸರ್ಚ್ ಮಾಡಿದೆ. ಅದರ ಪ್ರಕಾರ, ಆಯುರ್ವೇದದ ದಿವ್ಯ ಬಿಪಿಗ್ರಿಟ್ ವಟಿ (Divya BPGrit Vati) ಔಷಧವು ಹೈಬಿಪಿ ನಿಯಂತ್ರಣಕ್ಕೆ ಉಪಯುಕ್ತವಾಗಿದೆ. ಈ ಔಷಧದಿಂದ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ. ಅಷ್ಟೇ ಅಲ್ಲ ಬಿಪಿಯಿಂದ ಮುಕ್ತರಾಗಲೂ ಬಹುದು. ಗಮನಿಸಬೇಕಾದ ಸಂಗತಿ ಎಂದರೆ, ಲೋ ಬಿಪಿ ಮತ್ತು ಹೈ ಬಿಪಿ ಎರಡಕ್ಕೂ ಈ ಔಷಧ ಕೆಲಸ ಮಾಡುತ್ತದೆ. ಆಯುರ್ವೇದ ವೈದ್ಯರ ಸಲಹೆ ಪ್ರಕಾರ ಇದನ್ನು ನಿಯಮಿತವಾಗಿ ತೆಗೆದುಕೊಂಡರೆ ಈ ಕಾಯಿಲೆಯನ್ನು ದೂರ ಮಾಡಲು ಸಾಧ್ಯ ಎಂದು ಪತಂಜಲಿ ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ಪತಂಜಲಿಯ ಈ ಔಷಧಿಯನ್ನು ತೆಗೆದುಕೊಂಡರೆ, ಕೊಲೆಸ್ಟ್ರಾಲ್‌ನಿಂದ ಮುಕ್ತಿ ಪಡೆಯಬಹುದು; ಸಂಶೋಧನೆ
ದಿವ್ಯ ಬಿಪಿ ಗ್ರಿಟ್ ವಟಿ ಔಷಧವು ಬ್ಲಡ್ ಪ್ರೆಷರ್ ಸಮಸ್ಯೆಗೆ ಪರಿಣಾಮಕಾರಿ ಎಂಬುದು ಸಂಶೋಧನೆಯಲ್ಲಿ ಸಾಬೀತಾದ ನಂತರ ಪತಂಜಲಿ ಸಂಸ್ಥೆಯು ಬಿಪಿಗ್ರಿಟ್ ವಟಿ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಈ ಔಷಧಿಯು ಬಿಪಿಗೆ ಮಾತ್ರವಲ್ಲದೆ ಆಯಾಸ ಮತ್ತು ತಲೆತಿರುಗುವಿಕೆಯ ಸಮಸ್ಯೆಯನ್ನೂ ನಿವಾರಿಸುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಈ ಔಷಧಿಯು ಹೃದಯ ಬಡಿತವನ್ನು ಸುಧಾರಿಸುವುದರ ಜೊತೆಗೆ ಆತಂಕ, ಭಯ ಮತ್ತು ಚಡಪಡಿಕೆ ಇತ್ಯಾದಿ ಒತ್ತಡ ಆಧಾರಿತ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಸಹಾಯಕವಾಗಬಲ್ಲುದು. ವಿಶೇಷವೆಂದರೆ ಈ ಔಷಧವು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಧಿಕ ರಕ್ತದೊತ್ತಡ ಇರುವ ರೋಗಿಯು ಅದನ್ನು ಸುಲಭವಾಗಿ ಸೇವಿಸಬಹುದು.
ದಿವ್ಯ ಬಿಪಿ ಗ್ರಿಟ್ ವಟಿಯಲ್ಲಿ ಅರ್ಜುನ್, ಗೋಖ್ರು, ಅನಾರ್ದನ, ಬೆಳ್ಳುಳ್ಳಿ, ದಾಲ್ಚಿನ್ನಿ ಮತ್ತು ಗುಗ್ಗಲ್ ಸೇರಿವೆ. ಈ ಆಯುರ್ವೇದ ಗಿಡಮೂಲಿಕೆಗಳನ್ನು ನಿಗದಿತ ಪ್ರಮಾಣದಲ್ಲಿ ಔಷಧದಲ್ಲಿ ಬೆರೆಸಲಾಗಿದೆ. ಈ ಔಷಧಿಗಳು ಬಿಪಿ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿ. ಇವನ್ನು ತೆಗೆದುಕೊಳ್ಳುವುದರಿಂದ, ಬಿಪಿ ಸಮಸ್ಯೆಯನ್ನು ನಿಯಂತ್ರಿಸಬಹುದು. ಈ ಎಲ್ಲಾ ಔಷಧಿಗಳನ್ನು ದಿವ್ಯ ಬಿಪಿಗ್ರಿಟ್ ವಟಿಯಲ್ಲಿ ಒಂದು ವಿಧಾನದ ಪ್ರಕಾರ ನಿಗದಿತ ಪ್ರಮಾಣದಲ್ಲಿ ಬೆರೆಸಲಾಗಿದೆ.
ಇದನ್ನೂ ಓದಿ: ಶ್ವಾಸಕೋಶ ಕಾಯಿಲೆಗಳಿಗೆ ಪತಂಜಲಿ ಔಷಧ; ಬ್ರೋಂಕೋಮ್ ಸರ್ವರೋಗ ನಿವಾರಕವಾ?
ಒಬ್ಬ ರೋಗಿಯು ಎಷ್ಟು ಔಷಧಿಯನ್ನು ತೆಗೆದುಕೊಳ್ಳಬೇಕು ಮತ್ತು ಎಷ್ಟು ಕಾಲ ತೆಗೆದುಕೊಳ್ಳಬೇಕು ಎಂಬುದು ಆ ರೋಗಿಯ ಸ್ಥಿತಿಯ ಮೇಲೆ ಆಧಾರಿತವಾಗಿರುತ್ತದೆ. ರೋಗಿಯನ್ನು ಪರೀಕ್ಷಿಸಿದ ನಂತರವೇ ಆಯುರ್ವೇದ ವೈದ್ಯರು ಇದನ್ನು ನಿರ್ಧರಿಸಬಹುದು. ಆದಾಗ್ಯೂ, ಬಿಪಿ ರೋಗಿಗಳು ಬೆಳಿಗ್ಗೆ ನಿಯಮಿತವಾಗಿ ಎರಡು ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ