ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೌದು, ಈ ಮೆದುಳಿನ ರಕ್ತಸ್ರಾವವು ಮಾರಣಾಂತಿಕ ಸ್ಥಿತಿಯಾಗಿದೆ. ಆದರೆ ಹೆಚ್ಚಿನವರಿಗೆ ಮೆದುಳಿನ ರಕ್ತಸ್ರಾವದಂತಹ ಈ ಗಂಭೀರ ಕಾಯಿಲೆಯ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಈ ಕಾಯಿಲೆಯು ಗಂಭೀರ ಸ್ವರೂಪ ದಾಟಿದ ಮೇಲೆ ಇದರ ಪರಿಣಾಮದ ಬಗ್ಗೆ ಮನವರಿಕೆಯಾಗುತ್ತದೆ.
ಮೆದುಳಿನ ರಕ್ತಸ್ರಾವ ಅಥವಾ ಬೈನ್ ಹೆಮರೇಜ್ ವೆಂದರೆ ಈ ಮೆದುಳಿನೊಳಗೆ ರಕ್ತಸ್ರಾವ ಪ್ರಾರಂಭವಾಗುವುದು. ತಲೆಯ ಒಳಗಿನ ರಕ್ತನಾಳದ ಛಿದ್ರದಿಂದಾಗಿ ರಕ್ತಸ್ರಾವ ಉಂಟಾಗುತ್ತದೆ. ಅನಿಯಂತ್ರಿತ ರಕ್ತಸ್ರಾವವು ತಲೆಬುರುಡೆಯೊಳಗೆ ಅಥವಾ ಮೆದುಳಿನೊಳಗೆ ಎಲ್ಲಿಯಾದರೂ ಸಂಭವಿಸಬಹುದು.
* ತಲೆಗೆ ಗಂಭೀರವಾದ ಗಾಯ, ಕಾರು ಅಪಘಾತ, ಯಾವುದೇ ರೀತಿಯ ತಲೆ ಗಾಯವು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಬಹುದು.
* ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ, ಇದು ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಬಹುದು.
* ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆ ಅಥವಾ ಅಪಧಮನಿಕಾಠಿಣ್ಯದ ಕಾರಣದಿಂದಾಗಿ ಮೆದುಳಿನ ರಕ್ತಸ್ರಾವ ಉಂಟಾಗುತ್ತದೆ.
* ಮೆದುಳಿನ ಅಂಗಾಂಶದ ಮೇಲೆ ಒತ್ತಡವನ್ನು ಉಂಟುಮಾಡುವ ಮೆದುಳಿನ ಗೆಡ್ಡೆ ರಕ್ತಸ್ರಾವಕ್ಕೆ ಕಾರಣವಾಗಬಹುದು.
* ಧೂಮಪಾನ, ಮದ್ಯಪಾನದಂತಹ ಕೆಟ್ಟ ಅಭ್ಯಾಸದಿಂದ ಮೆದುಳಿನ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ.
* ಅಧಿಕ ರಕ್ತದೊತ್ತಡವು ಮೆದುಳಿನ ನರಗಳನ್ನು ಹಾನಿಗೊಳಿಸುತ್ತದೆ. ಇದು ರಕ್ತನಾಳಗಳ ಗೋಡೆಗಳನ್ನು ಹಾನಿಗೊಳಿಸಿ ರಕ್ತಸ್ರಾವಕ್ಕೆ ದಾರಿ ಮಾಡಿಕೊಡುತ್ತದೆ.
ಮೆದುಳಿನ ರಕ್ತಸ್ರಾವಕ್ಕೆ ಸಂಭವಿಸಲು ಕಾರಣಗಳು ಹಲವಾರಿದ್ದರೂ, ಮೆದುಳಿಗೆ ಸರಿಯಾದ ಪ್ರಮಾಣದ ಆಮ್ಲಜನಕ ಸಿಗದೇ ಇದ್ದಾಗ ಮೆದುಳಿನ ಜೀವಕೋಶಗಳು ಸಾಯಲಾರಂಭಿಸುತ್ತವೆ. ಇದು ದೇಹದ ಚಟುವಟಿಕೆಯು ಮೇಲೆ ಸಂಪೂರ್ಣ ಪರಿಣಾಮವನ್ನು ಬೀರುತ್ತದೆ. ಇದನ್ನು ಇಂಟ್ರಾಕ್ರೇನಿಯಲ್ ಹೆಮರೇಜ್ ಅಥವಾ ಸೆರೆಬ್ರಲ್ ಹೆಮರೇಜ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲೂ ಮೂರರಿಂದ ನಾಲ್ಕು ನಿಮಿಷಗಳಿಗಿಂತ ಹೆಚ್ಚು ಕಾಲ ಆಮ್ಲಜನಕದ ಕೊರತೆಯಿದ್ದರೆ, ನಂತರ ಮೆದುಳಿನ ನರಗಳು ಕೆಟ್ಟದಾಗಿ ಪರಿಣಾಮ ಬೀರುತ್ತವೆ. ಕೊನೆಗೆ ಮೆದುಳಿನಲ್ಲಿ ರಕ್ತಸ್ರಾವ ವಾಗುತ್ತದೆ.
ಇದನ್ನೂ ಓದಿ: ನಿಮ್ಮ ಪಾದಗಳಲ್ಲಿ ಕಂಡುಬರುವ ಈ ಲಕ್ಷಣ ಹೃದಯಾಘಾತದ ಸಂಕೇತವಾಗಿರಬಹುದು!
* ದೇಹದ ಯಾವುದೇ ಭಾಗವು ದೌರ್ಬಲ್ಯವಾಗುವುದು
* ತಿನ್ನಲು ಮತ್ತು ಕುಡಿಯಲು ಕಷ್ಟವಾಗುವುದು
* ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುವುದು
* ತೋಳು ಹಾಗೂ ಕಾಳಿನಲ್ಲಿ ಸೆಳೆತ
* ವಿಪರೀತ ತಲೆನೋವು
* ವಾಕರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಚಿಕಿತ್ಸೆಯನ್ನು ಹೇಗೆ ನೀಡಲಾಗುತ್ತದೆ?
ಮೆದುಳಿನ ರಕ್ತಸ್ರಾವದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಿಟಿ ಸ್ಕ್ಯಾನ್ ಮೂಲಕ ಮಿದುಳಿಗಾದ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲಾಗುತ್ತದೆ. ಅದಲ್ಲದೇ ನರ ಪರೀಕ್ಷೆ ಮತ್ತು ಕಣ್ಣಿನ ಪರೀಕ್ಷೆ ಮೂಲಕ ಆಪ್ಟಿಕ್ ನರವನ್ನು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಮೆದುಳಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಮತ್ತು ಊದಿಕೊಂಡಿದ್ದರೆ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
* ಅಧಿಕ ರಕ್ತದೊತ್ತಡವಿದ್ದವರು ಆಗಾಗ ಬಿಪಿಯನ್ನು ಪರೀಕ್ಷಿಸುತ್ತಿರಬೇಕು.
* ಅಧಿಕ ಕೊಲೆಸ್ಟ್ರಾಲ್ ವಿದ್ದರೂ ಕೊಲೆಸ್ಟ್ರಾಲ್ ಹಾಗೂ ತೂಕವನ್ನು ನಿಯಂತ್ರಣದತ್ತ ಗಮನ ಹರಿಸುವುದು.
* ಆಲ್ಕೋಹಾಲ್ ಸೇವನೆಯನ್ನು ದೂರವಿರುವುದು.
* ಆರೋಗ್ಯಕರ ಆಹಾರ ಮತ್ತು ದೈನಂದಿನ ವ್ಯಾಯಾಮವನ್ನು ಅಭ್ಯಾಸ ರೂಢಿಸಿಕೊಳ್ಳಿ.
* ಮಧುಮೇಹ ಹೊಂದಿದ್ದರೆ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ