AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ಬದಿಯಲ್ಲಿ ಮಾಡುವ ಬಜ್ಜಿ ತಿಂದರೆ ಈ ಕಾಯಿಲೆಗಳು ಬರುವುದು ಖಂಡಿತ!

ಬೀದಿ ಆಹಾರಗಳನ್ನು ಸೇವನೆ ಮಾಡುವುದು ಅನೇಕರಿಗೆ ಅಭ್ಯಾಸವಾಗಿರುತ್ತದೆ. ಆದರೆ ನಾಲಿಗೆಯ ರುಚಿಗಿಂತ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಆಹಾರಗಳು ರುಚಿ ನೀಡಬಹುದು, ಆದರೆ ಅವುಗಳ ತಯಾರಿಕೆಯಲ್ಲಿ ಶುಚಿತ್ವ ಮತ್ತು ಗುಣಮಟ್ಟ ಕೊರತೆಯಿದ್ದರೆ, ಆರೋಗ್ಯ ಸಮಸ್ಯೆಗಳು ಬರುವುದು ನಿಶ್ಚಿತ. ಹಾಗಾದರೆ ಹೊರಗಡೆ ಸಿಗುವ ಬಜ್ಜಿ, ಬೋಂಡಾ ಇನ್ನಿತರ ಕರಿದ ಆಹಾರಗಳ ಸೇವನೆ ಮಾಡುವುದರಿಂದ ಉಂಟಾಗುವ ಸಂಭಾವ್ಯ ಸಮಸ್ಯೆಗಳು ಯಾವವು? ಏಕೆ ಹೊರಗಿನ ಆಹಾರ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಬೀದಿ ಬದಿಯಲ್ಲಿ ಮಾಡುವ ಬಜ್ಜಿ ತಿಂದರೆ ಈ ಕಾಯಿಲೆಗಳು ಬರುವುದು ಖಂಡಿತ!
ಸಾಂದರ್ಭಿಕ ಚಿತ್ರImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 13, 2025 | 3:45 PM

Share

ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಬಜ್ಜಿ, ತಿಂಡಿ ತಿನಿಸುಗಳು ಬಹಳ ರುಚಿಕರ ಮತ್ತು ಕೈಗೆಟುಕುವ ದರದಲ್ಲಿ ಸಿಗುತ್ತದೆ. ಹಾಗಾಗಿ ಇವುಗಳನ್ನು ಪದೇ ಪದೇ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಆದರೆ ಇವುಗಳನ್ನು ಆಗಾಗ ಸೇವನೆ ಮಾಡುವುದರಿಂದ ಆರೋಗ್ಯ (Health) ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಈ ಆಹಾರಗಳನ್ನು ತಯಾರಿಸಲು ಬಳಸುವ ಪದಾರ್ಥ, ಅಡುಗೆ ವಿಧಾನಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾದರೆ ಬೀದಿ ಬದಿಯ ವ್ಯಾಪಾರಿಗಳು ಮಾಡುವ ಬಜ್ಜಿ, ಬೋಂಡಾ ಇನ್ನಿತರ ಕರಿದ ಆಹಾರಗಳ (Fried food) ಸೇವನೆ ಮಾಡುವುದರಿಂದ ಉಂಟಾಗುವ ಸಂಭಾವ್ಯ ಸಮಸ್ಯೆಗಳು ಯಾವವು? ಏಕೆ ಹೊರಗಿನ ಆಹಾರ (food) ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ?

ರಸ್ತೆ ಬದಿಯ ಅಂಗಡಿಗಳಲ್ಲಿ ಸ್ವಚ್ಛತೆ ಅಷ್ಟಾಗಿ ಇರುವುದಿಲ್ಲ. ಅವರು ಬಳಸುವ ನೀರು, ಅಡುಗೆ ಪಾತ್ರೆಗಳು ಹೇಗಿರುತ್ತವೆ ಎಂಬುದು ತಿಳಿದಿರುವುದಿಲ್ಲ. ಅವರ ಕೈಗಳು ಸ್ವಚ್ಛವಾಗಿರುವುದಿಲ್ಲ, ಹಾಗಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಆಹಾರದೊಂದಿಗೆ ಬೆರೆಯಬಹುದು. ಬಳಿಕ ಇವು ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ಹೆಪಟೈಟಿಸ್ ಎ ಮತ್ತು ಸಾಲ್ಮೊನೆಲ್ಲಾದಂತಹ ತೀವ್ರವಾದ ಸೋಂಕುಗಳು ಸಹ ಉಂಟಾಗಬಹುದು. ಇನ್ನು ಆಹಾರ ಕರಿದಂತಹ ಎಣ್ಣೆಯ ಗುಣಮಟ್ಟವೂ ಕೂಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಏಕೆಂದರೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದ ಇದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಕಡಿಮೆ- ಗುಣಮಟ್ಟದ ಅಥವಾ ಕಲಬೆರಕೆ ಎಣ್ಣೆಯನ್ನು ಬಳಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಮತ್ತು ಯಕೃತ್ತಿನ ಒತ್ತಡ ಉಂಟಾಗುತ್ತದೆ.

ಇದನ್ನೂ ಓದಿ: Vaginitis: ಮಹಿಳೆಯರೇ ಯೋನಿಯಲ್ಲಿ ಈ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬೇಡಿ

ಇದನ್ನೂ ಓದಿ
Image
ಈ 3 ಮೀನುಗಳನ್ನು ಫ್ರೀ ಕೊಟ್ಟರೂ ತಿನ್ನಬೇಡಿ
Image
ಬೆಲ್ಲದ ಅನ್ನ ಸೇವನೆ ಮಾಡಿದರೆ ಈ ಕಾಯಿಲೆ ಹತ್ತಿರವೂ ಬರಲ್ಲ
Image
ಫಸ್ಟ್ ನೈಟ್ ನಲ್ಲಿ ಮಲ್ಲಿಗೆ ಇಡುವುದು ಇದೆ ಕಾರಣಕ್ಕೆ!
Image
ಪ್ರತಿದಿನ ನೀವು ಮಾಡುವ ಈ ತಪ್ಪುಗಳೇ ರಾತ್ರಿ ನಿದ್ರೆಯನ್ನು ಹಾಳುಮಾಡುತ್ತೆ

ಬಜ್ಜಿ, ಬೋಂಡಾ ತಿಂದರೆ ಈ ಮೂರು ಆರೋಗ್ಯ ಸಮಸ್ಯೆ ಬರುವುದು ನಿಶ್ಚಿತ;

ಹೊರಗಡೆ ಸಿಗುವಂತಹ ಆಹಾರಗಳನ್ನು ಆಗಾಗ ಸೇವನೆ ಮಾಡುವುದರಿಂದ ಮುಖ್ಯವಾಗಿ ಮೂರು ರೀತಿಯ ಅಪಾಯಗಳು ಉಂಟಾಗುತ್ತವೆ. ಒಂದು ತೂಕ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಜೊತೆಗೆ ಬೊಜ್ಜು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇನ್ನು ಈ ಆಹಾರಗಳಲ್ಲಿ ಕಂಡುಬರುವ ಹೆಚ್ಚಿನ ಕೊಬ್ಬು ಮತ್ತು ಉಪ್ಪಿನ ಅಂಶ ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅದಲ್ಲದೆ ಇಂತಹ ಆಹಾರಗಳು ಜೀರ್ಣವಾಗಲು ಸಮಯ ತೆಗೆದುಕೊಳ್ಳುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇನ್ನು ಎಣ್ಣೆ ಮತ್ತು ಮಸಾಲೆಗಳ ಬಳಕೆಯೂ ಸಹ ಅಜೀರ್ಣ, ಎದೆಯುರಿಯಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಜೊತೆಗೆ ಕೆಲವು ಅಂಗಡಿಗಳಲ್ಲಿ ಸಂಸ್ಕರಿಸಿದ ಹಿಟ್ಟು ಮತ್ತು ಕಲಬೆರಕೆ ಪದಾರ್ಥಗಳ ಬಳಕೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಬಳಸುವ ವಸ್ತುಗಳು ಯಾವಾಗಲೂ ತಾಜಾ ಅಥವಾ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಕಲಬೆರಕೆ ಬಣ್ಣ, ಸಂರಕ್ಷಕಗಳನ್ನು ಬಳಸಿರುತ್ತಾರೆ. ಇವು ಚರ್ಮದ ಮೇಲೆ ದದ್ದುಗಳು, ಉಸಿರಾಟದ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ ಹೊರಗಡೆ ಸಿಗುವ ಆಹಾರಗಳ ಸೇವನೆ ಮಾಡುವಾಗ ಎಚ್ಚರವಿರಲಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?