ಎನ್ಸೆಫಾಲಿಟಿಸ್ ಮತ್ತು ಮೆನಿಂಜೈಟಿಸ್ ಎರಡೂ ಮೆದುಳಿನ ಸೋಂಕುಗಳು, ಆದರೆ ಅವು ಮೆದುಳಿನ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ಮೆನಿಂಜೈಟಿಸ್ ಎನ್ನುವುದು ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳಲ್ಲಿನ ಸೋಂಕು. ಎನ್ಸೆಫಾಲಿಟಿಸ್ ಮೆದುಳಿನ ಅಂಗಾಂಶಗಳ ಉರಿಯೂತವಾಗಿದೆ. ಎರಡೂ ಪರಿಸ್ಥಿತಿಗಳು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದು. ಈ ಎರಡೂ ಮೆದುಳಿನ ಸೋಂಕುಗಳು, ಮೆದುಳಿನ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವುದರಿಂದ ರೋಗನಿರ್ಣಯ ಪರೀಕ್ಷೆಗಳು ಒಂದೇ ಆಗಿರುತ್ತದೆ. ಡೆಂಗ್ಯೂ ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು, ಇದು 3 ತಿಂಗಳ ವಯಸ್ಸಿನ ಮಕ್ಕಳಿಂದ 60 ವರ್ಷ ವಯಸ್ಸಿನ ಎಲ್ಲಾ ವಯಸ್ಸಿನ ಜನರಲ್ಲಿ ನರವೈಜ್ಞಾನಿಕ ತೊಡಕುಗಳಿಗೆ ಕಾರಣವಾಗುತ್ತದೆ.
ಎನ್ಸೆಫಾಲಿಟಿಸ್ ಒಮ್ಮೆ ವೈರಸ್ ರಕ್ತದೊಳಗೆ ಪ್ರವೇಶಿಸುತ್ತದ್ದಂತೆ ಅದು ಮೆದುಳಿನ ಅಂಗಾಂಶಗಳಿಗೆ ಹಾನಿಗೊಳಿಸುತ್ತಾ ಹೋಗುತ್ತದೆ. ಈ ರೋಗದ ಬ್ಯಾಕ್ಟೀರಿಯಾ ಮೊದಲು ಮೂಗು ಮತ್ತು ಗಂಟಲಿಗೆ ಹೋಗಿ, ಅಲ್ಲಿಂದ ಮೆದುಳಿನ ಅಂಗಾಂಶಗಳಿಗೆ ಪ್ರವೇಶಿಸುತ್ತದೆ. 4 ರಿಂದ 5 ದಿನಗಳ ನಂತರ ಈ ರೋಗದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ.ಮೊದಲು ಗಂಟಲು ಕೆರೆತವಾಗುತ್ತದೆ.ಅನಂತರ ಮೂಗಿನಲ್ಲಿ ನೀರು ಸುರಿಯುತ್ತದೆ.ವಾಂತಿ, ಅನಂತರ ಜ್ವರ ಬರುತ್ತದೆ.ಬ್ಯಾಕ್ಟೀರಿಯಾ ಮಿದುಳನ್ನು ತಲುಪಿತೆಂದರೆ ಬೆನ್ನುನೋವು ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.ಇದಾದ 2ರಿಂದ 3 ದಿನಗಳಲ್ಲಿ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವೂ ಸಂಭವಿಸಬಹುದು.
ಇದನ್ನೂ ಓದಿ: ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿ ಹೊರ ತೆಗೆದ ಏಮ್ಸ್ ವೈದ್ಯರು
ಎನ್ಸೆಫಾಲಿಟಿಸ್ ಮತ್ತು ಮೆನಿಂಜೈಟಿಸ್ ಎರಡೂ ಮೆದುಳಿನ ಸೋಂಕುಗಳು, ಮೆದುಳಿನ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವುದರಿಂದ ರೋಗನಿರ್ಣಯ ಪರೀಕ್ಷೆಗಳು ಒಂದೇ ಆಗಿರುತ್ತದೆ.
ಚಿಕಿತ್ಸೆ:
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: