ದೈಹಿಕ ಸಂಬಂಧ ಹೊಂದಿದ ತಕ್ಷಣ ಬೆಡ್‌ಶೀಟ್ ಬದಲಾಯಿಸದಿದ್ದರೆ ಬರುತ್ತೆ ಗಂಭೀರ ಕಾಯಿಲೆ
ನಾವು ಪ್ರತಿನಿತ್ಯ ಮಾಡುವ ಕೆಲವು ತಪ್ಪುಗಳು ನಮ್ಮ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಅದರಲ್ಲಿಯೂ ಮನೆಯನ್ನು ಶುಚಿಯಾಗಿ ಇಡುವ ವಿಷಯದಲ್ಲಿ ನಿರ್ಲಕ್ಷ್ಯ ಮಾಡುವುದರಿಂದ ಅರಿವಿಲ್ಲದಂತೆ ಗಂಭೀರ ಕಾಯಿಲೆಗಳು ದೇಹಕ್ಕೆ ಅಂಟಿಕೊಳ್ಳುತ್ತದೆ. ನಿಮಗೆ ಅಲರ್ಜಿ, ಅಸ್ತಮಾ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತಿದ್ದರೆ ಬೆಡ್ ಶೀಟ್ ಬದಲಾಯಿಸುವುದು ಬಹಳ ಒಳ್ಳೆಯದು. ಹಾಗಾದರೆ ಇವುಗಳ ಹಿಂದಿರುವ ಕಾರಣವೇನು? ಬೆಡ್ ಶೀಟ್ ನಿಂದ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಂದು ಕಲೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಮನೆ ಕೆಲಸ ಮಾಡುವುದು ನೀರಸ ಅನುಭವ ನೀಡಿದರೂ ಕೂಡ ಅವುಗಳನ್ನು ನಿರ್ಲಕ್ಷಿಸಬಾರದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಕೆಲಸಗಳನ್ನು ಸುಲಭಗೊಳಿಸಲು ಮಾರುಕಟ್ಟೆಗೆ ವಿವಿಧ ರೀತಿಯ ಸ್ಮಾರ್ಟ್ ಸಾಧನಗಳು (Smart device) ಬಂದಿದೆ. ಹಾಗಾಗಿ ಇವುಗಳ ಬಳಕೆಯಿಂದ ಕೆಲಸಗಳು ಇನ್ನೂ ಸಲೀಸಾಗಿದೆ. ಇಷ್ಟೆಲ್ಲಾ ಅನುಕೂಲವಿದ್ದರೂ ಕೂಡ ಕೆಲವರು ಮನೆಯ ಸ್ವಚ್ಛತೆಗೆ ಹೆಚ್ಚಾಗಿ ಗಮನ ನೀಡುವುದಿಲ್ಲ. ಅದರಲ್ಲಿಯೂ ಮಲಗುವ ಕೋಣೆಯಲ್ಲಿ (Bedroom) ಬಳಸುವ ಬೆಡ್‌ಶೀಟ್ (Bedsheet) ಗಳನ್ನು ತಿಂಗಳುಗಟ್ಟಲೆ ಬದಲಾಯಿಸದೆ ಬಳಸುವ ಅನೇಕರಿದ್ದಾರೆ. ಆದರೆ ಈ ರೀತಿಯ ಅಭ್ಯಾಸ ಆರೋಗ್ಯ (Health) ಸಮಸ್ಯೆಗೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಇದು ಚಿಕ್ಕ ವಿಷಯ ಎನಿಸಿದರೂ ಕೂಡ ಇದರಿಂದ ಉಂಟಾಗುವ ತೊಂದರೆಗಳು ಸಾಕಷ್ಟಿದೆ. ಹಾಗದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಬೆಡ್ ಶೀಟ್‌ಗಳನ್ನು ಬಹಳ ಸಮಯದವರೆಗೆ ಬದಲಾಯಿಸದಿದ್ದರೆ ಏನಾಗುತ್ತದೆ?
ಸಾಮಾನ್ಯವಾಗಿ ನಾವು ಮಲಗುವ ಕೋಣೆ ಸ್ವಚ್ಛವಾಗಿ ಮತ್ತು ಸುಂದರವಾಗಿ ಇದ್ದರೆ ನಿದ್ರೆ ಚೆನ್ನಾಗಿ ಬರುವುದರ ಜೊತೆಗೆ ನಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಆದರೆ ತಿಂಗಳುಗಟ್ಟಲೇ ಹಾಸಿಗೆಯ ಮೇಲೆ ಹಾಸಿರುವಂತಹ ಬೆಡ್‌ಶೀಟ್ ಧೂಳು, ಬೆವರು, ಲಾಲಾರಸ, ತಲೆಹೊಟ್ಟು ಮತ್ತು ದೇಹದ ಸತ್ತ ಚರ್ಮಗಳೆಲ್ಲಾ ಬೆಡ್‌ಶೀಟ್‌ಗೆ ಅಂಟಿಕೊಂಡಿರುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಜೀವನದ ಮೂರನೇ ಒಂದು ಭಾಗವನ್ನು ನಾವು ಹಾಸಿಗೆಯಲ್ಲಿ ಕಳೆಯುವುದರಿಂದ ಇವುಗಳನ್ನು ಕೊಳೆಯಾಗುವುದಕ್ಕಿಂತ ಮುಂಚೆಯೇ ಬಿಸಿ ನೀರಿನಲ್ಲಿ ತೊಳೆಯಬೇಕು. ಸಂಶೋಧನೆಗಳು ಹೇಳುವ ಪ್ರಕಾರ, ಕೊಳಕು ಬೆಡ್ ಶೀಟ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ. ಹಾಗಾಗಿ ಬೆಡ್ ಶೀಟ್‌ಗಳನ್ನು ವಾರಕ್ಕೆ ಒಮ್ಮೆಯಾದರೂ ತೊಳೆಯಬೇಕು ಇಲ್ಲವಾದಲ್ಲಿ ಕೊಳಲು ಬೆಡ್‌ಶೀಟ್ ಗಳಿಂದ ಮೊಡವೆಗಳು, ಅಲರ್ಜಿ ಅಥವಾ ಸೋಂಕುಗಳಿಗೆ ಕಾರಣವಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಧೂಳಿನ ಕಣಗಳು ಗಾಳಿಯೊಂದಿಗೆ ಬೆರೆತು ಅಸ್ತಮಾ ಅಥವಾ ಉಸಿರಾಟದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ರಾತ್ರಿಯಿಡೀ ಈ ಕೊಳಕು ಹಾಸಿಗೆಗಳ ಮೇಲೆ ಮಲಗುವುದರಿಂದ ದೇಹವು ಈ ಹಾನಿಕಾರಕ ಸೂಕ್ಷ್ಮಜೀವಿಗಳಿಗೆ ಒಡ್ಡಿಕೊಳ್ಳುತ್ತದೆ, ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಕೊಳಲು ಬೆಡ್‌ಶೀಟ್ ನಿದ್ರೆಗೆ ಭಂಗ ತರುತ್ತದೆ
ಮಲಗುವ ಕೋಣೆಯ ಬೆಡ್ ಶೀಟ್‌ಗಳು ಕೊಳಕಾಗಿದ್ದರೆ ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಕುಂಠಿತಗೊಳಿಸುತ್ತವೆ. ಬೆವರು ಮತ್ತು ಎಣ್ಣೆಯ ವಾಸನೆ ಮನಸ್ಸಿನ ಶಾಂತಿಯನ್ನು ಹಾಳು ಮಾಡುತ್ತದೆ ಜೊತೆಗೆ ನಿದ್ರಾಹೀನತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದೇ ಸ್ವಚ್ಛವಾಗಿರುವ ಬೆಡ್ ಶೀಟ್‌ಗಳು ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ. ಜೊತೆಗೆ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ನಿಮಗೆ ಅಲರ್ಜಿ ಇದ್ದರೆ, ಬೆಡ್ ಶೀಟ್‌ಗಳನ್ನು ನಿಯಮಿತವಾಗಿ ಬದಲಾಯಿಸಬೇಕು. ಇಲ್ಲವಾದಲ್ಲಿ ಇದು ನಿಮ್ಮ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ ಸೀನು, ಜ್ವರ ಮತ್ತು ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಕಾಲಕಾಲಕ್ಕೆ ನಿಮ್ಮ ಬೆಡ್ ಶೀಟ್‌ಗಳನ್ನು ತೊಳೆಯಬೇಕು. ಅದರಲ್ಲಿಯೂ ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಹಾಸಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇಲ್ಲವಾದರೆ ನಾನಾ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಈ 3 ಮೀನುಗಳು ಉಚಿತವಾಗಿ ಸಿಕ್ಕರು ತಿನ್ನಬೇಡಿ! ಆರೋಗ್ಯ ಹಾಳಾಗುತ್ತೆ
ಕೊಳಕು ಬೆಡ್‌ಶೀಟ್ ಗೊನೊರಿಯಾಕ್ಕೆ ಕಾರಣವಾಗುತ್ತೆ
ಗೊನೊರಿಯಾವು ಲೈಂಗಿಕವಾಗಿ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕಾಗಿದ್ದು ಇದು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಸೋಂಕು ತರುತ್ತದೆ. ಗೊನೊರಿಯಾ ಹೆಚ್ಚಾಗಿ ಮೂತ್ರನಾಳ, ಗುದನಾಳ ಅಥವಾ ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ, ಈ ಬ್ಯಾಕ್ಟೀರಿಯಾವು ಗರ್ಭಕಂಠದ ಸೋಂಕಿಗೆ ಕಾರಣವಾಗುತ್ತದೆ. ಹಾಗಾಗಿ ದೈಹಿಕ ಸಂಬಂಧವನ್ನು ಹೊಂದಿದ ತಕ್ಷಣ ಬೆಡ್‌ಶೀಟ್ ಅನ್ನು ತೊಳೆಯಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




